ಯಶ್ ಕುದಿಯುತ್ತಿದ್ದಾರೆ, ಬೇಯುತ್ತಿದ್ದಾರೆ, ನರಳುತ್ತಿದ್ದಾರೆ: ಯಾಕೆ ಈ ಸುದ್ದಿ ಹಬ್ಬಿದೆ?

By Shriram Bhat  |  First Published Dec 25, 2024, 7:46 PM IST

ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಬೇಸರಗೊಂಡಿದ್ದಾರೆ ಎಂಬ ಮಾತು ವೈರಲ್ ಆಗುತ್ತಿದೆ. ಆದರೆ, ಈ ಮಾತನ್ನು ನಟ ಯಶ್ ಯಾವಾಗ ಯಾರಿಗೆ ಹೇಳಿದ್ದಾರೆ ಎಂಬ ಬಗ್ಗೆ ಎಲ್ಲೂ ದಾಖಲೆ ಇಲ್ಲ. ಟಾಕ್ಸಿಕ್ ಸಿನಿಮಾ ತಂಡವು ಚಿತ್ರದ ಶೂಟಿಂಗ್ ಸೆಟ್ ಹಾಕಲು..


'ನಾನು ಸಿನಿಮಾಕ್ಕಾಗಿ ಮರ ಕಡಿಯುವಷ್ಟು ಮೂರ್ಖನಾ? ನಮ್ಮವರೇ ನಮಗೆ ಶತ್ರುಗಳಾ? ರಾಕಿಂಗ್ ಸ್ಟಾರ್ ಯಶ್ ಮುನಿಸು ಹೊರಬಿತ್ತಾ? ಯಶ್ ಮನಸ್ಸಿನಲ್ಲೇ ಒಂದು ಕಡೆ ಕುದಿಯುತ್ತಿದ್ದಾರೆ, ಮತ್ತೊಂದು ಕಡೆ ಬೇಯುತ್ತಿದ್ದಾರೆ, ಮಗದೊಂದು ಕಡೆ ನರಳುತ್ತಿದ್ದಾರೆ. ಕಾರಣ, ಟಾಕ್ಸಿಕ್ ಹಗರಣ. ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಟ್ಟಿತಲ್ಲಾ! ಕನ್ನಡದ ಜನಕ್ಕೆ ಹಾಗೂ ಕನ್ನಡದ ನೆಲಕ್ಕೆ ಒಳ್ಳೆಯದಾಗಲಿ ಎಂದು ಮಾಡಿದ್ದು ಅಪರಾಧದ ರೂಪ ಯಾಕೆ ಪಡೆಯಿತು?'

ಹೀಗಂತ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಬೇಸರಗೊಂಡಿದ್ದಾರೆ ಎಂಬ ಮಾತು ವೈರಲ್ ಆಗುತ್ತಿದೆ. ಆದರೆ, ಈ ಮಾತನ್ನು ನಟ ಯಶ್ ಯಾವಾಗ ಯಾರಿಗೆ ಹೇಳಿದ್ದಾರೆ ಎಂಬ ಬಗ್ಗೆ ಎಲ್ಲೂ ದಾಖಲೆ ಇಲ್ಲ. ಟಾಕ್ಸಿಕ್ ಸಿನಿಮಾ ತಂಡವು ಚಿತ್ರದ ಶೂಟಿಂಗ್ ಸೆಟ್ ಹಾಕಲು ನೂರಾರು ಮರಗಳನ್ನು ಕಡಿದಿದೆ ಎಂಬ ಆರೋಪ ಎದುರಿಸಿದ್ದು ಗೊತ್ತೇ ಇದೆ. ಕೊನೆಗೆ, ಏನೂ ಆಗಿಲ್ಲ, ಯಾವ ಮರವನ್ನೂ ಕಡಿದಿಲ್ಲ ಎಂದು ಕೋರ್ಟ್ ಹೇಳಿ ಕೇಸ್ ಕ್ಲೋಸ್ ಆಗಿದೆ. ಆದರೆ, ಆರೋಪ ಬಂದಿದ್ದೇ ಯಶ್ ಅವರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. 

Tap to resize

Latest Videos

undefined

ಮುಕುಂದನ 'ಯುಐ' ಸಿನಿಮಾ ಬಗ್ಗೆ 'ಮ್ಯಾಕ್ಸ್‌' ಮುರಾರಿ ಪೋಸ್ಟ್ ಮಾಡಿ ಹೇಳಿದ್ದೇನು?

