ಖ್ಯಾತ ನಟಿಯೊಂದಿಗೆ 2ನೇ ಮದುವೆಯ ಕಥೆ ಬಿಚ್ಚಿಟ್ಟ ಕಿಚ್ಚ ಸುದೀಪ್!

By Sathish Kumar KH  |  First Published Dec 25, 2024, 7:21 PM IST

ಕಿಚ್ಚ ಸುದೀಪ್ ಅವರು ಎರಡನೇ ಮದುವೆಯಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಸ್ವತಃ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ 'ಹೆಂಡತಿ' ಇನ್ನೂ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ.


ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ದಕ್ಷಿಣ ಭಾರತದ ಖ್ಯಾತ ನಟಿಯೊಂದಿಗೆ ಸಂಬಂಧವಿದ್ದು, ಅವರನ್ನು ಕರೆದುಕೊಂಡು ಹೋಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂತು. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ 'ಹೌದು ನಾನು ಮದುವೆ ಮಾಡಿಕೊಂಡಿದ್ದೇನೆ. ಆದರೆ, ಇದವರೆಗೂ ನಾನು ಮದುವೆ ಮಾಡಿಕೊಂಡಿರುವ ನಟಿ ನಮ್ಮ ಮನೆಗೆ ಬಂದಿಲ್ಲ' ಎಂದು ಸ್ವತಃ ಕಿಚ್ಚ ಸುದೀಪ ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮಿರ್ಚಿ ಕನ್ನಡ (mirchi_kannada) ಎಂಬ ಪೇಜ್‌ನಿಂದ ಕಿಚ್ಚ ಸುದೀಪ್ ಅವರನ್ನು ಸಂದರ್ಶನ ಮಾಡಿದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಸಂದರ್ಶಕರು ಸುದೀಪ್ ಅವರಿಗೆ ಇನ್ನೊಂದು ಮದುವೆ ಆಗಿರುವ ಸುದ್ದಿ ಪತ್ರಿಕೆಯಲ್ಲಿ ಪಬ್ಲಿಷ್ ಆಗಿದ್ದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಕೂಡ ಹೌದು, ನಾನು ಮದುವೆ ಮಾಡಿಕೊಂಡಿದ್ದೇನೆ' ಎಂದು ಹೇಳಿಕೊಂಡಿರುವುದು ಅವರ ಅಭಿಮಾನಿಗಳು ಶಾಕ್ ಉಂಟಾಗುವಂತಿದೆ. ಆದರೆ, ಆ ಸಂದರ್ಶನದ ಪೂರ್ಣ ವಿಡಿಯೋ ನೋಡಿದಾಗ ಸತ್ಯಾಂಶ ಏನೆಂದು ತಿಳಿಯುತ್ತದೆ.

