
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಒಂದೂವರೆ ವರ್ಷಗಳಾಯಿತು. ಆದರೂ ಅಪ್ಪು ಇನ್ನಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ದಿನ ಪ್ರತಿ ಕ್ಷಣ ಅಪ್ಪು ನೆನಪು ಅಭಿಮಾನಿಗಳು ಹಾಗೂ ಕುಟುಂಬದವರನ್ನು ಕಾಡುತ್ತಿದೆ. ಕುಟುಂಬದವರು ಅಪ್ಪು ಅಗಲಿಕೆಯ ನೋವಿನಿಂದ ಇನ್ನೂ ಹೊರ ಬಂದಿಲ್ಲ. ಅಪ್ಪು ಪ್ರೀತಿಯ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ತಮ್ಮನನ್ನು ನೆನೆದು ಕಣ್ಣೀರು ಹಾಕುತ್ತಾರೆ. ತಮ್ಮನ ನೆನಪುಗಳಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ರಾಘವೇಂದ್ರ ರಾಜ್ ಕುಮಾರ್ ಪುನೀತ್ ರಾಜ್ ಹೆಸರನ್ನು ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಅಭಿಮಾನಿಗಳು ನೆಚ್ಚಿನ ನಟನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೀರಿ. ಅಪ್ಪು ಹೆಸರು ಅನೇಕ ಅಭಿಮಾನಿಗಳ ದೇಹದಲ್ಲಿ ಹಚ್ಚೆಯಾಗಿದೆ. ಅಪ್ಪು, ಪುನೀತ್ ಎನ್ನುವ ಹೆಸರು ಹಾಗೂ ಪವರ್ ಸ್ಟಾರ್ ಚಿತ್ರವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇದೀಗ ರಾಘವೇಂದ್ರ ರಾಜು ಕುಮಾರ್ ಕೂಡ ಟ್ಯೂಟೂ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಪ್ಪು ಹೆಸರು ಮಾತ್ರವಲ್ಲದೆ ಅಪ್ಪು ಮುದ್ದಿನ ಇಬ್ಬರೂ ಹಣ್ಣುಮಕ್ಕಳ ಹೆಸರನ್ನು ಟ್ಯೂಟ್ ಹಾಕಿಸಿಕೊಂಡಿದ್ದಾರೆ.
ರಾಘಣ್ಣ ಎದೆಯ ಮೇಲೆ ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಪವರ್ ಸ್ಟಾರ್ ದೊಡ್ಡ ಮಗಳು ವಂದಿತಾ ಅವರನ್ನು ಪ್ರೀತಿಯಿಂದ ಟೊಟೊ ಎಂದು ಕರೆಯುತ್ತಾರೆ. ಎರಡನೇ ಮಗಳು ಧೃತಿ ಅವರನ್ನು ನುಕ್ಕಿ ಎಂದು ಕರೆಯುತ್ತಾರೆ. ನಿಕ್ ನೇಮ್ ಅನ್ನೇ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್.
ಡಾ. ರಾಜ್ ಕುಮಾರ್ ಸಿನಿಮಾ ಕಥೆ ಕೇಳಿದ ತಕ್ಷಣ ಮಾಡುತ್ತಿದ್ದ ಮೊದಲ ಕೆಲಸವೇನೆಂದು ಬಹಿರಂಗ ಪಡಿಸಿದ ರಾಘಣ್ಣ
ಪುನೀತ್ ಎಂದರೆ ಇಡೀ ಕುಟುಂಬಕ್ಕೆ ಅಚ್ಚುಮೆಚ್ಚು. ಎಲ್ಲರೂ ತುಂಬಾ ಇಷ್ಟ ಪಡುತ್ತಿದ್ದರು. ಹಾಗೆ ಅಪ್ಪುಗೂ ಕುಟುಂಬದವರ ಮೇಲೆ ವಿಶೇಷವಾದ ಪ್ರೀತಿ ಮತ್ತು ಗೌರವ. ತಮ್ಮನ ಮೇಲಿನ ಪ್ರೀತಿಯನ್ನು ರಾಘಣ್ಣ ಎದೆಯ ಮೇಲೆ ಅಚ್ಚೊತ್ತಿಸಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.
ಯುವ ರಾಜ್‌ಗೆ ಅಪ್ಪು ಸ್ಥಾನ ಕೊಡಬೇಡಿ, ಅವರವರೇ ಪರಿಶ್ರಮ- ವ್ಯಕ್ತಿತ್ವ ಬೆಳಸಿಕೊಳ್ಳಬೇಕು: ರಾಘವೇಂದ್ರ ರಾಜ್‌ಕುಮಾರ್
ರಾಘವೇಂದ್ರ ರಾಜ್ ಕುಮಾರ್ ಸಿನಿಮಾಗಳು
ರಾಘಣ್ಣ ಅನೇಕ ವರ್ಷಗಳ ಬಳಿಕ ಸಿನಿಮಾರಂಗದಲ್ಲಿ ಮತ್ತೆ ಸಕ್ರೀಯರಾಗಿದ್ದಾರೆ. ಬೆಳ್ಳಿ ಪರದೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. 2019ರಲ್ಲಿ ಅಮ್ಮನ ಮನೆ ಸಿನಿಮಾ ಮೂಲಕ ರಾಘಣ್ಣ ಅನೇಕ ವರ್ಷಗಳ ಬಳಿಕ ತೆರೆಮೇಲೆ ಬಂದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದರು. ತಮ್ಮನ ಜೇಮ್ಸ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.