ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ-ರಾಜ್‌ ಬಿ ಶೆಟ್ಟಿ ಇಲ್ಲ ಅನ್ನೋದು ಶುದ್ಧ ಸುಳ್ಳು!

Published : Oct 27, 2025, 12:05 PM IST
Raj B Shetty Rakshit Shetty Rishab Shetty Kantara Chapter 1 Kantara Movie

ಸಾರಾಂಶ

'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1' ಎರಡರಲ್ಲೂ ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರ ಪ್ರೆಸೆನ್ಸ್ ಇದೆ. ಅವರಿಬ್ಬರೂ ತುಂಬಾ ಮುಖ್ಯವಾದ ಕೆಲಸ ಮಾಡಿದ್ದಾರೆ. ಅವರಿಬ್ಬರನ್ನೂ ಬಿಟ್ಟು ಕಾಂತಾರ ಸಿನಿಮಾವೇ ಇಲ್ಲ. ಆದರೆ, ಈ ಸಂಗತಿ ಸ್ವತಃ ರಾಜ್‌ - ರಕ್ಷಿತ್ ಅವರಿಗೂ ಅರಿವಿಲ್ಲ? ಅದು ಹೇಗೆ ನೋಡಿ..

ಇದು ಕಾಂತಾರ ಇನ್‌ಸೈಡ್ ಸ್ಟೋರಿ!

ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಜಗತ್ತಿನಾದ್ಯಂತ 7 ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಕಮಾಲ್ ಹಾಗೂ ಕಲೆಕ್ಷನ್ ಮಾಡಿರೋದು ಗೊತ್ತೇ ಇದೆ. 700 ಕೋಟಿಗೂ ಮೀರಿ ಕಲೆಕ್ಷನ್ ಮಾಡಿರುವ ಕಾಂತಾರ-1ಸಿನಿಮಾ ಇಡೀ ವಿಶ್ವದ ಗಮನ ಸೆಳೆದಿದೆ. ಈ ಮೊದಲು ಬಿಡುಗಡೆ ಆಗಿದ್ದ ಕಾಂತಾರ ಸಿನಿಮಾದ ಪ್ರೀಕ್ವೆಲ್ (ಮೊದಲ ಭಾಗ) ಈ ಸಿನಿಮಾ ಎಂಬುದನ್ನು ಸ್ವತಃ ನಾಯಕ-ನಿರ್ದೇಶಕರಾದ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಕಾಂತಾರ 1 ಸಿನಿಮಾ ಮಾಡಿರುವ ಜಾದೂ ಅಷ್ಟಿಷ್ಟಲ್ಲ. ಆದರೆ ಈ ಸಿನಿಮಾ ಸಂಗತಿಯಲ್ಲಿ ಒಂದು ಟ್ವಿಸ್ಟ್ ಇದೆ..

ಹಾಗಿದ್ದರೆ ಅದೇನು? ನಟ-ನಿರ್ದೇಶಕ ರಿಷಬ್ ಆಪ್ತಬಳಗ ಎಂದೇ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರಾಜ್‌ ಬಿ ಶೆಟ್ಟಿ (Raj B Shetty) ಕೆಲಸ ಮಾಡಿಲ್ಲ. ಈ ಸಿನಿಮಾದಲ್ಲಿ ಅವರು ತೆರೆಯ ಮೇಲೆ ಕೂಡ ಎಲ್ಲೂ ಕಾಣಿಸಿಕೊಂಡಿಲ್ಲ. ಈ ಮಾತನ್ನು ಸ್ವತಃ ರಿಷನ್ ಶೆಟ್ಟಿಯವರೇ ಕಾಂತಾರ 1 ಸಿನಿಮಾ ಬಿಡುಗಡೆಗೂ ಮೊದಲು ನಡೆದ ಪ್ರೆಸ್‌ಮೀಟ್‌ನಲ್ಲಿ ಕೂಡ ಹೇಳಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕೂಡ 'ಹೌದು, ರಕ್ಷಿತ್ ಹಾಗೂ ರಾಜ್ ಕಾಂತಾರ ಚಾಪ್ಟರ್ 1ರಲ್ಲಿ ಇಲ್ಲ' ಎಂಬುದು ಮನದಟ್ಟಾಗಿದೆ. ಆದರೆ, ಅವರಿಬ್ರೂ ಈ ಸಿನಿಮಾದಲ್ಲಿ ಕೂಡ ಇದ್ದಾರೆ, ಇದು ನಿಜ..!

