ಕುಂದಾಪುರದ ಹೊಳೆಯಲ್ಲಿ ರಿಷಬ್‌ ಶೆಟ್ಟಿ ಫ್ಯಾಮಿಲಿ ಬೋಟಿಂಗ್; ಮೆಚ್ಚಿದೆ ಶೆಟ್ರೆ ಈ ಸಿಂಪ್ಲಿಸಿಟಿ ಎಂದ ನೆಟ್ಟಿಗರು!

By Vaishnavi Chandrashekar  |  First Published Sep 24, 2024, 1:25 PM IST

ಫ್ಯಾಮಿಲಿ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ. ಕೋಟಿ ಕೋಟಿ ಹಣ ಇದ್ರೂ ಫಾರಿನ್‌ಗೆ ಹೋಗದೆ ಹುಟ್ಟೂರಿನಲ್ಲಿ ಸಮಯ ಕಳೆಯುತ್ತಿರುವ ಸೆಲೆಬ್ರಿಟಿ....
 


ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪಕ್ಕಾ ಫ್ಯಾಮಿಲಿ ಮ್ಯಾನ್, ಎಂತದ್ದೇ ಕೆಲಸ ಇರಲಿ ಎಷ್ಟೇ ಟೆನ್ಶನ್ ಇರಲಿ ಪತ್ನಿ ಪ್ರಗತಿ ಹಾಗೂ ಮಕ್ಕಳಿಗೆ​ ಇಷ್ಟು ಟೈಮ್ ಅಂತ ಮೀಸಲಿಡುತ್ತಾರೆ. ಈಗ ಶೆಟ್ರು ಕಾಂತಾರ ಚಾಪ್ಟರ್​ ಓನ್ ಸಿನಿಮಾ ಚಿತ್ರೀಕರಣದ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ವಾರ ಪೂರ್ತಿ ಸಿನಿಮಾ ಕೆಲಸ ಮಾಡೋ ರಿಷಬ್ ವೀಕೆಂಡ್‌ ಅನ್ನು ತಮ್ಮ ಕುಟುಂಬದ ಜೊತೆ ಬೋಟಿಂಗ್​ ಹೋಗಿ ಕಳೆದಿದ್ದಾರೆ. ಶೆಟ್ರು ಕುಂದಾಪುರ ಸೇರಿದ್ದರು.. ಯಾರ ಕೈಗೂ ಸಿಗದೆ ಏನಿದ್ರು ಸಿನಿಮಾ ಸಿನಿಮಾ ಅಂತ ಹೇಳುತ್ತಿದ್ದರು ಆದರೆ ನಾನು ಫ್ಯಾಮಿಲಿ ಮ್ಯಾನ್ ಅನ್ನೋದನ್ನು ಮಾತ್ರ ಮರೆತಿಲ್ಲ. ಪತ್ನಿ ಪ್ರಗತಿ ಹಾಗು ಇಬ್ಬರು ಮಕ್ಕಳಿಗಾಗೆ ವಾರದಲ್ಲಿ ಒಂದು ದಿನ ಮೀಸಲಿಡೋ ಡಿವೈನ್ ಸ್ಟಾರ್ ಈ ವಾರ ರಿಷಬ್ ಫ್ಯಾಮಿಲಿನ ಕರೆದುಕೊಂಡು ಬೋಟಿಂಗ್ ಹೋಗಿದ್ದಾರೆ. 

ಯಾರೆ ಆಗಿರಲಿ ವಾರದಲ್ಲಿ ಒಂದು ದಿನ ಕುಟುಂಬಕ್ಕೆ ಅಂತ ಟೈಮ್ ಕೊಡಲೇ ಬೇಕು. ಇದನ್ನು ರಿಷಬ್ ಶೆಟ್ಟಿ ಕೂಡ ಫಾಲೋ ಮಾಡುತ್ತಾರೆ. ಹೀಗಾಗಿ ಕಾಂತಾರ ಚಿತ್ರೀಕರಣವನ್ನು ತನ್ನೂರಿನಲ್ಲೇ ಮಾಡುತ್ತಿರೋ ಶೆಟ್ರು, ಅದೇ ಊರಿನ ರಮಣೀಯ ಸ್ಥಳಗಳನ್ನು ಹುಡುಕಿಕೊಂಡು ತನ್ನ ಕುಟುಂಬದ ಜೊತೆ ಹೋಗಿ ಮಸ್ತಿ ಮಾಡುತ್ತಿದ್ದಾರೆ. ಈಗ ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮ ಸಮೀಪದ ಹೊಳೆಯಲ್ಲಿ ರಿಷಬ್ ದಂಪತಿ ಬೋಟಿಂಗ್ ಮಾಡಿದ್ದಾರೆ. ಮಳೆಗಾಲದ ನಂತರ ಮ್ಯಾಂಗ್ರೋಸ್ ಕಾಡಿನ ನಡುವೆ ಹಿನ್ನೀರಿನಲ್ಲಿ ಕಯಾ ಕಿಂಗ್ ಬೋಟಿಂಗ್ ಆರಂಭವಾಗುತ್ತೆ. ಅದೇ ಹಿನ್ನೀರಿನಲ್ಲಿ ರಿಷಬ್ ದಂಪತಿ ಮಕ್ಕಳ ಜೋಡಿ ಬೋಟಿಂಗ್ ಮಾಡಿದ್ದಾರೆ.

