ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ರೀಲ್ಸ್ ಮಾಡಿ ಜೈಲು ಸೇರಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ರಜತ್ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ವಿನಯ್ ಗೌಡ ಹಾಗೂ ಬಿಗ್ ಬಾಸ್ ರಜತ್ ಕಿಶನ್ ಕೆಲವು ತಿಂಗಳ ಹಿಂದೆ ಮಾಡಿದ ರೀಲ್ಸ್ ದೊಡ್ಡ ಸಮಸ್ಯೆ ಸೃಷ್ಟಿ ಮಾಡಿತ್ತು. ಇಬ್ಬರು ಕೈಯಲ್ಲಿ ಲಾಂಗ್ ಹಿಡಿದು ಕಾಟೇರ ಚಿತ್ರಕ್ಕೆ ರೀಲ್ಸ್ ಮಾಡಿದ್ದರು. ಅಷ್ಟೇ ಅಲ್ಲ ನಡು ರಸ್ತೆಯಲ್ಲಿ ಇಬ್ಬರು ಈ ರೇಂಜ್‌ಗೆ ಶೋ ಮಾಡಿದ್ದಕ್ಕೆ ವಿಡಿಯೋ ಪೊಲೀಸರ ಕೈ ಸೇರಿ ಅವರಿಬ್ಬರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದರು. ಹೊರ ಬಂದ ಮೇಲೆ ವಿಜಯ್ ಮತ್ತು ರಜತ್ ಘಟನೆ ಬಗ್ಗೆ ಕ್ಲಾರಿಟಿ ಕೊಟ್ಟು ಕೊಟ್ಟು ಅವರಿಬ್ಬರ ನಡುವೆನೇ ಈಗ ಮನಸ್ತಾಪ ಉಂಟಾಗಲಿದೆ. ಹೀಗಾಗಿ ರಜಯ್ ಫುಲ್ ಕ್ಲಾರಿಟಿ ನೀಡಿದ್ದಾರೆ.
'ರೀಲ್ಸ್ ಮಾಡಿದ್ದಕ್ಕೆ ಅಲ್ಲಿಗೆ ಮುಗಿಯಿತ್ತು ಬೇರೆ ಯಾವುದೋ ವಿಚಾರಕ್ಕೆ ಆಗಿದ್ರೆ ಮನೆಯಲ್ಲಿ ಮುಖ ತೋರಿಸಲು ಆಗುತ್ತಿರಲಿಲ್ಲ. ನನ್ನ ಫ್ಯಾಮಿಲಿಯಲ್ಲಿ ಪ್ರತಿಯೊಬ್ಬರು ಟೆನ್ಶನ್ ಮಾಡಿಕೊಂಡರು. ಸಣ್ಣ ರೀಲ್ಸ್ ವಿಚಾರಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಜೊತೆ ಇದ್ದು ಬಂದಂತೆ ಆಯ್ತು.ರಜತ್ ಹೇಳಿದ ಮಾತನ್ನು ನಾನು ಬೆಳಗ್ಗೆ ನೋಡಿದೆ, ನನಗೆ ಬುದ್ಧಿ ಇದೆ ಅವನಿಗೆ ಬುದ್ಧಿ ಇದೆ. ಜನರು ರಜತ್ ಹೇಳಿರುವ ಮಾತನ್ನು ಸಂಪೂರ್ಣವಾಗಿದೆ. ನಾನು ತಮಾಷೆಗೆ ರಜತ್ ಜೊತೆ ರೀಲ್ಸ್ ಮಾಡುವುದಿಲ್ಲ ಎಂದಿರುವುದು. ಸುಮ್ಮನೆ ಗಾಸಿಬ್ ಹಬ್ಬಿಸುತ್ತಿರುವುದು ಸುಳ್ಳು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಜತ್ ಮಾತನಾಡಿದ್ದಾರೆ.
ಒಪ್ಪಿಕೊಂಡ ಹಣವನ್ನು ಕೊನೆಯಲ್ಲಿ ಕೊಡುತ್ತಿರಲಿಲ್ಲ: ರಮ್ಯಾ
'ಏನ್ ಏನೋ ಮಾಧ್ಯಮಗಳು ಇದೆ ಅದನ್ನು ಚರ್ಚೆ ಮಾಡಿ ಮಾತನಾಡಿಕೊಳ್ಳುತ್ತೀನಿ ನಾನು ರಜತ್ ಹಾಗೆ ಹೀಗೆ ಅಂತ ಹೇಳುವಷ್ಟು ಸಣ್ಣ ಹುಡುಗ ಅಲ್ಲ. ಈಗ ಪರ್ಸನಲ್ ವಿಚಾರಗಳನ್ನು ಮೀಡಿಯಾಗಳಲ್ಲಿ ಮಾತನಾಡುವ ಪರಿಸ್ಥಿತಿ ಬಂದು ಬಿಟ್ಟಿದೆ. ವಿನಯ್ ಗೌಡ ತಪ್ಪು ಮಾಡಿಲ್ಲ ನನ್ನ ರೀಲ್ಸ್ ನನ್ನ ಐಡಿಯಾ ನನ್ನ ಪ್ರಾಪಟಿ ಅಂತ ಅವನೇ ಹೇಳಿದ್ದಾನೆ. ನಾನು ದೊಡ್ಡವನು ಅಂತ ಬುದ್ಧಿ ಹೇಳಿದರೆ ಕೇಳುವುದಿಲ್ಲ ಏಕೆಂದರೆ ಅವನಿಗೆ ಸಿಟ್ಟು ಜಾಸ್ತಿ ಕೋಪ ಜಾಸ್ತಿ ಅವನು ಇರುವುದೇ ಹಾಗೆ ಅದು ನನಗೆ ಗೊತ್ತಿರುವ ವಿಚಾರ. ರಜತ್ ಮೇಲೆ ನನಗೆ ಸಿಕ್ಕಾಪಟ್ಟೆ ಸಿಟ್ಟು ಇದೆ ಅದನ್ನು ಮಾತನಾಡಿಕೊಂಡು ಸರಿ ಮಾಡಿಕೊಳ್ಳುತ್ತೀವಿ ಅದು ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವ ಅಗತ್ಯವಿಲ್ಲ' ಎಂದು ರಜತ್ ಹೇಳಿದ್ದಾರೆ.
ಇನ್ನೂ 3 ಕೆಜಿ ತೂಕ ಕಡಿಮೆ ಆಗ್ಬೇಕು, ಫ್ಯಾಮಿಲಿ ಸಪೋರ್ಟ್ ಬೇಕು: ಸಿರಿ