ಅಂಗಡಿಯಲ್ಲಿ ಬಟ್ಟೆ ಖರೀದಿಸುತ್ತಿದ್ದ ರಘು ಮುಖರ್ಜಿಗೆ ಮಾಡಲಿಂಗ್ ಆಫರ್‌ ಕೊಟ್ಟ ಪ್ರಸಾದ್ ಬಿಡ್ಡಪ್ಪ; ರೋಚಕ ಟ್ವಿಸ್ಟ್‌ ರಿವೀಲ್!

By Vaishnavi Chandrashekar  |  First Published Nov 21, 2024, 12:55 PM IST

ಮಾಡಲಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದು ಹೇಗೆ ಎಂದು ರಿವೀಲ್ ಮಾಡಿದ ರಘು ಮುಖರ್ಜಿ. ಎಂದಿಗೂ ಪ್ರಸಾದ್‌ ಸರ್‌ನ ಮರೆಯುವುದಿಲ್ಲ ಎಂದ ನಟ....


2002ರಲ್ಲಿ ಗಾಸಿಮ್ ಮಿಸ್ಟರ್ ಇಂಡಿಯಾ ಟೈಟಲ್ ಪಡೆದ ರಘು ಮುಖರ್ಜಿ ಅದೇ ವರ್ಷ ಮಿಸ್ಟರ್ ಇಂಟರ್‌ನ್ಯಾಷನಲ್ ಟೈಟಲ್ ಪಡೆಯುತ್ತಾರೆ.  20ನೇ ವಯಸ್ಸಿಗೆ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ರಘು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಪ್ಯಾರಿಸ್ ಪ್ರಣಯ ಸಿನಿಮಾದಲ್ಲಿ ಅಭಿನಯಿಸುತ್ತಾರೆ.ಇದಾದ ಮೇಲೆ 2009ರಲ್ಲಿ ಸವಾರಿ ಚಿತ್ರದಲ್ಲಿ ಅಭಿನಯಸಿ ಕನ್ನಡಿಗರ ಮನಸ್ಸಿಗೆ ಹತ್ತಿರವಾಗುತ್ತಾರೆ. ಸವಾರಿ ಚಿತ್ರದ ಮೂಲಕ ಸಿಕ್ಕಾಪಟ್ಟೆ ಮಹಿಳಾ ಅಭಿಮಾನಿಗಳನ್ನು ಪಡೆಯುತ್ತಾರೆ ರಘು. ಇತ್ತೀಚಿಗೆ ಸೂಪರ್ ಹಿಟ್ ಕಂಡ ಹೆಡ್‌ಬುಷ್, ಇನ್‌ಸ್ಪೆಕ್ಟರ್ ವಿಕ್ರಮ್, ಕಾಫಿ ತೋಟ, ಜೆಸ್ಸಿ, ಮೀನಾಕ್ಷಿ, ಸೂಪರ್ ರಂಗ ಸಿನಿಮಾದಲ್ಲಿ ನಟಿಸಿದ್ದಾರೆ. 

ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಅಂತ ರಘು ಮುಖರ್ಜಿ ಆಲೋಚನೆ ಮಾಡಿದ್ದು ಹೇಗೆ? ಅವಕಾಶ ಸಿಕ್ಕಿದ್ದು ಹೇಗೆ ಎಂದು ರ್ಯಾಪಿಡ್ ರಶ್ಮಿ ಜಸ್ಟ್‌ ಕ್ಯೂರಿಯಸ್‌ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 

Latest Videos

undefined

2028ರವರೆಗೂ ಯಶ್ ದೆಸೆ ಚೆನ್ನಾಗಿದೆ, ರಿಷಬ್ ಶೆಟ್ಟಿ ಕಾಂತಾರ 2 ಲಕ್ ಕೊಡುತ್ತಾ? 