Tap to resize

Latest Videos

undefined

ಪುಟ್ಟ ಲಕ್ಷ್ಮಿ ಬರ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಧನರಾಜ್‌ ಆಚಾರ್; ವಿಶೇಷ ಉಂಟಾ ಎಂದವರಿಗೆ ಸಿಹಿ ಊಟ!

ರಿಷಬ್ ಶೆಟ್ಟಿಯ ಊರು ಕುಂದಾಪುರ ವಿಷ್ಮಯಗಳ ಆಗರ.. ಕೆಲ ದಿಗಳ ಹಿಂದಷ್ಟೇ ಗೆಳೆಯ ಜ್ಯೂನಿಯರ್ ಎನ್​ಟಿಆರ್​​​​ಗೆ ತನ್ನೂರಿನ ಪರಿಚಯ ಮಾಡಿಕೊಟ್ಟರು...ಕಾಡು ಮೇಡು ದೇವಸ್ಥಾನ ಅಂತ ಸುತ್ತಾಡಿದ್ದರು. ಆಗ್ಲೂ ತನ್ನ ಇಡೀ ಕುಟುಂಬವನ್ನು ಹೋದಲ್ಲೆಲ್ಲಾ ಕರೆದುಕೊಂಡು ಹೋಗಿದ್ದರು. ಅಷ್ಟೆ ಅಲ್ಲ ಕಾಂತಾರ ಸಿನಿಮಾ ಗೆದ್ದ ಮೇಲೆ ರಿಷಬ್ ಫಸ್ಟ್ ಟೈಮ್ ಫ್ಯಾಮಿನ್ನು ಫಾರಿನ್ ಟ್ರಿಪ್​ಗೆ ಕರೆದುಕೊಂಡು ಹೋಗಿದ್ದರು. ದುಬೈನ ಮರು ಭೂಮಿಯಲ್ಲಿ ಮಕ್ಕಳ ಜೊತೆ ಆಟ ಆಡಿದ್ದರು. ಹೆಚ್ಚು ಕಮ್ಮಿ 20 ದಿನ ಫಾರಿನ್ ಟೂರ್ ಮಾಡಿ ಬಂದಿದ್ದರು. ಯಾವ್ದೇ ಹಬ್ಬ ಹರಿದಿನ ಆದ್ರೂ ಕುಟುಂಬದ ಜೊತೆಗೆ ಸೆಲೆಬ್ರೇಟ್ ಮಾಡೋ ಫ್ಯಾಮಿಲಿಯ ಪಾಲಿಸಿ. ಇದೇ ತರದ ಕನ್ನಡದ ಮತ್ತೊಬ್ಬ ಸ್ಟಾರ್ ನಟ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್.. ಇವ್ರು ಕೂಡ ಪ್ಯಾನ್ ಇಂಡಿಯಾ ಸ್ಟಾರ್​ ಆಗಿದ್ರೂ ಫ್ಯಾಮಿಲಿ ಮ್ಯಾನ್ ಅನ್ನೋದನ್ನು ಪದೇ ಪದೇ ತೋರಿಸ್ತಾನೆ ಇರುತ್ತಾರೆ. ಎಲ್ಲೇ ಹೋದರು ಪತ್ನಿ ರಾಧಿಕಾ ಜೊತೆಗೆ ಯಶ್ ಇರ್ತಾರೆ. ಮಕ್ಕಳನ್ನು ಶಾಲೆಗೆ ಬಿಡೋದ್ರಿಂದ ಹಿಡಿದು ಎಲ್ಲ ಹಬ್ಬಗಳನ್ನು ಯಶ್ ಮನೆಯಲ್ಲೇ ಆಚರಿಸುತ್ತಾರೆ. 

click me!