ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ 'ಚಾಂಪ್' ನಿಧನ

Published : May 07, 2023, 10:47 AM IST
ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ 'ಚಾಂಪ್' ನಿಧನ

ಸಾರಾಂಶ

ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ 'ಚಾಂಪ್' ನಿಧನ ಹೊಂದಿದೆ. ಈ ಬಗ್ಗೆ ದಿವ್ಯಾ ಸ್ಪಂದನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.  

ಸ್ಯಾಂಡಲ್ ವುಡ್ ನಟಿ ರಮ್ಯಾಗೆ  ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ. ಅದರಲ್ಲೂ ಶ್ವಾನಗಳೆಂದರೆ ಅವರಿಗೆ ತುಂಬಾ ಪ್ರೀತಿ. ರಮ್ಯಾ ಮನೆಯಲ್ಲಿ ಅನೇಕ ನಾಯಿಗಳನ್ನು ಸಾಕಿದ್ದಾರೆ. ಇತ್ತೀಚೆಗಷ್ಟೆ ರಮ್ಯಾ ಅವರ ಮುದ್ದಿನ ನಾಯಿ ‘ಚಾಂಪ್​’ ಕಾಣೆಯಾಗಿತ್ತು. ಹುಡುಕಿ ಕೊಡುವಂತೆ ಜಾಹೀರಾತು ಕೂಡ ನೀಡಿದ್ದರು. ಆದರೆ ಬೇಸರದ ಸಂಗತಿ ಏನೆಂದರೆ ಕಾಣೆಯಾದ ಕೆಲವೇ ಗಂಟೆಗಳಲ್ಲಿ ಚಾಂಪ್ ಸಾವನ್ನಪ್ಪಿದೆ. ಈ ವಿಷಯವನ್ನು ಸ್ವತಃ ರಮ್ಯಾ ಅವರೇ ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ‘ಚಾಂಪ್​ ಸತ್ತುಹೋಗಿದ್ದಾನೆ. ಅವನಿಗಾಗಿ ಹುಡುಕಾಡಿದ ಎಲ್ಲರಿಗೂ ಧನ್ಯವಾಗಳು’ ಎಂದು ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ನಲ್ಲಿ ರಮ್ಯಾ ಬಹಿರಂಗ ಪಡಿಸಿದ್ದಾರೆ. 

ನಟಿ ರಮ್ಯಾ ಸದ್ಯ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಈ ನಡುವೆ ಚುನಾವಣಾ ಪ್ರಚಾರದಲ್ಲೂ ಬ್ಯುಸಿ ಆಗಿದ್ದಾರೆ. ಇದೀಗ ಚಾಂಪ್​ ನಿಧನ ಅವರಿಗೆ ಬೇಸರ ಮೂಡಿಸಿದೆ. ತನ್ನ ಮುದ್ದಿನ ನಾಯಿ ಕಾಣೆಯಾದ ಬಗ್ಗೆ ರಮ್ಯಾ ಜಾಹೀರಾತು ನೀಡಿದ್ದರು. ‘ನನ್ನ ನಾಯಿ ಚಾಂಪ್ ಕಾಣೆಯಾಗಿದೆ. ಕಪ್ಪು ಬಣ್ಣದ ನಾಯಿ ಅದಾಗಿದ್ದು, ಅದಕ್ಕೆ ತುಸು ಕಣ್ಣು ಮಂಜಾಗಿದೆ. ಚಾಂಪ್ ಎಂದು ಕರೆದರೆ ಪ್ರತಿಕ್ರಿಯಿಸುತ್ತದೆ. ಮೇ 6 ರಂದು ಬೆಳಿಗ್ಗೆ ರೇಸ್​ಕೋರ್ಸ್ ರಸ್ತೆಯ ತಾಜ್ ವೆಸ್ಟ್​ಎಂಡ್​ನಿಂದ ನಾಯಿ ಕಾಣೆಯಾಗಿದೆ. ಸುರಕ್ಷಿತವಾಗಿ ಮರಳಿಸಿದವರಿಗೆ ಸೂಕ್ತ ಉಡುಗೊರೆ ನೀಡಲಾಗುತ್ತದೆ. ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ’ ಎಂದು ರಮ್ಯಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

Divya Spandana: ಗೌಡ್ರ ಹುಡುಗನ ಹುಡುಕಾಟದ ನಡುವೆಯೇ ನಟಿ ರಮ್ಯಾ ನಾಯಿ ಮಿಸ್ಸಿಂಗ್​! ಬಹುಮಾನ ಘೋಷಣೆ

ಚಾಂಪ್ ಬಗ್ಗೆ ರಮ್ಯಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಕೆಲವು ತಿಂಗಳ ಹಿಂದೆಯಷ್ಟೆ ಚಾಂಪ್‌ಗೆ 15 ವರ್ಷ ತುಂಬಿದೆ ಎಂದು ರಮ್ಯಾ ವಿಡಿಯೋ ಶೇರ್ ಮಾಡಿದ್ದರು.  ಚಾಂಪ್‌ಗೆ ವಿಶೇಷವಾಗಿ ವಿಶ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದರು. ಅನೇಕ ಬಾರಿ ಚಾಂಪ್ ಬಗ್ಗೆ ಹೇಳಿಕೊಂಡಿದ್ದರು. ಇತ್ತೀಚೆಗಷ್ಟೆ ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದಾಗ ಚಾಂಪ್​ ಬಗ್ಗೆ ಮಾತನಾಡಿದ್ದರು. ಚಾಂಪ್‌ಗೆ ವಯಸ್ಸಾಗಿದ್ದು ಅದಕ್ಕೆ ಹೃದಯ ಸಮಸ್ಯೆ ಇತ್ತು ಹಾಗೂ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆ ಶ್ವಾನವನ್ನು ಅವರು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಚಾಂಪ್​ ಸತ್ತುಹೋಗಿರುವುದು ಅವರಿಗೆ ಬೇಸರ ಮೂಡಿಸಿದೆ.

ಗೌಡ್ರ ಹುಡ್ಗ ಸಿಕ್ರೆ ನೋಡಿ, ಮದುವೆ ಆಗುವೆ: ರಮ್ಯಾ

ರಮ್ಯಾ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ರಮ್ಯಾ ಧನಂಜಯ್ ಜೊತೆ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ರಮ್ಯಾ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬರುತ್ತಿದ್ದಾರೆ. ರಮ್ಯಾ ಅವರನ್ನು ಬೆಳ್ಳಿ ಪರದೆ ಮೆಲೇ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಇನ್ನೂ ನಿರ್ಮಾಣಕ್ಕೂ ಇಳಿದಿರುವ ರಮ್ಯಾ ಆಪಲ್ ಬಾಕ್ಸ್ ಸಂಸ್ಥೆ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?