ನಟ ರಾಘವೇಂದ್ರ ರಾಜ್‌ಕುಮಾರ್ ನಟನೆಯ 25ನೇ ಸಿನಿಮಾ ಆಡಿಸಿದಾತ. ಡಿ ಬೀಟ್ಸ್ ಮ್ಯೂಸಿಕ್ ವಲ್ಡ್‌ರ್ ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ.
ನಟ ರಾಘವೇಂದ್ರ ರಾಜ್‌ಕುಮಾರ್ ನಟನೆಯ 25ನೇ ಸಿನಿಮಾ ಆಡಿಸಿದಾತ. ಡಿ ಬೀಟ್ಸ್ ಮ್ಯೂಸಿಕ್ ವಲ್ಡ್‌ರ್ ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ.
ಪುನೀತ್ ರಾಜ್‌ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಲಾಂಗು, ರಾಜ್‌ಕುಮಾರ್ ಫೋಟೋ ಹೊತ್ತ ಆಟೋ, ಹಣ, ರಾತ್ರಿಯ ಬೀದಿಗಳು, ಕ್ರಿಮಿನಲ್ ಲುಕ್ಕು... ಹೀಗೆ ಹಲವು ಕಾರಣಗಳಿಗಾಗಿ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಫಣೀಶ್ ಭಾರದ್ವಾಜ್ ನಿರ್ದೇಶನ, ಎಚ್ ಹಾಲೇಶ್ ನಿರ್ಮಾಣದ ಸಿನಿಮಾ ಇದು.
ರಾಘವೇಂದ್ರ ರಾಜ್‌ಕುಮಾರ್ 25ನೇ ಸಿನಿಮಾ; ಗಣೇಶ ಹಬ್ಬಕ್ಕೆ 'ಆಡಿಸಿದಾತ' ಟ್ರೈಲರ್!
ಬರೋಬ್ಬರಿ 13 ವರ್ಷದ ನಂತರ ರಾಘವೇಂದ್ರ ರಾಜ್‌ಕುಮಾರ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಆಡಿಸಿದಾತ ಸಿನಿಮಾ ಮೂಲಕ ಅವರು ಕಂ ಬ್ಯಾಕ್ ಮಾಡಲಿದ್ದಾರೆ. ಇವರ ಅಮ್ಮನ ಮನೆ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿತ್ತು. ಇದೀಗ ಆಡಿಸಿದಾತ ಸಿನಿಮಾ ನಿರೀಕ್ಷೆ ಹುಟ್ಟು ಹಾಕಿದೆ.
ಆಡಿಸಿದಾತ ಸಿನಿಮಾದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ರಾಘವೇಂದ್ರ ರಾಜ್‌ಕುಮಾರ್. ಮಚ್ಚು, ಎಣ್ಣೆಯ ಬಾಟಲಿ, ಗಾಳಿಯಲ್ಲಿ ತೇಲುತ್ತಾ ಬರುವ ನೋಟುಗಳು, ವಿಂಟರ್ ಹಾಕಿದ ಗೆಟಪ್ ರಾಘವೇಂದ್ರ ರಾಜ್‌ಕುಮಾರ್‌ಗೆ ಡಿಫರೆಂಟ್ ಲುಕ್ ಕೊಟ್ಟಿದೆ.