ಅದ್ವಿತಿ ಶೆಟ್ಟಿ ಹಿಂದೆ 'ಲವ್ ಯು' ಎನ್ನುತ್ತಾ ಓಡಾಡ್ತಿರೋ ರೂಪೇಶ್ ಶೆಟ್ಟಿ; ಆದ್ರೂ'ವಿಐಪಿ'ಗಳೂ ಬಂದಿದ್ಯಾಕೆ?

Published : Oct 24, 2025, 10:59 PM IST
Roopesh Shetty Adhvithi Shetty

ಸಾರಾಂಶ

ಕನ್ನಡದಲ್ಲಿ ಹೊಸ ಹೊಸ ಪ್ರತಿಭೆಗಳು ಬರುತ್ತಿವೆ. ಅದರಲ್ಲೂ ಮುಖ್ಯವಾಗಿ ತುಳುನಾಡಿನಿಂದ ಬಂದಿರುವ ಅನೇಕರು ಹೊಸತನವನ್ನು ಪ್ರಯೋಗ ಮಾಡಿ ಯಶಸ್ವಿಯಾಗುತ್ತಿದ್ದಾರೆ. ಅದೇ ಸಾಲಿಗೆ ಸೇರಲು ಬಯಸಿ, ತಮ್ಮ ಟ್ಯಾಲೆಂಟ್ ಹಾಗೂ ಪರಿಶ್ರಮದ ಮೂಲಕ ಬರುತ್ತಿದ್ದಾರೆ ರೂಪೇಶ್ ಶೆಟ್ಟಿ. ಮುಂದೆ..

ರೂಪೇಶ್ ಶೆಟ್ಟಿ ಮಿಂಚಿಂಗ್!

ಕನ್ನಡದಲ್ಲಿ ಹೊಸ ಹೊಸ ಪ್ರತಿಭೆಗಳು ಬರುತ್ತಿವೆ. ಅದರಲ್ಲೂ ಮುಖ್ಯವಾಗಿ ತುಳುನಾಡಿನಿಂದ ಬಂದಿರುವ ಅನೇಕರು ಹೊಸತನವನ್ನು ಪ್ರಯೋಗ ಮಾಡಿ ಯಶಸ್ವಿಯಾಗುತ್ತಿದ್ದಾರೆ. ಅದೇ ಸಾಲಿಗೆ ಸೇರಲು ಬಯಸಿ, ತಮ್ಮ ಟ್ಯಾಲೆಂಟ್ ಹಾಗೂ ಪರಿಶ್ರಮದ ಮೂಲಕ ಬರುತ್ತಿದ್ದಾರೆ ರೂಪೇಶ್ ಶೆಟ್ಟಿ. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿಯವರ ನಟನೆ-ನಿರ್ಮಾಣದ ಹೊಸ ಸಿನಿಮಾ ಇದೀಗ ಸಾಕಷ್ಟು ಸೌಂಡ್ ಮಾಡತೊಡಗಿದೆ. ಏನದು ನೋಡಿ..

ಕರಾವಳಿ ಭಾಗದ ಪ್ರತಿಭೆ ಹಾಗೂ ಬಿಗ್ಬಾಸ್ ಖ್ಯಾತಿಯ ರಾಕ್ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ತುಳು ಹಾಗೂ ಕನ್ನಡದ `ಜೈ’ ಸಿನಿಮಾದ ಲವ್ ಎಂಬ ಹಾಡು ರಿಲೀಸ್ ಆಗಿದೆ. ಇದು ಪ್ಯೂರ್ ಲವ್ ಸಾಂಗ್ ಆಗಿರೋದ್ರಿಂದ ನಿಜವಾದ ಪ್ರೇಮಿಗಳು ಹಾಡನ್ನ ಬಿಡುಗಡೆ ಮಾಡಿದ್ದಾರೆ. ಗುರುಕಿರಣ್ ದಂಪತಿ, ನಿರಂಜನ್ ದೇಶಪಾಂಡೆ ದಂಪತಿ, ವಿನಯ್ ಗೌಡ ದಂಪತಿ, ರೂಪೇಶ್ ರಾಜಣ್ಣ ದಂಪತಿ, ಆರ್ಯವರ್ಧನ್ ಗುರೂಜಿ ದಂಪತಿಯಿಂದ ಹಾಡು ರಿಲೀಸ್ ಆಗಿದೆ.