'ಬೆಂಗಳೂರಿನ ಮಾಲ್‌ನಲ್ಲಿ ಇರುವ ಶಾಪರ್ ಸ್ಟಾಪ್‌ನಲ್ಲಿ ನಾನು ಯಾವುದೋ ಟೀ-ಶರ್ಟ್ ಶಾಪಿಂಗ್ ಮಾಡುತ್ತಿದ್ದೆ ಆಗ ನನ್ನನ್ನು ಗುರುತಿಸಿ ಅವರೇ ಬಂದು ಹಾಯ್ ನಾನು ಪ್ರಸಾದ್ ಬಿಡ್ಡಪ್ಪ ಅಂದ್ರು. ಹೇಳಿ ಸರ್ ಏನು ಅಂತ ಕೇಳಿದೆ ನೀನು ಮಾಡಲಿಂಗ್ ಮಾಡುವ ಆಲೋಚನೆ ಮಾಡಿದ್ಯಾ ಎಂದು ನನ್ನನ್ನು ಕೇಳಿದ್ದರು ನಾನು ಅವರನ್ನು ನೋಡುತ್ತಿದ್ದೆ...ಯಾಕೆ ನೀನು ನನ್ನ ಆಫೀಸ್‌ಗೆ ಬರಬಾರದು ಎಂದು ವಿಸಿಟಿಂಗ್ ಕಾರ್ಡ್‌ ಕೊಟ್ಟರು ಸರಿ ಎಂದು ಭೇಟಿ ನೀಡಿದೆ. ಒಂದು ಲೆಟರ್ ಕಳುಹಿಸಿದ್ದರು ಅದರಲ್ಲಿ ನೋಡಿದರೆ ನೀವು ಇಂತಿಷ್ಟು ದಿನ ಟ್ರೈನಿಂಗ್‌ಗೆ ಬರಬೇಕು, ಈ ರೀತಿ ಡ್ರೆಸ್‌ಗಳು ಇರಬೇಕು, ಇಂತಿಷ್ಟು ಫಾರ್ಮಲ್ ಡ್ರೆಸ್ ಇರಬೇಕು ಹಾಗೂ ಶೂ ಎಂದೆಲ್ಲಾ...ಅದನ್ನು ಓಡಿ ಎಲ್ಲಿಂದ ತರೋದು ಇಷ್ಟನ್ನು ಅಂತ. ಸೈತ್‌ ಝೋನ್‌ನಲ್ಲಿ ನಡೆಯುತ್ತಿರುವುದು ಸೆಲೆಕ್ಷನ್ ಅಂದ್ರು ಪ್ರಸಾದ್‌ ಸರ್‌ಗೆ ತೋರಿಸಿದೆ ಕಂಗ್ರಾಟ್ಸ್‌ ಹೇಳಿದ್ದರು ಲೆಟರ್ ಓದಿ ನಾವು ಮೂರು ಜನ ಹುಡುಗರು ಹೋಗಿದ್ವಿ..ಅಲ್ಲಿ ನೋಡಿದರೆ ನೀವು ಮಿಸ್ಟರ್ ಇಂಡಿಯಾಗೆ ಸೆಲೆಕ್ಟ್‌ ಆಗಿದ್ದೀರಿ ಅಂದ್ರು' ಎಂದು ರಘು ಮುಖರ್ಜಿ ಮಾತನಾಡಿದ್ದಾರೆ.

6 ತಿಂಗಳಾದ್ರೂ ಬ್ಯಾಗ್‌ನಲ್ಲಿ ಚಾಕೊಲೇಟ್ ಹಾಗೆ ಇರುತ್ತೆ; ಮಿಲನಾ ಹ್ಯಾಂಡ್‌ಬ್ಯಾಗ್‌ ಸೀಕ್ರೆಟ್‌

'ಸೆಲೆಕ್ಟ್ ಆದ ಮೇಲೆ ಪ್ರಸಾದ್‌ ಸರ್ ಬಳಿ ಮತ್ತೆ ಹೋಗಿ ನೋಡಿ ಸರ್ ಈ ರೀತಿ ಬೇಕು ಎಂದು ಮೆನ್ಶನ್ ಮಾಡಿದ್ದಾರೆ ಎಂದು..ತಕ್ಷಣವೇ ಪ್ರತಿಷ್ಟಿತ ಡಿಸೈನರ್‌ಗಳ ಜೊತೆ ಮಾತನಾಡಿದರು ..ಅವರಿಂದ ದೊಡ್ಡ ದೊಡ್ಡ ಬ್ಯಾಗ್‌ ಬಟ್ಟೆಗಳು ಬಂತು ಯಾವುದೇ ಹಣ ಪಡೆಯಲಿಲ್ಲ. ಪ್ರಸಾದ್ ಬಿಡ್ಡಪ್ಪ ಸರ್ ಇರಲಿಲ್ಲ ಅಂದಿದ್ದರೆ ನಾನು ಜೀವನದಲ್ಲಿ ಇಷ್ಟು ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಿಸ್ಟರ್ ಇಂಡಿಯಾ ಸ್ಪರ್ಧಿಗೆ ಕಾಲಿಟ್ಟಾಗ 38 ಸಾವಿರ ಅಪ್ಲಿಕೇಷನ್‌ ಬಂದಿತ್ತು ಆದರೂ ನಾನು ಮಿಸ್ಟರ್ ಇಂಡಿಯಾ ಅವಾರ್ಡ್ ಗೆದ್ದೆ. ಅವಾರ್ಡ್‌ ಗೆದ್ದ ಮೇಲೆ ಹಠಕ್ಕೆ ಬಿದ್ದು ತುಂಬಾ ಕಷ್ಟ ಪಟ್ಟೆ'ಎಂದು ರಘು ಮುಖರ್ಜಿ ಹೇಳಿದ್ದಾರೆ.

 

click me!