ಕೆಂಪು ಸೀರೆಯಲ್ಲಿ Radhika Pandit ಮಿಂಚಿದ್ದೇ ತಡ… ‘ರಾಮಾಯಣ’ದ ಸೀತೆ ಪಾತ್ರಕ್ಕೆ ಇವರೇ ಬೆಸ್ಟ್ ಎಂದ ಬಾಲಿವುಡ್

Published : Aug 10, 2026, 04:32 PM IST
Radhika Pandit

ಸಾರಾಂಶ

Radhika Pandit:‘ರಾಮಾಯಣ’ ಟ್ರೈಲರ್ ಬಿಡುಗಡೆಯಾದ ಬಳಿಕ, ಸಿನಿಮಾ ಕುರಿತು, ತಾರಾಗಣದ ಕುರಿತು ಹಾಗೂ ಕಾಸ್ಟ್ಯೂಮ್ ಕುರಿತು ಸಿಕ್ಕಾಪಟ್ಟೆ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ‘ಟಾಕ್ಸಿಕ್’ ಟ್ರೈಲರ್ ಲಾಂಚ್ ಬಳಿಕ, ಹಿಂದಿ ಸಿನಿರಸಿಕರ ಚಿತ್ತ ರಾಧಿಕಾ ಪಂಡಿತ್ ಕಡೆಗೆ ವಾಲಿದೆ. ಏನು ಹೇಳ್ತಿದ್ದಾರೆ ಗೊತ್ತಾ?

‘ರಾಮಾಯಣ’ ಸಿನಿಮಾ ಕುರಿತು ಭಾರಿ ಚರ್ಚೆ

ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ಬಿಗ್ ಬಜೆಟ್ ಸಿನಿಮಾ ‘ ರಾಮಾಯಣ’ದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಹಲವಾರು ದಾಖಲೆಗಳನ್ನು ಸಹ ಈ ಟ್ರೈಲರ್ ಈಗಾಗಲೇ ಮುರಿದಿದೆ. ಆದರೆ ಟ್ರೈಲರ್ ಬಿಡುಗಡೆಯಾದಾಗಿನಿಂದ, ಸಿನಿಮಾ ಕುರಿತು ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಕೆಲವರು ಸೂಪರ್ ಎಂದರೆ, ಇನ್ನೂ ಕೆಲವರಿಗೆ ಸೀತೆ, ರಾಮನ ಪಾತ್ರದಲ್ಲಿ ನಟಿಸಿರುವ ನಟ-ನಟಿಯರೇ ಇಷ್ಟವಾಗಿರಲಿಲ್ಲ. ಸೀತೆ ಪಾತ್ರದ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದಿದ್ದೂ ಇದೆ. ಸಾಯಿ ಪಲ್ಲವಿ ಬದಲು ಬೇರೆ ನಟಿ ಈ ಪಾತ್ರವನ್ನು ಮಾಡಬೇಕಿತ್ತು. ಕಾಸ್ಟ್ಯೂಮ್ ಡಿಸೈನ್ ಚೆನ್ನಾಗಿಲ್ಲ, ಹೀಗೆ ಹಲವಾರು ಟೀಕೆಗಳು ಕೇಳಿಬಂದಿತ್ತು. ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಬದಲಾಗಿ, ನಯನತಾರಾ, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾನಿ, ಯಾಮಿ ಗೌತಮಿ ಹೀಗೆ ಹಲವರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಬಳಿಕ, ರಾಧಿಕಾ ಪಂಡಿತ್ ಹೆಸರು ಭಾರಿ ಸದ್ದು ಮಾಡುತ್ತಿದೆ.

