Ramayana Movie: ನಾಯಕಿ ಸೀತೆ, ವಿಲನ್​ ಕೈಕೇಯಿಗೆ ಕನ್ನಡದಲ್ಲಿ ದನಿ ಕೊಟ್ಟ ಮಹಾನಟಿಯರು ಇವರೇ ನೋಡಿ

Published : Nov 09, 2026, 12:56 PM IST
Ashika Sharma and Veena Sundar

ಸಾರಾಂಶ

ಯಶ್ ಅಭಿನಯದ 'ರಾಮಾಯಣ' ಚಿತ್ರದ ಕನ್ನಡ ಅವತರಣಿಕೆಯಲ್ಲಿ ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿಗೆ ಆಶಿಕಾ ಶರ್ಮಾ ಧ್ವನಿಯಾಗಿದ್ದಾರೆ. ಹಾಗೆಯೇ ಕೈಕೇಯಿ ಪಾತ್ರದ ಲಾರಾ ದತ್ತಾಗೆ ಹಿರಿಯ ನಟಿ ವೀಣಾ ಸುಂದರ್ ದನಿ ನೀಡಿದ್ದಾರೆ.

ಬೆಂಗಳೂರು: ಯಶ್​ ರಾವಣನಾಗಿ ಅಬ್ಬರಿಸಿರುವ ರಾಮಾಯಣ ರಾಮಾಯಣ: ಭಾಗ 1 (Ramayana: Part 1) ಈಗ ಸಕತ್​ ಸದ್ದು ಮಾಡುತ್ತಿದೆ. ಮೂಲತಃ ಹಿಂದಿ ಭಾಷೆಯ ಭವ್ಯ ಪೌರಾಣಿಕ ಮಹಾಕಾವ್ಯ ಚಿತ್ರವಾಗಿರುವ ರಾಮಾಯಣ, ಭಾರತದಾದ್ಯಂತ ಮತ್ತು ಜಾಗತಿಕವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಪ್ರಮುಖ ಭಾಷೆಗಳಿಗೆ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಮಾತ್ರವಲ್ಲದೇ ವಿದೇಶದಲ್ಲಿಯೂ ರಾಮಾಯಣ ಮಿಂಚುತ್ತಿದ್ದು, ಕೆಲವು ದಾಖಲೆಗಳತ್ತ ದಾಪುಗಾಲು ಹಾಕುತ್ತಿದೆ.

ಇದರ ನಡುವೆಯೇ, ಇದೀಗ ಕುತೂಹಲದ ವಿಷಯವೊಂದು ರಿವೀಲ್​ ಆಗಿದೆ. ಅದೇನೆಂದರೆ, ಸೀತೆಯಾಗಿ ನಟಿಸಿರುವ ನಟಿ ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ದನಿ ನೀಡಿರುವವರು ಯಾರು ಎನ್ನುವ ಗುಟ್ಟು ರಟ್ಟಾಗಿದೆ. ಇವರೇ ಮಹಾನಟಿ ರಿಯಾಲಿಟಿ ಷೋ ಖ್ಯಾತಿಯ ಆಶಿಕಾ ಶರ್ಮಾ (Ashika Sharma). ಈ ಕುರಿತು ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಖುದ್ದು ವಿಷಯವನ್ನು ತಿಳಿಸಿದ್ದಾರೆ. ರಾಧಾಕೃಷ್ಣದಲ್ಲಿ ರಾಧೆಯಾಗಿ, ಸೀತೇ ರಾಮದಲ್ಲಿ ಸೀತೆಯಾಗಿ, ಇಂದು ಮತ್ತೊಮ್ಮೆ ಮಹಾಕಾವ್ಯ ರಾಮಾಯಣದಲ್ಲಿ ಸೀತೆಗೆ ಧ್ವನಿಯಾಗಿರುವುದು ನಿಜಕ್ಕೂ ನನ್ನ ಕಲಾ ಪಯಣದ ಸುಂದರ ಪೂರ್ಣವೃತ್ತದ ಕ್ಷಣ. ಸಾಯಿ ಪಲ್ಲವಿ ಅವರ ಮುಗ್ಧತೆ, ಸಹಜತೆ ಮತ್ತು ಅದ್ಭುತ ಅಭಿನಯ ಈ ಅನುಭವವನ್ನು ಇನ್ನಷ್ಟು ವಿಶೇಷವಾಗಿಸಿದೆ. ಈ ಆಶೀರ್ವಾದಕ್ಕಾಗಿ ವಿಶ್ವಕ್ಕೂ, ಯಶ್ ಸರ್, ನಮಿತ್ ಮಲ್ಹೋತ್ರ ಸರ್ ಹಾಗೂ ಇಡೀ ರಾಮಾಯಣ ತಂಡಕ್ಕೂ ಹೃದಯಪೂರ್ವಕ ಧನ್ಯವಾದಗಳು ಎಂದು ಆಶಿಕಾ ಅವರು ಬರೆದುಕೊಂಡಿದ್ದಾರೆ.