ಯೆಸ್, ರಕ್ಷಿತ್ ಹಾಗೂ ರಾಜ್ ಇಬ್ಬರೂ 'ಕಾಂತಾರ 1' ಸಿನಿಮಾದಲ್ಲಿ ಇದ್ದಾರೆ. ಅದಕ್ಕೂ ಮೊದಲು ತೆರೆಗೆ ಬಂದಿದ್ದ 'ಕಾಂತಾರ' ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ಕಥೆ, ಚಿತ್ರಕಥೆಯಲ್ಲಿ ಭಾಗಿಯಾಗಿದ್ದರು, ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಕಾಂತಾರ (Kantara) ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ನಿರ್ದೇಶನವನ್ನು (ರಿಷಬ್ ಶೆಟ್ಟಿ ನಟಿಸುವಾಗ) ರಾಜ್‌ ಅವರೇ ಮಾಡಿದ್ದರು ಎಂಬುದು ಇಡೀ ಜಗತ್ತಿಗೇ ಗೊತ್ತು. ಆದರೆ, ಈ ಸಿನಿಮಾದಲ್ಲಿ, ಅಂದರೆ 'ಕಾಂತಾರ ಚಾಪ್ಟರ್ 1' ರಲ್ಲಿ ರಾಜ್‌ ಬಿ ಶೆಟ್ಟಿ ಕೆಲವು ಕಾರಣಗಳಿಂದ ಕೆಲಸ ಮಾಡಿಲ್ಲ ಎಂದು ಬಹಿರಂಗವಾಗಿದೆ. ರಕ್ಷಿತ್ ಶೆಟ್ಟಿಯವರು ಅವರದೇ ಆದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಅವರಿಬ್ಬರೂ ಈ ಸಿನಿಮಾದ ಕೆಲಸದಿಮದ ಸಂಪೂರ್ಣವಾಗಿ ಹೊರಗೆ ಉಳಿದಿದ್ದಾರೆ. ಈ ಸಂಗತಿ ಕ್ಲಿಸ್ಟರ್ ಕ್ಲಿಯರ್.

'ಕಾಂತಾರ ಚಾಪ್ಟರ್ 1' ಎರಡೂ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರ ಪ್ರೆಸೆನ್ಸ್ ಇದೆ!

ಆದರೂ ಕೂಡ 'ಕಾಂತಾರ' ಹಾಗೂ 'ಕಾಂತಾರ ಚಾಪ್ಟರ್ 1' ಎರಡೂ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರ ಪ್ರೆಸೆನ್ಸ್ ಇದೆ. ಅವರಿಬ್ಬರೂ ತುಂಬಾ ಮುಖ್ಯವಾದ ಕೆಲಸ ಮಾಡಿದ್ದಾರೆ. ಅವರಿಬ್ಬರನ್ನೂ ಬಿಟ್ಟು ಕಾಂತಾರ ಸಿನಿಮಾವೇ ಇಲ್ಲ. ಆದರೆ, ಈ ಸಂಗತಿ ಸ್ವತಃ ರಾಜ್‌ ಹಾಗೂ ರಕ್ಷಿತಾ ಅವರ ಗಮನದಲ್ಲೂ ಇರಲಿಕ್ಕಿಲ್ಲ. ಹೌದು, ಅವರಿಬ್ಬರೂ ಕಾಂತಾರದಲ್ಲಿ ಇದ್ದಾರೆ, ಈ ಸಿನಿಮಾ ಮುಂದೆ ಇದೇ ಹೆಸರಿನಲ್ಲಿ ಅದೆಷ್ಟು ಭಾಗಗಳಲ್ಲಿ ಬಂದರೂ ಕೂಡ ಅವರಿಬ್ಬರೂ ಈ ಸಿನಿಮಾ ಬಿಟ್ಟು ಹೊರಗೆ ಇರೋದಕ್ಕೆ ಸಾಧ್ಯವೇ ಇಲ್ಲ. ಇದು ಜಗತ್ತಿನ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಕಾರಣ.. ಈ ಸಂಗತಿಯನ್ನು ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿಯವರೇ ಸಂದರ್ಶನವೊಂದಲ್ಲಿ ಸ್ವತಃ ಹೇಳಿದ್ದಾರೆ. ಅದಸು ಹೀಗಿದೆ..

