ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ; ರಕ್ಷಿತ್ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ನೆಟ್ಟಿಗರು!

By Vaishnavi Chandrashekar  |  First Published Sep 23, 2023, 12:29 PM IST

ಯಾರೇ ಬರಲಿ ಬಿಡಲಿ ನಾನು ಇರೋದೇ ಹೀಗೆ ಅಂತ ಪದೇ ಪದೇ ಪ್ರೋವ್ ಮಾಡ್ತಿದ್ದಾರೆ ಶೆಟ್ರ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್..... 


ಸ್ಯಾಂಡಲ್‌ವುಡ್‌ ಟ್ವಿಂಕಲ್ ಸ್ಟಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕನ್ನಡಿಗರ ಮನಸ್ಸಿಗೆ ಸಿಕ್ಕಾಪಟ್ಟೆ ಹತ್ತಿರವಾಗಿ ಬಿಟ್ಟಿದ್ದಾರೆ. ಏನೇ ಮಾಡಿ ಎಲ್ಲೇ ಹೋಗಲಿ ಜನರ ಕಣ್ಣು ರಕ್ಷಿತ್ ಮೇಲಿರುತ್ತದೆ. ಶೆಟ್ರು ಬ್ರೇಕಪ್ ಆಗಿ ಬುಕ್ಕು ಪೆನ್ನು ಹಿಡಿದುಕೊಂಡು ಸೋಷಿಯಲ್ ಮೀಡಿಯಾದಿಂದ ದೂರ ಆಗಿದ್ದೇ ಆಗಿದ್ದು....ಅಲ್ಲಿಂದ ಜನರಿಗೆ ಕ್ಯೂರಿಯಾಗಿಟಿ ಹೆಚ್ಚಾಯ್ತು. ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಯಾರ ಜೊತೆಗಿದ್ದಾರೆ ಯಾವ ಸಿನಿಮಾ ಮಾಡ್ತಿದ್ದಾರೆ....ಹೀಗೆ ಏನ್ ಏನೋ ಪ್ರಶ್ನೆಗಳು. ಹೀಗಾಗಿ ರಕ್ಷಿತ್ ಮೇಲೆ ನೆಟ್ಟಿಗರ ಕಣ್ಣು ಎಷ್ಟರ ಮಟ್ಟಕ್ಕಿದೆ ಅಂದ್ರೆ ಈ ಫೋಟೋನೇ ಸಾಕ್ಷಿ....

ಹೌದು! ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾದ ಬೆಳಗ್ಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿನಲ್ಲಿ ರಕ್ಷಿತ್ ಹಳದಿ ಬಣ್ಣದ ಕಾರಿನ ಮೇಳೆ ರಶ್ಮಿಕಾ ಮಂದಣ್ಣ ಜೊತೆ ಕುಳಿತುಕೊಂಡಿರುವ ಸೀನ್‌ ಒಂದರಲ್ಲಿ ವೈಟ್ ಟೀ-ಶರ್ಟ್ ಮೇಲೆ ಬ್ಲೂ ಬಣ್ಣದ ಶರ್ಟ್ ಧರಿಸಿದ್ದರು. ಆಗ ಅದು ಸಿಂಪಲ್ ಲುಕ್‌ ಇರಬಹುದು ಆದರೆ ಈಗ ಅದೇ ಸೆನ್ಸೇನ್ ಕ್ರಿಯೇಟ್ ಮಾಡುತ್ತಿದೆ. ಯಾಕೆ ಅಂತೀರಾ?

Tap to resize

Latest Videos

Sapta Sagaradaache Ello Review: ಪ್ರತಿಯೊಬ್ಬ ಪ್ರೇಮಿಯೂ ವಿಚಾರಣಾಧೀನ ಕೈದಿ!

