ಬೆನ್ನಿನ ಮೇಲೆ ಅಂಬರೀಷ್ ಎತ್ತಿಕೊಂಡು ಕೋಪ ಕಮ್ಮಿಆಗಲೆಂದು ಬಯಸಿದ್ರಾ ಸುಧಾರಾಣಿ!

By Shriram Bhat  |  First Published Nov 21, 2024, 12:04 PM IST

ನಾನು ಹೇಳಿದ್ದೆ..., ರೀ ರಿಸ್ಕು ಅವೆಲ್ಲಾ.. ಆ ಹುಡುಗಿ ಇರೋದು ತುಂಬಾ ತೆಳ್ಳಗೆ, ಜೊತೆಗೆ ಅಂಬರೀಷ್ ಅವ್ರು ಜಾಸ್ತಿನೇ ತೂಕ ಇರೋ ವ್ಯಕ್ತಿ ಅಂತ.. ಎಲ್ಲಾದ್ರೂ ಸೊಂಟಗಿಂಟ ಮುರಿದು ಹೋಗ್ಬಿಟ್ರೆ, ಶೂಟಿಂಗ್ ನಿಂತೇ ಹೊಗುತ್ತೆ.. ಆದ್ರೆ, ಸುಧಾರಾಣಿ ಅವ್ರು, 'ಇಲ್ಲ ಸರ್ ನಾನು ಮಾಡ್ತೀನಿ.. 


ಆ ಹುಡುಗಿ ಬೆನ್ನಮೇಲೆ ಅಂಬರೀಷ್ (Rebel Star Ambareesh) ಅವ್ರನ್ನ ಎತ್ತಿದಾರೆ ಆ ಸಿನಿಮಾದಲ್ಲಿ.. ಅದು ಆ ಸಿನಿಮಾ ಹಾಡಿನಲ್ಲಿ ಇದೆ.. ನಟಿ ಸುಧಾರಾಣಿಗೆ (Sudharani) ಪಾತ್ರ ಇಂಪಾರ್ಟೆಂಟ್.. ಅಂಬರೀಷ್ ಅವ್ರು ಆ ಕಾಲದಲ್ಲಿ ಹೆಂಗೆ ಇದ್ರು ಅಂತ ಗೊತ್ತಲ್ಲ, ಆದ್ರೂ ಒಂದು ಹಾಡಿನಲ್ಲಿ ನಟ ಅಂಬರೀಷ್ ಅವರನ್ನು ಬೆನ್ನಿನ ಮೇಲೆ ಎತ್ತಿಕೊಂಡಿದ್ದಾರೆ. ನಮ್ಮ ಡಾನ್ಸ್ ಮಾಸ್ಟರ್‌ಗಳಿಗೆ ಅಂಥದ್ದೆಲ್ಲಾ ಕಾಮನ್, ವಿಶೇಷ ಏನಿಲ್ಲ, ಚೆನ್ನಾಗಿ ಕಾಣಿಸಿದ್ರೆ ಸಾಕು ಅಂತ ಅವ್ರು ಮಾಡಿಸ್ತಾರೆ... 

ನಾನು ಹೇಳಿದ್ದೆ..., ರೀ ರಿಸ್ಕು ಅವೆಲ್ಲಾ.. ಆ ಹುಡುಗಿ ಇರೋದು ತುಂಬಾ ತೆಳ್ಳಗೆ, ಜೊತೆಗೆ ಅಂಬರೀಷ್ ಅವ್ರು ಜಾಸ್ತಿನೇ ತೂಕ ಇರೋ ವ್ಯಕ್ತಿ ಅಂತ.. ಎಲ್ಲಾದ್ರೂ ಸೊಂಟಗಿಂಟ ಮುರಿದು ಹೋಗ್ಬಿಟ್ರೆ, ಸ್ವಲ್ಪ ದಿನ ಶೂಟಿಂಗ್ ನಿಂತೇ ಹೊಗುತ್ತೆ.. ಆದ್ರೆ, ಸುಧಾರಾಣಿ ಅವ್ರು, 'ಇಲ್ಲ ಸರ್ ನಾನು ಮಾಡ್ತೀನಿ ಅಂತ, ಆದ್ರೆ ಅವ್ರ ಅಮ್ಮ ಬೇಡ ಅಂತ.. 

Latest Videos

undefined

ಕೊಲ್ಕತ್ತಾದಲ್ಲಿ ಕಣ್ಣೀರು ಹಾಕಿದ ನಟಿ ಸುಧಾರಾಣಿ; ಅಂಥ ಪರಿಸ್ಥಿತಿ ಅಲ್ಲೇನಾಯ್ತು ನೋಡಿ!

ನನ್ನ ಅಮ್ಮನ ಆಚೆ ಕಳಿಸಿ ಮಾಡ್ತೀನಿ ಅಂತ ಅವ್ರು ಸುಧಾರಾಣಿ.. ಅದಕ್ಕೆ ನಾನು, 'ಸರಿನಮ್ಮ ಆದ್ರೆ ನಂಗಂತೂ ಭಯ ಆಗ್ತಿದೆ ಅಂದೆ ನಾನು.. ಆ ಹುಡುಗಿ ಅಂಬರೀಷ್ ಅವ್ರನ್ನ ಎತ್ತಿದಾರೆ ಬೆನ್ನಮೇಲೆ ಲಿಟರಲೀ.. ಅದು ಸಿನಿಮಾ ಸಾಂಗ್‌ನಲ್ಲಿ ಇದೆ ಆ ಶಾಟ್‌.. 'ಕೋಪಾನ ಮದನ ತಾಪಾನ ಮದನಾ..' ಅನ್ನೋ ಹಾಡಲ್ಲಿ ಆ ಶಾಟ್ ಇದೆ ನೋಡಿ.. 'ಎಂದು ಸತ್ಯ ಸಂಗತಿಯನ್ನು ಬಯಲಿಗೆಳೆದಿದ್ದಾರೆ ನಿರ್ದೇಶಕ ಪಿ ಹೆಚ್ ವಾಸು.. 

ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಧಾರಾಣಿ ಜೋಡಿಯ 'ಮುಂಜಾನೆಯ ಮಂಜು' ಚಿತ್ರದ ಹಾಡಿನಲ್ಲಿ ಈ ಘಟನೆ ನಡೆದಿದೆಯಂತೆ. ಸಿನಿಪ್ರೇಕ್ಷಕರಿಗೆ 'ಕೋಪಾನ ಮದನ ತಾಪಾನ ಮದನಾ..' ಎಂಬ ಹಾಡಿನಲ್ಲಿ ನಟಿ ಸುಧಾರಾಣಿ ಅವರು ಅಂಬರೀಷ್ ಅವ್ರನ್ನ ಎತ್ತಿಕೊಂಡಿರುವ ಶಾಟ್ ಕಾಣಸಿಗುತ್ತದೆ. ಆದರೆ, ತೆರೆಯ ಹಿಂದೆ ಇಷ್ಟೆಲ್ಲಾ ಕಥೆಗಳು ಆಗಿರುತ್ತವೆ ಎಂಬುದು ಹೊರಜಗತ್ತಿಗೆ ತಿಳಿದಿರುವುದಿಲ್ಲ. 

ಡಾ ರಾಜ್‌ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!

ಕೆಲವೊಮ್ಮೆ ನಿರ್ದೇಶಕರು, ಕೆಲವೊಮ್ಮೆ ಡಾನ್ಸ್ ಮಾಸ್ಟರ್‌ಗಳು ಹಾಗೂ ಇನ್ನೂ ಕೆಲವೊಮ್ಮೆ ಸಾಹಸ ನಿರ್ದೇಶಕರು ರಿಸ್ಕ್ ತೆಗೆದುಕೊಂಡಿರುತ್ತಾರೆ. ಬಹಳಷ್ಟು ಬಾರಿ, ಆಕ್ಷನ್‌ ಸೀನ್‌ಗಳು ಹಾಗೂ ಡಾನ್ಸ್‌ ಸ್ಟೆಪ್ಸ್‌ಗಳಲ್ಲಿ ಸ್ವತಃ ನಟ ಅಥವಾ ನಟಿಯರೇ ತುಂಬಾನೇ ರಿಸ್ಕ್‌ ತೆಗೆದುಕೊಂಡಿರುತ್ತಾರೆ. ಆಗ ಅವಘಡ ಏನೂ ನಡೆಯದಿದ್ದರೆ, ಎಲ್ಲವೂ ಸುಸೂತ್ರವಾಗಿ ನಡೆದರೆ ಏನೂ ಸಮಸ್ಯೆ ಇರೋದಿಲ್ಲ. ಅದನ್ನು ಯಾವತ್ತೋ ಒಂದು ದಿನ ಹೇಳಿಕೊಂಡು ಎಲ್ಲರೂ ಎಂಜಾಯ್ ಮಾಡಬಹುದು.

ಅಂಬರೀಷ್-ಸುಧಾರಾಣಿ ಜೋಡಿಯ 'ಮುಂಜಾನೆಯ ಮಂಜು' ಸಿನಿಮಾದಲ್ಲಿ ಕೂಡ ಇದೇ ಆಗಿರುವುದು. ಆದರೆ, ಇಂತಹ ರಿಸ್ಕ್‌ ತೆಗೆದುಕೊಂಡಾಗ ಒಮ್ಮೆ ಏನೋ ಹೆಚ್ಚುಕಡಿಮೆ ಆಗಿ ಅಪಾಯ ಸಂಭವಿಸಿಬಿಟ್ಟರೆ ಆಗ, ಚಿತ್ರದ ನಿರ್ದೇಶಕರು, ನಿರ್ಮಾಪಕರಿಕೆ ಕೆಟ್ಟ ಹೆಸರು ಬರುತ್ತದೆ. 

ಮನೆಗೆ ಚಿರು ಹೆಸರಿಲ್ಲ ಎಂದಿದ್ದ ಅಭಿಮಾನಿಗಳೇ 'ದೇವತೆ ನಮ್ಮ ಕರುನಾಡ ಅತ್ತಿಗೆ' ಅಂದಿದ್ಯಾಕೆ?

ಜೊತೆಗೆ, ಸಂಬಂಧಪಟ್ಟವರು ಯಾರೇ ಆಗಿರಲಿ, ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿ ತಿಂಗಳುಗಟ್ಟಲೆ ಅಥವಾ ವರ್ಷಾನುಗಟ್ಟಲೇ ನರಳಬೇಕಾಗುತ್ತದೆ. ಇನ್ನೂ ಕೆಲವೊಮ್ಮ ಪ್ರಾಣಾಪಾಯವೂ ಸಂಭವಿಸಬಹುದು. ಒಟ್ಟಿನಲ್ಲಿ, ಪ್ರತಿಯೊಂದು ಸಿನಿಮಾ ಹಿಂದೆ ಹಲವು ಕಥೆಗಳಿರುತ್ತವೆ, ಅದರ ಜೊತೆಜೊತೆಯಲ್ಲಿ ಹಲವಾರು ಪಾಠಗಳಿರುತ್ತವೆ.  

click me!