ಕೆಜಿಎಫ್‌ ಚಿತ್ರಕ್ಕೆ ಯಶ್ ಆಯ್ಕೆಯಾಗಿದ್ದು ಹೀಗೆ.. 'ಆ ನಿರ್ದೇಶಕ'ರಿಂದಲೇ ಈ ರಹಸ್ಯ ಹೊರಬಂತು!

Published : Oct 25, 2025, 12:37 PM IST
Yash Prashanth Neel

ಸಾರಾಂಶ

ಕೆಜಿಎಫ್ ಸಿನಿಮಾದ ಬಳಿಕ, ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ ಅವರು ಏರಿರುವ ಎತ್ತರ ಊಹೆಗೂ ನಿಲುಕದ್ದು. ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಅವರು, ಸದ್ಯ ಪ್ಯಾನ್ ವಲ್ಡ್‌ ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ ಭಾಗ 1' ಶೂಟಿಂಗ್‌ಗಳಲ್ಲಿ ಬ್ಯಸಿಯಾಗಿದ್ದಾರೆ.

ಒನ್ ಅಂಡ್ ಓನ್ಲಿ ಯಶ್ ಯಾಕೆ?

ಕನ್ನಡದ 'ಕೆಜಿಎಫ್' ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಗಿ ಸೂಪರ್ ಹಿಟ್ ಕಂಡು ಹಲವು ದಾಖಲೆ ಮಾಡಿರುವುದು ಗೊತ್ತೇ ಇದೆ. ಕೆಜಿಎಫ್ (KGF) ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ (Prashanth Neel) ಅವರು, ಈ ಚಿತ್ರಕ್ಕೆ ಒನ್ ಅಂಡ್ ಓನ್ಲಿ ಯಶ್ (Yash) ಅವರೇ ಹೀರೋ ಆಗಿ ಆಯ್ಕೆಯಾಗಲು ಏನು ಕಾರಣ ಎಂಬ ಸೀಕ್ರೆಟ್‌ ಅನ್ನು ಪರಭಾಷೆಯ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ..

'ಗೂಗ್ಲಿ' ಸಿನಿಮಾವನ್ನು ನೋಡಿದ್ದೆ

ನಾನು ಫಸ್ಟ್ ಟೈಂ ನಾನು ಯಶ್ (Yash) ನಟನೆಯ 'ಗೂಗ್ಲಿ' ಸಿನಿಮಾವನ್ನು ನೋಡಿದ್ದೆ. ಆ ಚಿತ್ರದಲ್ಲಿ ನಟ ಯಶ್ ಅವರು ಬಬ್ಲಿ ಬಬ್ಲಿ ಪಾತ್ರವನ್ನು ಮಾಡಿದ್ದರು. ಆದರೆ, ಆ ಚಿತ್ರದಲ್ಲಿ ಅವರು ಮಾಡಿದ ಪಾತ್ರವನ್ನು ನಾನು ಬಹಳವಾಗಿ ಮೆಚ್ಚಿ ಅಂದೇ ಅವರ ಫ್ಯಾನ್ ಆಗಿಬಿಟ್ಟೆ. ಬಳಿಕ, ನಾನು ಕೆಜಿಎಫ್ (KGF) ಸಿನಿಮಾದ ಕಥೆಯನ್ನು ನಿರ್ಮಾಪಕರಿಗೆ ಹೇಳಿದಾಗ, ಅವರು ಈ ಕಥೆಗೆ ಯಾವ ಹೀರೋ ಫಿಟ್ ಆಗ್ತಾರೆ ಅಂತ ನಿಮ್ ಮೈಂಡ್‌ನಲ್ಲಿ ಇದೆ ಅಂತ ಕೇಳಿದಾಗ ನಾನು ಹೇಳಿದ್ದು ಯಶ್ ಹೆಸರು ಮಾತ್ರ.

