
ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ (Rakshitha) ಒಂದು ಕಾಲದಲ್ಲಿ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಧೂಳೆಬ್ಬಿಸಿದ ನಟಿ. ತಮ್ಮ ನಟನೆ, ಮುದ್ದಾದ ಮುಖ, ಸೌಂದರ್ಯ, ಗ್ಲಾಮರಸ್ ಪಾತ್ರಕ್ಕೆ ಜೀವ ತುಂಬುವ ರಕ್ಷಿತಾ, ಅಂದು ಎಲ್ಲಾ ಹುಡುಗರ ಮೋಸ್ಟ್ ಫೇವರಿಟ್ ಸ್ಟಾರ್ ಆಗಿದ್ದಂತೂ ನಿಜಾ. ಸದ್ಯ ಸಿನಿಮಾ ನಟನೆಯಿಂದ ದೂರ ಉಳಿದಿರುವ ರಕ್ಷಿತಾ, ಪ್ರೊಡಕ್ಷನ್ ಮಾತ್ರ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಲಾಯರ್ ಜಗದೀಶ್ ಮಾತಿಗೆ ನಾಚಿಕೊಂಡ ರಕ್ಷಿತಾ: 'ನಾಟಿ ಆ್ಯಟ್ ಫಾರ್ಟಿ ಸರ್ ನೀವು' ಎಂದ ನಟಿ!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತಾ ಅವರ ಹಳೆಯ ತಮಿಳು ಹಾಡೊಂದು ವೈರಲ್ ಆಗ್ತಿದೆ. ಇದು ತಮಿಳಿನ ಧಮ್ ಸಿನಿಮಾದ ಹಾಡು. ಈ ಸಿನಿಮಾದಲ್ಲಿ ಸಿಲಂಬರಸ್ (SIlambarasan) ನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಕನ್ನಡದ ಅಪ್ಪು ಸಿನಿಮಾದ (Appu Film) ರಿಮೇಕ್ ಆಗಿತ್ತು. ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಯಲ್ಲೂ ಸಹ ರಕ್ಷಿತಾ ಸಿನಿಮಾ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾ ಮೂರು ಭಾಷೆಯಲ್ಲೂ ಸೂಪರ್ ಹಿಟ್ ಆಗಿತ್ತು. ಅಲ್ಲದೇ ಸಿನಿಮಾದ ಹಾಡುಗಳು ಸಹ ಹಿಟ್ ಆಗಿತ್ತು.
ತಂದೆ 2ನೇ ಮದುವೆ ಆದಾಗ ಪಾರ್ವತಮ್ಮ ರಾಜ್‌ಕುಮಾರ್ ಕರೆ ಮಾಡಿ ಹೇಳಿದ್ದ ಮಾತು ಮರೆಯಲ್ಲ: ರಕ್ಷಿತಾ ಪ್ರೇಮ್
ಸದ್ಯ ವೈರಲ್ ಆಗುತ್ತಿರುವ ಚಾಣಕ್ಯ ಚಾಣಕ್ಯ ಎನ್ನುವ ಹಾಡು 2003ರಲ್ಲಿ ಸಿನಿರಸಿಕರ ಮೆಚ್ಚಿನ ಹಾಡುಗಳಲ್ಲಿ ಒಂದಾಗಿತ್ತು. ಈ ಹಾಡಿನಲ್ಲಿ ರಕ್ಷಿತಾ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಟ್ಯೂಬ್ ಟಾಪ್ ಹಾಗೂ ಬಿಳಿ ಶಾರ್ಟ್ಸ್ ನಲ್ಲಿ ರಕ್ಷಿತಾ ಗ್ಲಾಮರಸ್ (glamorous) ಆಗಿ ಕಾಣಿಸುತ್ತಿದ್ದಾರೆ. ಈ ಹಾಡನ್ನು ಜಪಾನ್, ಚೀನಾದಲ್ಲೆಲ್ಲೋ ಶೂಟಿಂಗ್ ಮಾಡಲಾಗಿದೆ. ಇದೀಗ ವೈರಲ್ ಆಗುತ್ತಿರುವ ಹಾಡನ್ನು ನೋಡಿ ಸಿನಿರಸಿಕರು ಮೆಚ್ಚುಗೆ ಸೂಚಿಸಿದ್ದಾರೆ. 90ರ ದಶಕದ ಮೋಸ್ಟ್ ಫೇವರಿಟ್ ಹಾಡು, ನಮ್ಮ ಬೆಳಗ್ಗೆ ಆಗುತ್ತಿದ್ದಿದ್ದೇ ಈ ಹಾಡನ್ನು ಕೇಳಿ, ತುಂಬಾನೆ ಸುಂದರವಾದ ಹಾಡು. ಜೊತೆಗೆ ಸಿಂಬು ಮತ್ತು ರಕ್ಷಿತಾ ಕಾಂಬಿನೇಶನ್ ಸೂಪರ್ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.