ಕಾಂತಾರ ಸಿನಿಮಾಗೆ ಮೊದಲು ಬೇರೆ ಹೆಸರು ಇಡಲಾಗಿತ್ತು!

20 ಸೆಪ್ಟೆಂಬರ್ 2022 ರಂದು ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದ ಕಾಂತಾರ ಸಿನಿಮಾಗೆ ಮೊದಲು ಬೇರೆ ಹೆಸರು ಇಡಲಾಗಿತ್ತು. ಆದರೆ, ಆ ಹೆಸರು ಇಷ್ಟವಾಗದ ರಿಷಬ್ ಶೆಟ್ಟಿಯವರು ತಮ್ಮ ಮಿತ್ರ ರಕ್ಷಿತ್ ಅವರಿಗೆ ಬೇರೆ ಹೆಸರು ಸೂಚಿಸಲು ಹೇಳಿದ್ದಾರೆ. ಆಗ ರಕ್ಷಿತ್ ಶೆಟ್ಟಿ ಆ ಸಿನಿಮಾಗೆ 'ದಂತಕಥೆ' ಎಂದು ಹೆಸರು ಇಟ್ಟಿದ್ದಾರೆ. ಆದರೆ, ಆ ಹೆಸರು ಇಷ್ಟವಾದರೂ ಅದಕ್ಕಿಂತ ಇನ್ನೇನೂ ಬೇರೆ ಬೇಕು ಎಂದು ಬಯಸಿದ ರಿಷಬ್ ಅವರು ರಾಜ್‌ ಬಿ ಶೆಟ್ಟಿಯನ್ನು ಕೇಳಿದ್ದಾರೆ. ಆಗ ರಾಜ್‌ ಈ ಸಿನಿಮಾಗೆ ಕೊಟ್ಟ ಹೆಸರು 'ಕಾಂತಾರ'. ಅದು ಇಷ್ಟವಾಗಿ ರಿಷಬ್ ಅವರು ತಮ್ಮ ಸಿನಿಮಾಗೆ ಅದೇ ಹೆಸರು ಇಟ್ಟಿದ್ದಾರೆ. ಆದರೆ, ರಕ್ಷಿತ್ ಕೊಟ್ಟ ಹೆಸರು 'ದಂತಕಥೆ' ಕೂಡ ಇಷ್ಟವಾಗಿರುವ ಕಾರಣಕ್ಕೆ ಅದನ್ನೂ ಸೇರಿಸಿ 'ಕಾಂತಾರ, ಒಂದು ದಂತಕಥೆ' ಎಂದು ಹೆಸರಿಡಲಾಗಿದೆ.

ಈ ಎಲ್ಲ ಕಾರಣಗಳಿಂದ, ಎಲ್ಲಿಯವರೆಗೆ 'ಕಾಂತಾರ, ಒಂದು ದಂತಕಥೆ' ಟೈಟಲ್‌ ಇರುತ್ತೋ ಅಲ್ಲಿಯವರೆಗೂ ಕಾಂತಾರ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರ ಕೊಡುಗೆ ಈ ಚಿತ್ರಕ್ಕೇ ಇದ್ದೇ ಇದೆ. ಅದನ್ನು ಪತ್ಯಕ್ಷ ಎನ್ನುವ ಬದಲು ಪರೋಕ್ಷ ಎಂದು ಬೇಕಾದರೆ ಹೇಳಬಹುದು. ಆದರೆ, ಸಿನಿಮಾ ಹೆಸರಲ್ಲೇ ರಕ್ಷಿತ್-ರಾಜ್ ಇದ್ದಾರೆ ಅನ್ನೋದು ಸತ್ಯ ಅಲ್ಲವೇ? ನೀವೇನಂತೀರಾ..?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