ಇತ್ತೀಚಿಗೆ ರಿಲೀಸ್ ಆಗಿರುವ ರೊಮ್ಯಾಂಟಿಕ್ ಆಕ್ಷನ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಮತ್ತು ರಕ್ಮಿಣಿ ವಸಂತ್ ನಟಿಸಿದ್ದಾರೆ. ಸಿನಿಮಾ ಹಿಟ್ ಆದ ಬೆನ್ನಲ್ಲೆ ಸಾಕಷ್ಟು ಪ್ರೆಸ್‌ಮೀಟ್ ಮತ್ತು ಸಕ್ಸಸ್ ಮೀಟ್ ಮಾಡಿದ್ದಾರೆ. ಈ ವೇಳೆ ರಕ್ಷಿತ್ ವೈಟ್ ಟೀ-ಶರ್ಟ್ ಮತ್ತು ಬ್ಲೂ ಶರ್ಟ್ ಧರಿಸಿದ್ದಾರೆ...ಈ ಡ್ರೆಸ್‌ ಬೇರೆ ಯಾವ್ದೂ ಅಲ್ಲ ಅದೇ ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಪಕ್ಕ ಇದ್ದಾಗ ಧರಿಸಿದ್ದು. ಇದನ್ನು ನೋಡಿ ನೆಟ್ಟಿಗರು ಏನ್ ಹೇಳಬೇಕು? ವಾವ! ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಯಾವುದೇ ಬೇಸರವಿಲ್ಲದೆ ಹಾಕಿದ ಬಟ್ಟೆಯನ್ನು ಪದೇ ಪದೇ ಹಾಕುತ್ತಾರೆ ಅನ್ನೋದು ಬಿಟ್ಟು .....ಹುಡುಗಿ ಚೇಂಜ್ ಆದರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. 

ಮನಸಿಂದ ಮಾಡಿದ ಸಿನಿಮಾ ಟ್ರೆಂಡ್ ಸೃಷ್ಟಿಸುತ್ತದೆ: ರಕ್ಷಿತ್ ಶೆಟ್ಟಿ

ಯಾಕೆ ಟ್ರೋಲ್? 

ಕಿರಿಕ್ ಪಾರ್ಟಿ ಸಿನಿಮಾ ಆದ್ಮೇಲೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಸಲು ಶುರು ಮಾಡುತ್ತಾರೆ. ಅಲ್ಲಿಂದ ಇಬ್ಬರೂ ತಮ್ಮ ಪ್ರೀತಿಯನ್ನು ಫ್ಯಾಮಿಲಿಗೆ ಹೇಳಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಳ್ಳುತ್ತಾರೆ. ಇನ್ನೇನು ಮದುವೆ ಡೇಟ್ ಫಿಕ್ಸ್ ಆಗಬೇಕು ಎನ್ನುಷ್ಟರಲ್ಲಿ ಬ್ರೇಕಪ್ ಮಾಡಿಕೊಂಡು ದೊಡ್ಡ ಸೀನ್ ಕ್ರಿಯೇಟ್ ಆಗಿತ್ತು. ಅದಾದ ಮೇಲೆ ಹುಡುಗಿಯರ ಸಹವಾಸವೇ ಬೇಡ ಎಂದು ದೂರವಿದ್ದರು. ಈಗ ರುಕ್ಮಿಣಿ ವಸಂತ್ ಎಂಟ್ರಿ ಕೊಟ್ಟ ಮೇಲೆ ರಕ್ಷಿತ್ ಬದುಕಿನಲ್ಲಿ ಎಲ್ಲೋ ಲವ್ ಲೈಟ್ ಕಾಣಿಸುತ್ತಿದೆ ಅಂತಿದ್ದಾರೆ ನಟ್ಟಿಗರು. ಒಟ್ಟಾರೆ ಶೆಟ್ರು ಲೈಫ್‌ ಸೂಪರ್ ಆಗಿರಲಿ ಅಂತ ವಿಶ್ ಮಾಡೋಣ.

click me!