ಲವ್ ಯೂ ಅನ್ನೋ ಹಾಡನ್ನ ಫೈನಲ್ ಮಾಡುವುದಕ್ಕೇನೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. 5 ವರ್ಷನ್ ಕೇಳಿದ ಮೇಲೂ 6ನೇ ವರ್ಷನ್ ಫೈನಲ್ ಮಾಡಲಾಗಿತ್ತು. ಮತ್ತೆ ಮತ್ತೆ ಕೇಳಬೇಕು ಎನ್ನುವಂತ ಫೀಲ್ ಬರಬೇಕು ಎಂಬ ಕಾರಣಕ್ಕೆ ಹಾಡಿನ ಮೇಲೆ ಶ್ರಮ ಹಾಕಲಾಗಿದೆ. ಇಷ್ಟು ಅದ್ಭುತವಾದ ಸಾಹಿತ್ಯಕ್ಕೆ ಧ್ವನಿಯೂ ಅಷ್ಟೇ ಚೆನ್ನಾಗಿ ಕೂಡಿದಾಗ ಹಾಡು ಮತ್ತಷ್ಟು ಖೂಷಿ ಕೊಡುತ್ತದೆ. ಹೀಗಾಗಿ ಹಾಡುವವರ ಹುಡುಕಾಟ ನಡೆಯುತ್ತಿದ್ದಾಗ ರಜತ್ ಹೆಗ್ಡೆ ವಾಯ್ಸ್ ಕಿವಿಗೆ ಬಿದ್ದಿತ್ತು. ಇವರ ಧ್ವನಿ ಪಕ್ಕಾ ಮ್ಯಾಚ್ ಆಗಿತ್ತು. ಹೀಗಾಗಿ ರಜತ್ ಹೆಗ್ಡೆ ಲವ್ ಯೂ ಹಾಡನ್ನ ಹಾಡಿದ್ದಾರೆ.

ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್

ಇನ್ನು, ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್ ಆಗ್ತಾ ಇದ್ದು, ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಅವರೇ ಸಾಹಿತ್ಯ ಬರೆದಿದ್ದು, ಕನ್ನಡಕ್ಕೆ ಕೀರ್ತನ್ ಬಂಡಾರಿ ಅವರು ಬರೆದಿದ್ದಾರೆ. ಹಾಗಂತ ತರ್ಜುಮೆ ಮಾಡಿಲ್ಲ, ಹಾಡಿನ ವಿಚಾರಧಾರೆಯನ್ನು ರೆಫರೆನ್ಸ್ ಇಟ್ಟುಕೊಂಡು, ಆ ಭಾವನೆ, ಆ ಮೀನಿಂಗ್ ಎಲ್ಲವನ್ನು ಅಚ್ಚುಕಟ್ಟಾಗಿ ಕಟ್ಟುಕೊಟ್ಟಿದ್ದಾರೆ. ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಅವರು ಕೂಡ ಈ ಹಾಡನ್ನ ಮನಸ್ಸಿಟ್ಟು ಬರೆದಿದ್ದಾರೆ. ಆದ್ರೆ ಬಹಳ ಕಡಿಮೆ ಸಮಯದಲ್ಲಿ ಅದ್ಭುತವಾದ ಪದಗಳು ಬಂದಿದ್ದೇ ರೋಚಕ. ಒಂದೇ ಒಂದು ದಿನದಲ್ಲಿ ಲವ್ ಯೂ ಹಾಡನ್ನು ಬರೆದಿದ್ದಾರೆ.

ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ

ಇನ್ನು ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಅದ್ವಿತಿಗೆ ಮೊದಲ ತುಳು ಸಿನಿಮಾವಾಗಿದ್ದು, ಅವರ ಮಾತೃಭಾಷೆ ತುಳು ಆಗಿದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರಂತೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ.

ಒಂದು ಹಾಡನ್ನ ಸ್ಪೆಷಲ್ ಆಗಿ ರಿಲೀಸ್ ಮಾಡಬೇಕು ಅಂತ ಅಂದುಕೊಂಡಿದ್ದೆ. ನಾನು ಯಾರನ್ನೆಲ್ಲ ಕರೆದಿದ್ದೆ ಅವರೆಲ್ಲ ಬಂದು ಇವೆಂಟ್ ಅದ್ಭುತವಾಗಿ ಬರುವಂತೆ ಮಾಡುವ ಮೂಲಕ ಶುಭ ಹಾರೈಸಿದರು. ನನ್ನ ಕಾನ್ಸೆಪ್ಟ್ ಇದ್ದದ್ದೇ ರಿಯಲ್ ಲೈಫ್ ನಲ್ಲಿ ಲವ್ ಗೆ ಉದಾಹರಣೆಯಾಗಿದ್ದವರಿಂದ ಹಾಡನ್ನು ರಿಲೀಸ್ ಮಾಡಬೇಕು ಅನ್ನೋ ಆಸೆ ಇತ್ತು. ಅದು ನೆರವೇರಿದೆ. ಹಾಡು ಕೂಡ ಎಲ್ಲರಿಗೂ ತುಂಬಾ ಇಷ್ಟವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