ಸೀತೆ ಪಾತ್ರಕ್ಕೆ ರಾಧಿಕಾ ಪಂಡಿತ್ ಬೆಸ್ಟ್

‘ಸೀತೆ’ ಪಾತ್ರಕ್ಕೆ ಯಾರು ಸೂಕ್ತರು ಎಂಬ ಚರ್ಚೆ ಶುರುವಾಗುತ್ತಿದ್ದಂತೆ ಅಭಿಮಾನಿಗಳು ತಮ್ಮದೇ ಆದ ಕಾಸ್ಟಿಂಗ್ ಕಲ್ಪನೆಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು. ಈ ಸಮಾರಂಭದಲ್ಲಿ ಯಶ್ ಜೊತೆಗೆ ಇದ್ದ ಪತ್ನಿ ರಾಧಿಕಾ ಪಂಡಿತ್ ಹೆಚ್ಚು ಗಮನ ಸೆಳೆದರು. ಅವರ ಸೊಗಸಾದ ಟ್ರೆಡಿಷನಲ್ ಲುಕ್, ಆಕರ್ಷಕ ವ್ಯಕ್ತಿತ್ವ ಹಾಗೂ ರೆಡ್ ಮತ್ತು ಗೋಲ್ಡನ್ ಸೀರೆಯಲ್ಲಿನ ಮುದ್ದಾದ ಲುಕ್‌ ನೋಡಿ, ಕನ್ನಡಿಗರಷ್ಟೇ ಅಲ್ಲ, ಬಾಲಿವುಡ್ ಸಿನಿರಸಿಕರು ಸಹ ನಟಿಯ ಅಂದಕ್ಕೆ ಮನಸೋತಿದ್ದಾರೆ. ‘ರಾಮಾಯಣ’ದ ಸೀತೆಯ ಪಾತ್ರಕ್ಕೆ ಇವರೇ ಹೇಳಿ ಮಾಡಿಸಿದಂತೆ ಕಾಣುತ್ತಾರೆ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ, ಟ್ರೈಲರ್ ಬಿಡುಗಡೆಯಾದ ಮೇಲೆ ಕಾಸ್ಟ್ ಬಗ್ಗೆ ಮಾತನಾಡುವುದು ಜನರ ವಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟದ್ದು. ಆದರೆ ರಾಧಿಕಾ ಅವರ ಈ ಲುಕ್ ಮತ್ತು ಅವರಲ್ಲಿರುವ ಆ ಸಾಂಪ್ರದಾಯಿಕ ಕಳೆ, ಸೀತೆಯ ಪಾತ್ರವನ್ನು ನೆನಪಿಸುವಂತಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವೊಮ್ಮೆ ಒಂದು ಸುಂದರವಾದ ಕ್ಯಾಮೆರಾ ಕ್ಷಣವೇ ಸಾಕು, ಅಭಿಮಾನಿಗಳ ಕಲ್ಪನೆಯಲ್ಲಿ ಇಡೀ ಪಾತ್ರವೇ ಜೀವ ಪಡೆದುಕೊಳ್ಳಲು ಅಲ್ವಾ?

ಒಂದು ವೇಳೆ ಜನ ಅಂದುಕೊಂಡಂತೆ ‘ರಾಮಾಯಣ’ದಲ್ಲಿ ರಾಧಿಕಾ ಪಂಡಿತ್ ಸೀತೆ ಆದ್ರೆ ಹೇಗಿರಬಹುದು ಊಹಿಸಿಕೊಳ್ಳಿ. ಈಗಾಗಲೇ ರಾವಣನಾಗಿ ಅಬ್ಬರಿಸಿದ ಯಶ್ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ. ಅವರ ಪತ್ನಿಯೇ ಸೀತೆಯಾದರೆ, ಆ ಕಾಂಬಿನೇಶನ್ ಚೆನ್ನಾಗಿರುತ್ತೆ ಅಲ್ವಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಲಂಡನ್‌ನಲ್ಲಿ ನಟನಾ ತರಬೇತಿ, ಸಿಟಿ ಲೈಟ್ಸ್‌ನಲ್ಲಿ ವಿಭಿನ್ನ ಪಾತ್ರ: ದುನಿಯಾ ವಿಜಯ್ ಪುತ್ರಿ ಹೇಳಿದ್ದೇನು?
ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಯಾವ ಸಿನಿಮಾ, ಹೀರೋ ಯಾರು? ನೋಡಿ..