ರಾಜ್‌ ಬಿ ಶೆಟ್ಟಿ 'ರೂಪಾಂತರ'ದಲ್ಲಿ ಒಂದಲ್ಲ, ಎರಡಲ್ಲ 5 ಕಥಾಸರಣಿಗಳು: ಈ ದಿನದಂದು ಸಿನಿಮಾ ರಿಲೀಸ್?

By Govindaraj S  |  First Published Jul 12, 2024, 5:05 PM IST

ಇದೊಂದು ಆ್ಯಂಥಾಲಜಿ. ಇದರಲ್ಲಿ ಸ್ಲಂ ಹಿನ್ನೆಲೆಯ ಗೂಂಡಾ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾತು ಮಾತಿಗೂ ತೋಳೇರಿಸಿಕೊಂಡು ಬರುವ ರೌಡಿಯೊಬ್ಬ ಸನ್ನಿವೇಶದ ಸುಳಿಗೆ ಸಿಕ್ಕು ಹೇಗೆ ರೂಪಾಂತರವಾಗುತ್ತಾನೆ ಎಂಬುದು ಅವರ ಭಾಗದ ಕಥಾಹಂದರ. 


ರಾಜ್‌ ಬಿ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿ, ಅರ್ಪಿಸುತ್ತಿರುವ ‘ರೂಪಾಂತರ’ ಸಿನಿಮಾ ಜು.26ಕ್ಕೆ ತೆರೆಗೆ ಬರಲಿದೆ. ಕೇರಳದ ಮಿಥಿಲೇಶ್ ಎಡವಲತ್ ನಿರ್ದೇಶಕರು. ಇದೊಂದು ಆ್ಯಂಥಾಲಜಿ. ಇದರಲ್ಲಿ ಸ್ಲಂ ಹಿನ್ನೆಲೆಯ ಗೂಂಡಾ ಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾತು ಮಾತಿಗೂ ತೋಳೇರಿಸಿಕೊಂಡು ಬರುವ ರೌಡಿಯೊಬ್ಬ ಸನ್ನಿವೇಶದ ಸುಳಿಗೆ ಸಿಕ್ಕು ಹೇಗೆ ರೂಪಾಂತರವಾಗುತ್ತಾನೆ ಎಂಬುದು ಅವರ ಭಾಗದ ಕಥಾಹಂದರ. ಒಟ್ಟು 5 ಕಥಾಸರಣಿಯ ಈ ಸಿನಿಮಾದ ಕಥೆ ಮೆಟಮಾರ್ಫಸಿಸ್‌ ಅಥವಾ ರೂಪಾಂತರಕ್ಕೆ ಸಂಬಂಧಿಸಿದ್ದು. 

ಮಿಥಿಲೇಶ್‌ ಅವರ ಕಥೆಯನ್ನು ಕನ್ನಡಕ್ಕೆ ಭಾವಾಂತರಿಸಿ ಚಿತ್ರಕಥೆ, ಸಂಭಾಷಣೆ ಬರೆದವರು ರಾಜ್‌ ಬಿ ಶೆಟ್ಟಿ. ಸುಹಾನ್‌ ಪ್ರಸಾದ್‌ ಚಿತ್ರದ ನಿರ್ಮಾಪಕರು. ರಾಜ್‌ ಬಿ ಶೆಟ್ಟಿ, ಚೈತ್ರಾ ಆಚಾರ್‌ ಜೊತೆಗೆ ಶ್ವೇತಾ, ಲಚ್ಚವ್ವ ನಿರ್ದೇಶಕ ಜೈ ಶಂಕರ್‌, ಭರತ್‌ ಜಿಬಿ, ಮುರಳೀಧರ ಸಿ ಕೆ, 73ರ ಹರೆಯದ ರಂಗ ನಿರ್ದೇಶಕ ಸೋಮಣ್ಣ ಬೋಲೆಗಾಂವ್‌, ರೇಖಾ, ಹನಮಕ್ಕ, ಅಂಜನ್‌ ಭಾರದ್ವಾಜ್‌ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸಿಂಗಲ್ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ, ಈ ಸಿನಿಮಾ ತಂಡ ಈ ಚಿತ್ರವನ್ನ ರಾಜ್ಯದ ಕೆಲವೇ ಕೆಲವು ಪ್ರಮುಖ ನಗರದ ಸಿಂಗಲ್ ಥಿಯೇಟರ್‌ನಲ್ಲಿ ರಿಲೀಸ್ ಮಾಡುತ್ತಿದೆ. 

Latest Videos

undefined

ಗೂಂಡಾ ಆಗಿ 'ರೂಪಾಂತರ'ಗೊಂಡ ರಾಜ್‌ ಬಿ.ಶೆಟ್ಟಿ: ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲಿ ಕಮಾಲ್‌!

ಕಾರಣ, ರೂಪಾಂತರ ಸಿನಿಮಾ ಮೇನ್ಲಿ ಮಲ್ಟಿಪ್ಲೆಕ್ಸ್‌ನಲ್ಲಿಯೇ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಹಾಗಾಗಿಯೇ ಈ ಚಿತ್ರವನ್ನ ಮಲ್ಟಿಪ್ಲೆಕ್ಸ್‌ನಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ ಅಂತಲೇ ಹೇಳಬಹುದು. ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈಲಾಗ್ ಬರೆದಿದ್ದಾರೆ. ಚಿತ್ರಕಥೆಯಲ್ಲೂ ಕೈಜೋಡಿಸಿದ್ದಾರೆ. ರಾಜ್ ಬಿ ಶೆಟ್ಟಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಕೂಡ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಒಟ್ಟಿಗೆ ಕೆಲಸ ಮಾಡಿಕೊಂಡು ಬಂದಿರೋ ಈ ಜೋಡಿ ಮತ್ತೆ 'ರೂಪಾಂತರ' ಸಿನಿಮಾ ಮೂಲಕವೂ ಒಂದಾಗಿದೆ.

click me!