ಚಿತ್ರರಂಗಕ್ಕೆ ಗುಡ್‌ ಬೈ ಹೇಳುತ್ತೇನೆ, ಇದು ನನ್ನ ಕೊನೆ ಸಿನಿಮಾ: ಕಣ್ಣೀರಿಟ್ಟ ರಾಧಿಕಾ ಕುಮಾರಸ್ವಾಮಿ

By Vaishnavi Chandrashekar  |  First Published Sep 24, 2024, 5:27 PM IST

ಭೈರದೇವಿ ಸಿನಿಮಾ ಫ್ಲಾಪ್ ಆದ್ರೆ ಸಿನಿಮಾ ಮಾಡೋದು ಬಿಟ್ಟೇ ಬಿಡ್ತಾರಂತೆ ರಾಧಿಕಾ.....


ನವರಸ ನಾಯಕ ಜಗ್ಗೇಶ್​ ಕಲಾವಿಧರ ಜೀವನದ ಬಗ್ಗೆ ಒಂದು ಮಾತನ್ನು ಹೇಳಿದ್ದರು... ಕೊನೆಯೇ ಇಲ್ಲದ ಜನ್ಮ ಅಂದ್ರೆ ಅದು ಕಾಲವಿದರ ಜನ್ಮ ಅಂತ. ಅಂದ್ರೆ ಕಲಾವಿದನಿಗೆ ಅಂತ್ಯವಿಲ್ಲ ಅನ್ನೋದು ಆ ಮಾತಿನ ಅರ್ಥ. ಇದು ನಿಜಾ ಕೂಡ. ಇದು ಗೊತ್ತಿದ್ರೂ ಕೂಡ ಸ್ಯಾಂಡಲ್​ವುಡ್​ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಗುಡ್​ಬೈ ಹೇಳೋ ನಿರ್ಧಾರ ಮಾಡಿದ್ದಾರೆ. ಇದನ್ನು ರಾಧಿಕಾನೇ ಓಪನ್​ ಆಗಿ ಹೇಳಿದ್ದಾರೆ..? ಹಾಗಾದ್ರೆ ರಾಧಿಕಾ ಚಿತ್ರರಂಗದ ಜರ್ನಿ ಹೇಗಿತ್ತು..? ಚಿತ್ರರಂಗದಿಂದ ದೂರಾಗೂ ನಿರ್ಧಾರ ಮಾಡಿದ್ದೇಕೆ..? ನೋಡೋಣ ಬನ್ನಿ.. 

ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್‌ವುಡ್‌ನ ಸ್ವೀಟಿ.. ಆಕೆ ಅದೆಷ್ಟು ಚೆಂದವತಿನೋ, ಅಷ್ಟೇ ಅದ್ಭುತ ನಟಿ.. ಗಾಂಧಿನರದಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಿಸಿಕೊಳ್ಳೋ ಈ ಬ್ಯೂಟಿಫುಲ್ ಸ್ವೀಟಿ, ಸದ್ಯ ಭೈರಾದೇವಿಯ ಅವತಾರ ತಾಳಿಸಿದ್ದಾರೆ.. ಈಗಾಗಲೇ ಭೈರಾದೇವಿ ಝಲಕ್ ಹೇಗಿರಲಿದೆ ಅನ್ನೋ ಪರಿಚಯ ಆಗಿದೆ. ಇನ್ನೇನು ನವರಾತ್ರಿ ಹಬ್ಬದಲ್ಲಿ ಭೈರಾದೇವಿ ದರ್ಶನವೂ ಆಗುತ್ತೆ. ಆದ್ರೆ ಅಷ್ಟರಲ್ಲಾಗಲೇ ರಾಧಿಕಾ ಕುಮಾರ ಸ್ವಾಮಿ ತನ್ನ ಸಿನಿ ಕರಿಯರ್​​ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ. ಭೈರಾದೇವಿಯೇ ನನ್ನ ಕೊನೆ ಸಿನಿಮಾ ನಾನು ಚಿತ್ರರಂಗಕ್ಕೆ ಗುಡ್​​ಬೈ ಹೇಳುತ್ತೇನೆ ಅಂತ ಸ್ವೀಟಿ ಶಾಂಕಿಂಗ್ ಹೇಳಿಕೆ ನೀಡಿದ್ದಾರೆ.

Tap to resize

Latest Videos

undefined

ತಿನ್ಬೇಕಾದ್ರೂ ನೆಟ್ಟಗೆ ಕೂರಮ್ಮ; ಜೈ ಜಗದೀಶ್ ಪುತ್ರಿ ಮತ್ತೆ ಟ್ರೋಲ್!

