ಲಂಡನ್‌ನಲ್ಲಿ ನಟನಾ ತರಬೇತಿ, ಸಿಟಿ ಲೈಟ್ಸ್‌ನಲ್ಲಿ ವಿಭಿನ್ನ ಪಾತ್ರ: ದುನಿಯಾ ವಿಜಯ್ ಪುತ್ರಿ ಹೇಳಿದ್ದೇನು?

Published : Aug 10, 2026, 04:13 PM IST
Monisha

ಸಾರಾಂಶ

City Lights Kannada Movie: ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್‌ ಅವರಿಗೆ ಜಾನಪ ಹಾಡು, ಕತೆಗಳೆಂದರೆ ಬಲು ಪ್ರೀತಿ. ಇದಕ್ಕೆ ‘ಭೀಮ’, ‘ಸಲಗ’, ‘ಲ್ಯಾಂಡ್‌ ಲಾರ್ಡ್‌’ ಚಿತ್ರಗಳಲ್ಲಿ ಬಂದ ಹಾಡುಗಳೇ ಸಾಕ್ಷಿ.

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್‌ ಅವರಿಗೆ ಜಾನಪ ಹಾಡು, ಕತೆಗಳೆಂದರೆ ಬಲು ಪ್ರೀತಿ. ಇದಕ್ಕೆ ‘ಭೀಮ’, ‘ಸಲಗ’, ‘ಲ್ಯಾಂಡ್‌ ಲಾರ್ಡ್‌’ ಚಿತ್ರಗಳಲ್ಲಿ ಬಂದ ಹಾಡುಗಳೇ ಸಾಕ್ಷಿ. ‘ಸಿಟಿ ಲೈಟ್ಸ್‌’ ಚಿತ್ರ ಕೂಡ ಅದೇ ಜಾನಪದ ಹಾಡಿನ ದಾರಿಯಲ್ಲಿ ಹೆಜ್ಜೆ ಹಾಕಿದೆ.

ಈಗಷ್ಟೇ ಬಿಡುಗಡೆ ಆಗಿರುವ ಈ ಚಿತ್ರದ ‘ಕೆಂಡದೋಕುಳಿ ಗಂಡನಾ’ ಎನ್ನುವ ಮೂರನೇ ಹಾಡು ಜಾನಪದ ಸೊಗಡಿನ ಸಾಲುಗಳಿಗೆ ರ್‍ಯಾಪ್‌ ಸ್ಪರ್ಶ ಕೊಟ್ಟಿದೆ. ಜಾನಪದ ಕಲಾವಿದ ಕಂಸಾಳೆ ಧನುಷ್‌ ಈ ಹಾಡನ್ನು ಹಾಡಿದ್ದು, ರ್‍ಯಾಪ್‌ ಅಮೋಘ್‌ ಬಾಲಾಜಿ ಧ್ವನಿ ನೀಡಿದ್ದಾರೆ. ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ.

ದುನಿಯಾ ವಿಜಯ್‌, ‘ನಾನು ಡಾ. ರಾಜ್‌ಕುಮಾರ್‌ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನನ್ನು ನಿರ್ದೇಶಿಸಿರುವುದು ನನಗೆ ಸಿಕ್ಕ ದೊಡ್ಡ ಗೌರವ. ನನ್ನ ಪಾಲಿಗೆ ಸಂತಸದ ಕ್ಷಣಗಳು. ಈಗಾಗಲೇ ಬಿಡುಗಡೆ ಆಗಿರುವ ಕಂದಮ್ಮ ಹಾಗೂ ಬಾವ ಬಾವ ಹೆಸರಿನ ಹಾಡುಗಳು ಕೇಳುಗರಿಂದ ಮೆಚ್ಚುಗೆ ಪಡೆದುಕೊಂಡಿವೆ. ಮೂರನೇ ಹಾಡು ಕೂಡ ಹಿಟ್‌ ಆಗಲಿದೆ’ ಎಂದರು.

ಚಿತ್ರದ ನಾಯಕ ವಿನಯ್‌ ರಾಜ್‌ಕುಮಾರ್‌, ‘ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗಿ ಬರುವ ಸವಾಲುಗಳು, ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಈ ಸಿನಿಮಾದ ಕತೆ. ಇನ್ನು ಮಾದಪ್ಪನ ಹಾಡನ್ನು ಮಹದೇಶ್ವರ ಬೆಟ್ಟದಲ್ಲಿ ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು.

ವಿಭಿನ್ನವಾದ ಪಾತ್ರ

ನಾಯಕಿ ಮೊನಿಷಾ, ‘ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‌ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ಈ ಚಿತ್ರದಲ್ಲಿ ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ’ ಎಂದರು. ಸೆ.18ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಕೆವಿಎನ್‌ ಪ್ರೊಡಕ್ಷನ್‌ ವಿತರಣೆ ಮಾಡಲಿದೆ. ದುನಿಯಾ ವಿಜಯ್‌ ಹಾಗೂ ವಿಕ್ರಮ್‌ ಆರ್ಯ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದಾರೆ. ಮಾಸ್ತಿ ಸಂಭಾಷಣೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಯಾವ ಸಿನಿಮಾ, ಹೀರೋ ಯಾರು? ನೋಡಿ..
ಶಿವಣ್ಣಗೆ ರಾಕಿ ಭಾಯ್ ಕೊಟ್ಟ ಗೌರವ ಎಂಥದ್ದು? ಈ ಸುದ್ದಿ ಇಷ್ಟೊಂದು ಚರ್ಚೆ ಆಗ್ತಿರೋದು ಏಕೆ?