ನಿಜ ಹೇಳಬೇಕು ಅಂದ್ರೆ, ಗೂಗ್ಲಿ (Googly) ಸಿನಿಮಾದಲ್ಲಿ ನಟ ಯಶ್ ಅವರು ಕೆಜಿಎಫ್ ಸಿನಿಮಾದ ರಾಕಿ ಭಾಯ್ ತರಹದ ಪಾತ್ರ ಮಾಡಿರಲಿಲ್ಲ, ಅದರಲ್ಲಿ ಅವರು ರಾಕಿ ಭಾಯ್‌ ಪಾತ್ರಕ್ಕೆ ಸ್ಯೂಟ್ ಆಗುವ ರೀತಿಯೂ ಇರಲಿಲ್ಲ. ಆದರೆ ಅವರೊಳಗೆ ಆ ಆಟಿಟ್ಯೂಡ್ ಇತ್ತು, ನಾನು ಅದನ್ನು ಗಮನಿಸಿದ್ದೆ. ನನ್ನ ಕಲ್ಪನೆಯ ರಾಕಿ ಭಾಯ್ ಪಾತ್ರಕ್ಕೆ ಬೇಕಾದ 'ರಾ ಲುಕ್ ಹಾಗೂ ಆಟಿಟ್ಯೂಡ್' ನಟ ಯಶ್ ಅವರಲ್ಲಿ ನನಗೆ ಕಾಣಿಸಿತ್ತು. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕರಿಗೆ ಹೇಳಿದ್ದು ಯಶ್ ಹೆಸರು ಮಾತ್ರ..' ಎಂದಿದ್ದಾರೆ ಕೆಜಿಎಫ್ ಚಿತ್ರದ ಯಶಸ್ವೀ ನಿರ್ದೇಶಕರಾದ ಪ್ರಶಾಂತ್ ನೀಲ್. ಅದೇ ಯಶ್ ಹೆಸರೇ ಫೈನಲ್ ಆಗಿ, ಸಿನಿಮಾ ಗೆದ್ದು ಇತಿಹಾಸ ನಿರ್ಮಿಸಿದ್ದು ಈಗ ಇತಿಹಾಸ.

ಇಂದು ಪ್ಯಾನ್ ಇಂಟಿಯಾ ಸ್ಟಾರ್ ಆಗಿರುವ ನಟ ಯಶ್

ಕೆಜಿಎಫ್ ಸಿನಿಮಾದ ಬಳಿಕ, ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ ಅವರು ಏರಿರುವ ಎತ್ತರ ಊಹೆಗೂ ನಿಲುಕದ್ದು. ಇಂದು ಪ್ಯಾನ್ ಇಂಟಿಯಾ ಸ್ಟಾರ್ ಆಗಿರುವ ನಟ ಯಶ್ ಅವರು, ಸದ್ಯ ಪ್ಯಾನ್ ವಲ್ಡ್‌ ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ ಭಾಗ 1' ಶೂಟಿಂಗ್‌ಗಳಲ್ಲಿ ಬ್ಯಸಿಯಾಗಿದ್ದಾರೆ. ಇಂದು ಅವರು ಕನ್ನಡದ ನಟರಾಗಿ ಮಾತ್ರ ಉಳಿದಿಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜಗತ್ತೇ ಗುರುತಿಸುವಂತೆ ಬೆಳದು ನಿಂತಿದ್ದಾರೆ. ಒಮ್ಮೆ ಟಾಕ್ಸಿಕ್ ಸಿನಿಮಾ ಸೂಪರ್ ಹಿಟ್ ಆದರೆ, ಆಗ ಅವರು ಇಂಟರ್‌ನ್ಯಾಷನಲ್ ಸ್ಟಾರ್ ಅಗಿ ಮೆರೆಯುವುದು ಖಂಡಿತ.

ಇನ್ನು, ಕೆಜಿಎಫ್ ಸಿನಿಮಾ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಇಂದು ಕನ್ನಡ ಸಿನಿಮಾ ಉದ್ಯಮವನ್ನು ಮೀರಿ ಬೆಳೆದಿದ್ದಾರೆ. ಅವರೀಗ ಹೆಚ್ಚಾಗಿ ಟಾಲಿವುಡ್ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ನಟರಾದ ಪ್ರಭಾಸ್ ಹಾಗೂ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಪ್ರಶಾಂತ್ ನೀಲ್ ಕೂಡ ಇಂದು ಯಶಸ್ವೀ ನಿರ್ದೇಶಕರಾಗಿ ಬೆಳೆದುನಿಂತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!