ರಾಧಿಕಾ ಅದೆಂತಾ ಅದ್ಭುತ ನಟಿ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಅದಕ್ಕೆ ಹಿಂದಿನ ಸಿನಿಮಾಗಳೇ ಸಾಕ್ಷಿ. ಚಿತ್ರರಂಗಕ್ಕೆ ಬಂದು 22 ವರ್ಷಗಳಾದರೂ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ ಸ್ವೀಟಿ. ಅಂದಹಾಗೆ ರಾಧಿಕಾ ಸ್ಯಾಂಡಲ್‌ವುಡ್​ ಕಾಲಿಟ್ಟಿದ್ದು, ನೀಲಾ ಮೇಘ ಶಾಮ ಸಿನಿಮಾದಲ್ಲಿ. ಒಂಬತ್ತನೇ ತರಗತಿ ಓದುವಾಗಲೇ ಎಂಟ್ರಿ ಕೊಟ್ಟ ರಾಧು ಮೊದಲ ಬಿಡುಗಡೆ ಕಂಡ ಸಿನಿಮಾ ನಿನಗಾಗಿ. ನಂತರ ಬಂದ ತವರಿಗೆ ಬಾ ತಂಗಿ ಸಿನಿಮಾ ರಾಧಿಕಾಗೆ ನೇಮು ಫೇಮು ಎರಡು ತಂದು ಕೊಟ್ಟಿದೆ.  ಇಂಡಸ್ಟ್ರಿಗೆ ಕಾಲಿಟ್ಟು ಒಂದು ವರ್ಷಗಳ ಒಳಗೇ ಸ್ಟೇಟ್ ಅವಾರ್ಡ್ ಪಡೆದುಕೊಂಡಿರು. ತಾಯಿ ಇಲ್ಲದ ತಬ್ಬಲಿ ಸಿನಿಮಾ ಮೂಲಕ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳಿಗೆ ಸಾಕ್ಷಿಯಾದ್ರು. ಅಷ್ಟೆ ಯಾಕೆ ತಮಿಳು ತೆಲುಗುನಲ್ಲೂ ನಟಿಸಿ ಸೈ ಎನಿಸಿಕೊಂಡ್ರು. ಎಷ್ಟೋ ಸಿನಿಮಾಗಳು ರಾಧಿಕಾ ಹೆಸರಲ್ಲೇ ಗೆದ್ದಿದ್ದೂ ಇದೆ. 

ಕುಂದಾಪುರದ ಹೊಳೆಯಲ್ಲಿ ರಿಷಬ್‌ ಶೆಟ್ಟಿ ಫ್ಯಾಮಿಲಿ ಬೋಟಿಂಗ್; ಮೆಚ್ಚಿದೆ ಶೆಟ್ರೆ ಈ ಸಿಂಪ್ಲಿಸಿಟಿ ಎಂದ ನೆಟ್ಟಿಗರು!

ಸಧ್ಯ ಭೈರಾದೇವಿ ಆಗಿ ತೆರೆ ಮೇಲೆ ರಾರಾಜಿಸಲು ರೆಡಿಯಾಗಿರೋ ರಾಧಿಕಾ ಕುಮಾರ ಸ್ವಾಮಿ ಅದರ ಹಿಂದೆನೇ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಭೈರಾದೇವಿ ಮೇಲೆ ರಾಧಿಕಾಗೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಈ ಸಿನಿಮಾಗಾಗಿ ಬರೋಬ್ಬರಿ 5 ವರ್ಷಗಳ ಕಾಲ ತಮ್ಮನ್ನು ತಾವು ಮುಡುಪಾಗಿಟ್ಟಿದ್ದಾರೆ. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ ಅನ್ನೋದಕ್ಕೆ ಟ್ರೈಲರ್. ಸಾಂಗ್ಸ್ ಸಾಕ್ಷಿಯಾಗಿದೆ. ಆದ್ರ ಅದೇ ಸಿನಿಮಾ ಗೆದ್ದಿಲ್ಲ ಅಂದ್ರೆ ಇಂಡಸ್ಟ್ರಿಯಿಂದ ದೂರಾಗೋ ಮಾತಾಡಿದ್ದಾರೆ. ಬೈರಾದೇವಿ ರಾಧಿಕಾಗೆ ಅಷ್ಟೆ ಅಲ್ಲ ಇಡೀ ಚಿತ್ರರಂಗಕ್ಕೆ ಸ್ಪೆಷಲ್ ಸಿನಿಮಾ. ಅಘೋರಿಗಳ ಕಥೆಯನ್ನು ಈ ಸಿನಿಮಾ ತೆರೆದಿಡುತ್ತಿದೆ. ಈ ಸಿನಿಮಾದ ಸ್ಯಾಂಪಲ್ಸ್​ಗಳೇ ಸಿನಿಮಾ ಹೈಲೆಟ್ ಬಗ್ಗೆ ಸುಳಿವು ಕೊಟ್ಟಿದೆ. ಆದ್ರೆ ಸಿನಿಮಾ ಸೋತ್ರೆ ಇಂಡಸ್ಟ್ರಿಯಿಂದ ದೂರಾಗೋ ಮಾತಾಡಿರೋದು ರಾಧಿಕಾ ಫ್ಯಾನ್ಸ್​ಗೆ ಬೇಸರ ತರಿಸಿದೆ. ಸೋ ಹಾಗಾಗದೇ ಇರಲಿ. ಭೈರಾದೇವಿ ಗೆಲ್ಲಲ್ಲಿ ಅನ್ನೋದೇ ಎಲ್ಲರ ಆಸೆ.

click me!