ಉಡುಪಿಯಲ್ಲಿ ಮತದಾನ ಮಾಡಿದ ರಕ್ಷಿತ್ ಶೆಟ್ಟಿ: ಮದುವೆ ಬಗ್ಗೆ ಹೇಳಿದ್ದೇನು?

By Shruthi Krishna  |  First Published May 10, 2023, 11:09 AM IST

ಉಡುಪಿಯಲ್ಲಿ ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಳಿಕ ಮಾತನಾಡಿ ಮದುವೆ ಬಗ್ಗೆ ಹೇಳಿದ್ದೇನು ನೋಡಿ.


ಕರ್ನಾಟಕ ವಿಧಾನಸಭೆ ಚುನಾವಣೆ ಇಂದು (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ. ಅನೇಕ ಸಿನಿಮಾ ಗಣ್ಯರು ಇಂದು ಬೆಳಗ್ಗೆಯೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಸಿನಿ ಸೆಲೆಬ್ರಿಟಿಗಳು ತಮ್ಮ ಅಮೂಲ್ಯಾ ಮತ ಚಲಾಯಿಸಿದ್ದಾರೆ. ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರು ಉಡುಪಿಯಲ್ಲ ಮತದಾನ ಮಾಡಿದ್ದಾರೆ. ಬೆಂಗಳೂರಿನಲ್ಲಿದ್ದ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಲು ಉಡುಪಿಗೆ ತೆರಳಿದ್ದರು. ಮತದಾನ ಮಾಡಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಾಬ್ದಾರಿ ಎಲ್ಲರೂ ವೋಟ್ ಮಾಡಿ ಎಂದು ಹೇಳಿದ್ದಾರೆ. 

'ಮತದಾನ ಮಾಡಲು ಬೆಂಗಳೂರಿನಿಂದ ಬಂದಿದ್ದೇನೆ. ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಾಬ್ದಾರಿ. ನನಗೆ ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ. ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. ನಾನು ಚಿಕ್ಕವನಾಗಿದ್ದಾಗ ಉಡುಪಿ ನಗರ ಬೆಳಿಬೇಕು ಎಂದು ಆಸೆ ಇತ್ತು. ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ನಾಯಕನಾದವ ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಕ್ಷೇತ್ರದ ಜನರ  ಬೇಡಿಕೆಗಳನ್ನು ಈಡೇರಿಸಬೇಕು. ಹಳ್ಳಿ ಭಾಗದಲ್ಲಿ ಮತದಾನ ಬಗ್ಗೆ ಜನಕ್ಕೆ ಕಾಳಜಿ ಜಾಸ್ತಿ. ನಮ್ಮ ನಾಯಕ ಯಾರಾಗಬೇಕು ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ' ಎಂದು ಹೇಳಿದ್ದಾರೆ. 

Tap to resize

Latest Videos

'ಸಿಟಿ ಲೈಫ್ ಬೇರೆ ಆಗಿರುತ್ತದೆ. ಯಾವ ನಾಯಕರು ಅಧಿಕಾರಕ್ಕೆ ಬರುತ್ತಾರೆ ಅಂತ ನಾವು ನಿರೀಕ್ಷೆ ಮಾಡುತ್ತಿದ್ದೇವೆ. ಯುವಜನರು ಯಾರನ್ನು ಆಯ್ಕೆ ಮಾಡುತ್ತಾರೆ ಅವರು ನಮ್ಮ ದೇಶದ ಭವಿಷ್ಯ ಆಗಿರುತ್ತಾರೆ. ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು. ಹೊಸ ನಾಯಕರು ಬಂದಾಗ ಹೊಸ ಹೊಸ ನಿರೀಕ್ಷೆಗಳು ಇರುತ್ತದೆ' ಎಂದು ರಕ್ಷಿತ್ ಶೆಟ್ಟಿ ವೋಟ್ ಮಾಡಿ ಮಾತನಾಡಿದರು.

ಪ್ರಚಾರಕ್ಕೆ ಯಾಕೆ ಹೋಗಿಲ್ಲ ರಕ್ಷಿತ್?

ಈ ಬಾರಿ ಅನೇಕ ಸಿನಿಮಾ ಸೆಲೆಬ್ರಿಟಿಗಳು ತಮ್ಮಿಷ್ಟದ ಹಾಗೂ ಹತ್ತಿರದವರ ಪರ ಮತ ಪ್ರಚಾರ ಮಾಡಿದ್ದಾರೆ.ಆದರೆ ರಕ್ಷಿತ್ ಶೆಟ್ಟಿ ಯಾರ ಪರ ಕೂಡ ಪ್ರಚಾರಕ್ಕೆ ಹೋಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್, 'ತುಂಬಾ ಜನ ಕೇಳಿದ್ದರು, ನಾನು ರಾಜಕೀಯ ಪ್ರಚಾರಕ್ಕೆ ಹೋಗೋದಿಲ್ಲ. ನಾನು ಹೆಚ್ಚು ಮಾತನಾಡಿದರೆ ರಾಜಕಾರಣಿಗಳ ಹೆಸರುಗಳು ಬಾಯಿಗೆ ಬರುತ್ತದೆ' ಎಂದು ಹೇಳಿದರು. 

ಯಾರೆಲ್ಲ ಸೆಲೆಬ್ರಿಟಿಗಳು ಮತದಾನ ಮಾಡಿದ್ರು...ವೋಟ್ ಮಾಡಿದ ಸಿನಿ ಗಣ್ಯರ ಫೋಟೋಗಳು

ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

ನಟ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾಗಳ ಬಗ್ಗೆಯೂ ಮಾತನಾಡಿದರು. ಸದ್ಯ ರಿಚರ್ಡ್ ಆಂಟನಿ ಫ್ರೀ ಪ್ರೋಡಕ್ಷನ್ ನಡೆಯುತ್ತಿದೆ ಎಂದು ಹೇಳಿದರು. ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್ ಮಾಗಿಸಿದ್ದಾರೆ ರಕ್ಷಿತ್ ಶೆಟ್ಟಿ. ಈ ಬಗ್ಗೆ ಮತನಾಡಿದ ರಕ್ಷಿತ್ ಸಪ್ತ ಸಾಗರದಾಚೆ ಎಲ್ಲೋ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ ಎಂದು ಬಹಿರಂಗ ಪಡಿಸಿದರು. 'ರಿಚರ್ಡ್ ಆಂಟನಿ  ಫೈನಲ್ ಡ್ರಾಫ್ಟ್ ಬರೆಯುವ ಉದ್ದೇಶದಿಂದ ಯು ಎಸ್ ಹೋಗುತ್ತಿದ್ದೇನೆ. ಇಲ್ಲಿ ರಾತ್ರಿ ಇದ್ದಾಗ ಅಲ್ಲಿ ಬೆಳಗ್ಗೆ ಇರೋದ್ರಿಂದ ಕೆಲಸ ಮಾಡಲು ಸುಲಭ ಆಗುತ್ತದೆ' ಎಂದು ರಕ್ಷಿತ್ ಹೇಳಿದರು. 

ಮದುವೆ ಬಗ್ಗೆ ಮುಂದೆ ನೋಡೋಣ 

ಇನ್ನೂ ಮದುವೆ ಬಗ್ಗೆ ಕೂಡ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಯಾವಾಗ ಎನ್ನುವ ಪ್ರಶ್ನೆ  ರಕ್ಷಿತ್ ಶೆಟ್ಟಿಗೆ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ, ಮುಂದೆ ನೋಡೋಣ ಎಂದು ಹೇಳಿ ಹೊರಟು ಹೋದರು.  

click me!