Tap to resize

Latest Videos

undefined

ಮಿರ್ಚಿ ಕನ್ನಡ ಸಂದರ್ಶಕ: ಕಿಚ್ಚ ಸುದೀಪ್‌ಗೆ ನಟಿಯೊಂದಿಗೆ ಸಂಬಂಧವಿದ್ದು, ಅವರನ್ನು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಪ್ರಕಟವಾಗಿದೆ.
ಕಿಚ್ಚ ಸುದೀಪ: ಹೌದು, ನಾನು ಮದುವೆ ಮಾಡಿಕೊಂಡಿದ್ದೇನೆ. ಆದರೆ, ಇದವರೆಗೂ ನಾನು ಮದುವೆಯಾಗಿರುವ ನಟಿ ಮನೆಗೆ ಬಂದಿಲ್ಲ.
ಸಂದರ್ಶಕ: ಯಾರು ಆ ನಟಿ? ಎಲ್ಲಿ ಮದುವೆ ಮಾಡಿಕೊಂಡಿದ್ದೀರಿ?
ಕಿಚ್ಚ ಸುದೀಪ: ನನಗೆ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ಮದುವೆ ಆಗಿದೆ. ಅವರವರೇ ಮದುವೆ ಮಾಡಿದ್ದಾರೆ. ಇಲ್ಲಿ ನಾನು ತಾಳಿಯನ್ನೂ ಕಟ್ಟಿಲ್ಲ, ದೇವಸ್ಥಾನಕ್ಕೂ ಹೋಗಿಲ್ಲ. ಆದರೂ ನನ್ನ ಮದುವೆ ಆಗಿದೆ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
ಸಂದರ್ಶಕ: ಇದು ವರ್ಚುವಲ್ ಮದುವೆನಾ?
ಕಿಚ್ಚ ಸುದೀಪ: ಗೊತ್ತಿಲ್ಲ.., ಒಂದು ವೇಳೆ ನನಗೆ ವಿಡಿಯೋ ತೋರಿಸಿ ತಾಳಿ ಕಟ್ಟಿಕೊಂಡಿದ್ದರೂ ಓಕೆ ಎನ್ನಬಹುದಾಗಿತ್ತು. ನಾನು ಇನ್ನೊಂದು ಮದುವೆ ಮಾಡಿಕೊಂಡಿದ್ದೇನೆ ಎಂಬ ಸುದ್ದಿ ನಾನು ಕೇಳಿದಾಗ ವರ್ಚುವಲ್ ವ್ಯವಸ್ಥೆ ಕೂಡ ಇರಲಿಲ್ಲ. ಅದು ಇದ್ದಿದ್ದರೆ ಅದನ್ನಾದರೂ ನಂಬಬಹುದಿತ್ತು. 

ಇದನ್ನೂ ಓದಿ: ಕಿಚ್ಚ ಸುದೀಪ್ with ಅಜಿತ್ ಹನಮಕ್ಕನವರ್: ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಖಾಸ್​​ಬಾತ್

ಕಿಚ್ಚ ಸುದೀಪ ಪೇಪರ್‌ನಲ್ಲಿ ಬಂದ ಸುದ್ದಿಯ ಸಾರಾಂಶ ವಿವರಣೆ: 
ನಾನು ಒಂದು ದಿನ ಬೆಳಗ್ಗೆ ಪೇಪರ್ ಓದುತ್ತಿರುತ್ತೇನೆ. ನನ್ನ ಪಕ್ಕದಲ್ಲಿ ಹೆಂಡತಿ ಪ್ರಿಯಾ ಕೂಡ ಇರುತ್ತಾರೆ. ಆಗ ಪೇಪರ್‌ನಲ್ಲಿದ್ದ ಸುದ್ದಿ ಓದುತ್ತಾ ಹೋದಾಗ ಕನ್ನಡದ ಒಬ್ಬ ಕಲಾವಿದ ಹೀಗೆ ಮದುವೆಯಾಗಿ ಓಡಿ ಹೋಗಿದ್ದಾನೆ ಎಂತೆಲ್ಲಾ ಬರೆದಿತ್ತು. ನಾನು ಆ ಸುದ್ದಿಯನ್ನು ಸೀರಿಯಸ್ ಆಗಿ ಓದುತ್ತಾ, ಈ ಬಗ್ಗೆ ಹೆಂಡತಿ ಪ್ರಿಯಾಗೂ ಹೇಳ್ತೀನಿ. ಯಾರು ಆ ಕಲಾವಿದ ಎಂದು ಕೊನೆಯ ಸಾಲಿನಲ್ಲಿ ಓದುವಾಗ ಅದು ನಾನೇ.. ಇದೇನಪ್ಪಾ ಇದು, ನನ್ನ ಹೆಂಡತಿ ಪಕ್ಕದಲ್ಲಿದ್ದಾರೆ.. ನನಗೆ ಗೊತ್ತಿಲ್ಲದೆ ನನಗೆ ಪೇಪರ್‌ನವರು ದೇವಸ್ಥಾನದಲ್ಲಿ ಮದುವೆ ಮಾಡಿಸಿಬಿಟ್ಟಿದ್ದಾರೆ.