ಆದರೆ, ಯಶ್ ಈ ತರಹದ ಯಾವುದೇ ಮಾತನ್ನು ಹೇಳಿದ್ದು ಎಲ್ಲೂ ದಾಖಲೆ ಸಮೇತ ಬಯಲಾಗಿಲ್ಲ. ಆದರೆ ಇದು ಸೋಷಿಯಲ್ ಮೀಡಿಯಾಗಳಲ್ಲಿ ಕಾಡ್‌ ರೂಪದಲ್ಲಿ, ಶಾರ್ಟ್ಸ್ ಮೂಲಕವೂ ಹರಿದಾಡುತ್ತಿದೆ. ಯಶ್ ತಮ್ಮ ಆಪ್ತರ ಬಳಿ ಹೀಗೇನಾದ್ರೂ ಹೇಳಿದ್ರಾ? ಅಥವಾ, ಮೀಡಿಯಾದಲ್ಲಿ 'ಆಫ್‌ ದಿ ರೆಕಾರ್ಡ್' ಏನಾದ್ರೂ ಈ ಮ್ಯಾಟರ್ ಇದ್ದು, ಬಳಿಕ ಅದು ಮೇಲೆದ್ದು ಬಂತಾ? ಈ ಬಗ್ಗೆ ಕನ್ಫಮೇರ್ಶನ್ ಇಲ್ಲ. ಆದರೆ, ಶೇರ್ ಆಗುತ್ತಿರುವ ಈ ಪೋಸ್ಟ್‌ ಪರ ಕಾಮೆಂಟ್‌ಗಳು ಹರಿದುಬರುತ್ತಿವೆ. 

ಈ ಸುದ್ದಿಗೆ ಹಲವರು ನಟ ಯಶ್ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ. 'ಹೌದು, ನಟ ಯಶ್ ಅವರು ಸೆಟ್‌ ಹಾಕಲು ಕನ್ನಡ ನೆಲವನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಅವರು ಹಾಗೂ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರತಂಡದ ಒಳ್ಳೆಯ ಉದ್ದೇಶವೇ ಆಗಿದೆ. ಕನ್ನಡ ನೆಲಕ್ಕೆ ಬಾಡಿಗೆ ಸಿಗುತ್ತದೆ, ಕನ್ನಡಿಗರಿಗೇ ಕೆಲಸ ಸಿಗುತ್ತದೆ, ಹಾಗೆ ಮುಂದೆ ಸಿನಿಮಾ ನೋಡಿದಾಗ ಕನ್ನಡದ ಸ್ಥಳವೇ ಪ್ರಸಿದ್ಧಿ ಪಡೆಯುತ್ತದೆ ಎಂಬ ಸದುದ್ಧೇಶವೇ ಕೆಲಸ ಮಾಡಿತ್ತು. 

ಕಿಚ್ಚ ಸುದೀಪ್ 'ಮ್ಯಾಕ್ಸ್‌'ಗೆ ಬಂದ ಪ್ರತಿಕ್ರಿಯೆ ಏನು? ಸೋಲು-ಗೆಲುವಿನ ಲೆಕ್ಕಾಚಾರ ಶುರು!

ಆದರೆ, ಮರ ಕಡಿದ ಆರೋಪ ಬಂದು, ಕೇಸ್ ದಾಖಲಾಗಿ, ಕೋರ್ಟ್‌ಗೆ ಅಲೆದಾಡುವ ಸಂದರ್ಭ ಬಂದಿದ್ದು, ಶೂಟಿಂಗ್ ಅಷ್ಟು ದಿನ ನಿಂತು ನಷ್ಟವಾಗಿದ್ದು ಎಲ್ಲವೂ ಚಿತ್ರತಂಡಕ್ಕೆ ತಲೆನೋವು ತಂದಿದ್ದು ಮಾತ್ರವಲ್ಲ, ಬೇಸರಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಹಬ್ಬುತ್ತಿರುವ ಈ ಸುದ್ದಿ ನಿಜವೇ? ಈ ಬಗ್ಗೆ ಸಹಜವಾಗಿಯೇ ಚಿತ್ರತಂಡಕ್ಕೆ ಖಂಡಿತ ಬೇಸರ ಆಗಿರುತ್ತದೆ. ಆದರೆ, ಆ ಬೇಸರವನ್ನು, ಕೋಪ-ತಾಪವನ್ನು ಟಾಕ್ಸಿಕ್ ಟೀಮ್ ಹೊರಹಾಕಿದ್ದು ನಿಜವೇ? ಹೌದು ಎಂದಾದರೆ ಎಲ್ಲಿ? ಇವೆಲ್ಲವೂ ಇನ್ನಷ್ಟೇ ಕನ್ಫರ್ಮ್‌ ಆಗಬೇಕಿದೆ. 

click me!