ಇವರು ಇದಾಗಲೇ ಹಲವು ನಟಿಯರಿಗೆ ದನಿ ನೀಡಿದ್ದಾರೆ. ವಿಕ್ರಾಂತ್​ ರೋಣದ ನಾಯಕಿ ಜಾಕ್ವೆಲಿನ್ ಫರ್ನಾಂಡೀಸ್​ ಅವರಿಗೆ ದನಿ ನೀಡಿದಾಗ ಸಕತ್​ ಫೇಮಸ್​ ಆಗಿದ್ದರು. ಮದವೇರಿಸೋ ಮದನಾರಿಯ ನೋಡಿ ಮಿಡಿದವರೆಷ್ಟು, ಮಡಿದವರೆಷ್ಟು... ಡೈಲಾಗ್​ ಅಂತೂ ಸಕತ್​ ಫೇಮಸ್​ ಆಗಿದ್ದು, ಅದು ಇವರ ದನಿಯಲ್ಲಿಯೇ ಬಂದಿರುವುದು ವಿಶೇಷ. ಇದೀಗ ಸೀತೆಗೆ ದನಿಯಾಗಿದ್ದಾರೆ.

ಕೈಕೇಯಿಗೆ ದನಿ ನೀಡಿದ ವೀಣಾ ಸುಂದರ್​

ಇನ್ನು ರಾಮಾಯಣ ಮೂವಿಯಲ್ಲಿ ಕೈಕೇಯಿ ಆಗಿ ನಟಿ ಲಾರಾ ದತ್ತಾ (Lara Dutta)​ ನಟಿಸಿದ್ದಾರೆ. ಇವರಿಗೆ ದನಿ ನೀಡಿದವರು ಖ್ಯಾತ ಹಿರಿಯ ನಟಿ ವೀಣಾ ಸುಂದರ್ ಅವರು. ದಶಕಗಳಿಂದ ರಂಗಭೂಮಿ,ಕಿರುತೆರೆ ಮತ್ತು ಹಿರಿತೆರೆಯಲ್ಲಿ ಇವರು ಅಭಿನಯಿಸುತ್ತಿದ್ದು, ಕಿರುತೆರೆ ವೀಕ್ಷಕರಿಗೆ ಇವರ ಮುಖ ಚಿರಪರಿಚಿತ. ಪತಿ ಸುಂದರ್​ ವೀಣಾ ಜೊತೆ ಸೇರಿ ಹಲವು ಸಿನಿಮಾ, ಸೀರಿಯಲ್​ಗಳಲ್ಲಿಯೂ ನಟಿಸಿರುವ ಖ್ಯಾತಿ ಇವರದ್ದು. ಸದ್ಯ ಇವರು ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ವಿಲನ್​ ಮಾಳವಿಕಾ ಆಗಿ ಅಭಿನಯಿಸುತ್ತಿದ್ದಾರೆ. ಇದಾಗಲೇ ಇವರು ದಿಬ್ಬಣ, ಮಹಾದೇವಿ, ಮರ್ಯಾದೆ ರಾಮಣ್ಣ, ಸರಳ ಸುಬ್ಬರಾವ್​, ಬಿಸಿಲು ಚುಕ್ಕಿ... ಸೇರಿದಂತೆ ಹಲವು ಸೀರಿಯಲ್​, ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕೈಕೇಯಿಗೆ ದನಿ ಕೊಟ್ಟಿದ್ದಾರೆ.

ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ನಟಿ, ಜನಮೆಚ್ಚುಗೆ ಪಡೆಯುತ್ತಿರುವ "ರಾಮಾಯಣ " ದ ಕನ್ನಡ ಅವೃತ್ತಿಯಲ್ಲಿನ ಕೈಕೇಯಿ ಪಾತ್ರಕ್ಕೆ ನಾನು ದನಿಯಾಗಿರುವುದು ನನಗೆ ಖುಷಿ ಕೊಟ್ಟ ಸಂಗತಿ. ಲಾರದತ್ತ ಅವರ ಅದ್ಭುತ ಭಾವ ನನ್ನ ಮಾತುಗಳ ತೂಕ ಹೆಚ್ಚಿಸಿತು. ಇದಕ್ಕಾಗಿ ನಟರಾಜ ಹಾಗು ಸೂರಿ ಸರ್ ಅವರಿಗೆ ನನ್ನ ವಂದನೆಗಳು ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗ 'ಆಯುಷ್‌' ಸಿನಿಮಾದಿಂದ ನಿರ್ದೇಶಕ ಪುರುಷೋತ್ತಮ್‌ ಬದಲಾವಣೆಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಯಶ್ ಬಗ್ಗೆ ಅಪ್ಪು ನುಡಿದಿದ್ದ ಆ ಭವಿಷ್ಯ ನಿಜವಾಯ್ತು! ಪುನೀತ್ ಸುವರ್ಣ ನ್ಯೂಸ್ ಸಂದರ್ಶನ ವೈರಲ್!