ನಾನು ಮೊದಲು ನನ್ನ ಹೆಂಡತಿ ಮುಖ ನೋಡಿದೆ. ಆಗ ಅವರು ನನ್ನ ಮುಖ ನೋಡಿ ಏನಿದು ಎಂದು ಸ್ವಲ್ಪ ಖಡಕ್ ಆಗಿಯೇ ಪ್ರಶ್ನೆ ಮಾಡಿದರು. ಆಗ ನಾನು ಕೂಡಲೇ ಪತ್ನಿ ಎದುರಿಗೆ ಪೇಪರ್‌ನಲ್ಲಿ ಸುದ್ದಿ ಬರೆದವರಿಗೆ ಕರೆ ಮಾಡಿದೆ. ಆಗ ಅವರು ಕೂಡ ಸ್ವಲ್ಪ ಹೆದರಿಕೊಂಡಿದ್ದರು. ನೀವು ಪೇಪರ್‌ನಲ್ಲಿ ಬರೆದಿದ್ದೆಲ್ಲವೂ ಓಕೆ, ಆದ್ರೆ ನನ್ನ ಹೆಂಡತಿಯನ್ನು ಮನೆಗೆ ಕಳಿಸಿಕೊಡು ಎಂದು ಕೇಳಿದೆ. ಅಷ್ಟೆಲ್ಲಾ ಮಾಡಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದೀನಿ ಎಂದರೆ ಹೆಂಡತಿ ಮನೆಗೆ ಕಳಿಸಿಕೊಡು ಎಂದು ಜೋರಾಗಿ ಕೇಳಿದೆ. ಅದಕ್ಕೆ ಅವರು ಸಾರಿ ಸರ್.. ಎಂದೆಲ್ಲಾ ಹೇಳಿದರು.

ಇದನ್ನೂ ಓದಿ: ಮುಕುಂದನ 'ಯುಐ' ಸಿನಿಮಾ ಬಗ್ಗೆ 'ಮ್ಯಾಕ್ಸ್‌' ಮುರಾರಿ ಪೋಸ್ಟ್ ಮಾಡಿ ಹೇಳಿದ್ದೇನು?

ಈ ವಿಚಾರವಾಗಿ ನನಗೆ ನಕ್ಕು,, ನಕ್ಕು ಸಾಕಾಯ್ತು. ಎಲ್ಲಿಂದ ನಿಮಗೆ ಈ ಸುದ್ದಿ ಸಿಕ್ತು ಎಂದು ಕೇಳಿದಾಗ, ಇಲ್ಲ ಸರ್ ಯಾರೋ ಹೇಳಿದರು ಎಂದು ಹೇಳಿದರು. ಅಲ್ಲಪ್ಪಾ ನಾವೆಲ್ಲಾ ಸ್ವಲ್ಪ ಹುಷಾರಾಗಿರಬೇಕು. ಪತ್ರಿಕೆಯವರೂ ಕೂಡ ಈ ಬಗ್ಗೆ ವಿಚಾರ ಮಾಡದೇ ಬರೆಯಬಾರದು ಎಂದು ಹೇಳಿ ಹೋಗ್ಲಿ ಬಿಡಿ ಎಂದು ಸುಮ್ಮನಾದೆ. ಇಂತಹ ವಿಚಾರಗಳಿಂದ ಎಷ್ಟೋ ಮನೆಗಳು ಮುರಿದು ಹೋಗಿಬಿಡ್ತಾವೆ ಎಂದು ಕಿಚ್ಚ ಸುದೀಪ ನಗಾಡುತ್ತಾ ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ. ಆದರೆ, ಯಾವ ಪತ್ರಿಕೆ, ಯಾವಾಗ ನಡೆದಿದ್ದು, ವರದಿಗಾರರ ಹೆಸರು ಯಾವುದನ್ನೂ ಬಹಿರಂಗಪಡಿಸಿಲ್ಲ.

click me!