ಯೋಚನೆ ಮಾಡಿ ಮಾಡಿ ಅದೆಷ್ಟೋ ದಿನ ನಿದ್ರೆ ಮಾಡಿಲ್ಲ; ಅವಕಾಶ ಗಿಟ್ಟಿಸಿಕೊಂಡ ಸತ್ಯ ಬಿಚ್ಚಿಟ್ಟ ದುನಿಯಾ ವಿಜಯ್ ಪುತ್ರಿ ಮೋನಿಷಾ!

Published : Sep 30, 2024, 01:19 PM IST
ಯೋಚನೆ ಮಾಡಿ ಮಾಡಿ ಅದೆಷ್ಟೋ ದಿನ ನಿದ್ರೆ ಮಾಡಿಲ್ಲ; ಅವಕಾಶ ಗಿಟ್ಟಿಸಿಕೊಂಡ ಸತ್ಯ ಬಿಚ್ಚಿಟ್ಟ ದುನಿಯಾ ವಿಜಯ್ ಪುತ್ರಿ ಮೋನಿಷಾ!

ಸಾರಾಂಶ

ವಿದ್ಯಾಭ್ಯಾಸ ಮುಗಿಸಿಕೊಂಡು ಬರುತ್ತಿದ್ದಂತೆ ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆ ಎಂದು ರಿವೀಲ್ ಮಾಡಿದ ದುನಿಯಾ ವಿಜಯ್ ಪುತ್ರಿ......

ಕನ್ನಡ ಚಿತ್ರರಂಗ ಒಂಟಿ ಸಲಗ ದುನಿಯಾ ವಿಜಯ್ ತಮ್ಮ ದ್ವಿತಿಯ ಪುತ್ರಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ಜೋಡಿಯಾಗಿ ಅಭಿನಯಿಸುತ್ತಿರುವ ಸಿಟಿ ಲೈಟ್ಸ್ ಚಿತ್ರಕ್ಕೆ ವಿಜಯ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ನಾನು ತಂದೆ ಜೊತೆ ಆಗಾಗ ಶೂಟಿಂಗ್‌ ಸೆಟ್‌ಗೆ ಭೇಟಿ ನೀಡುತ್ತಿದ್ದೆ ಆದರೆ ಒಂದು ಸಮಯದಲ್ಲಿ ಅಪ್ಪ ಬರುವುದು ಬೇಡ ಸ್ಟ್ರಿಟ್ ರೂಲ್ಸ್ ಮಾಡಿದ್ದರು. ಈಗ ನನ್ನ ವಿಧಿ ನೋಡಿ ಸಿನಿಮಾ ಲೋಕದಲ್ಲಿ ನನ್ನ ವೃತ್ತಿ ಬದುಕನ್ನು ಕಟ್ಟಿಕೊಳ್ಳುತ್ತಿರುವೆ' ಎಂದು ಮೋನಿಷಾ ಸಂತೋಷ ಹಂಚಿಕೊಂಡಿದ್ದಾರೆ.

'ಆರಂಭದಲ್ಲಿ ಆಕ್ಟಿಂಗ್ ಕಲಿಯಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿ ಇತ್ತು ಆದರೆ ದಿನ ಕಳೆಯುತ್ತಿದ್ದಂತೆ ಎಡಿಟಿಂಗ್ ಮತ್ತು ಡೈರೆಕ್ಷನ್‌ ಮಾಡುವುದನ್ನು ಕಲಿತೆ. ಈ ಮೂಲಕ ಸಿನಿಮಾ ಮಾಡುವುದು ಹೇಗೆ ಎಂದು ತಿಳಿದುಕೊಂಡೆ. ವಿದೇಶದಲ್ಲಿ ನನ್ನ ಕೋರ್ಸ್ ಮುಗಿಸಿದ ನಂತರ ನನ್ನ ಮುಂದಿನ ಗುರಿ ಇದ್ದಿದ್ದೇ ಸಿನಿಮಾ ಪ್ರಾಜೆಕ್ಟ್‌ಗೆ ಸಹಿ ಹಾಕುವುದು ಹಾಗೂ ಸೆಟ್‌ನಲ್ಲಿ ಭಾಗಿಯಾಗುವುದು. ಸಿಟಿ ಲೈಟ್‌ ಚಿತ್ರದಲ್ಲಿ ನಾನು ದೊಡ್ಡ ಕನಸು ಹೊತ್ತಿರುವ ಯುವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವೆ. ನನ್ನ ಮೊದಲ ಚಿತ್ರಕ್ಕೆ ಯಾಕೆ ನಾನು ಗ್ಲಾಮರ್ ಪಾತ್ರವನ್ನು ಆಯ್ಕೆ ಮಾಡಿಲ್ಲ ಎಂದು ಜನರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ ಆದರೆ ಗ್ಲಾಮರ್ ಪಾತ್ರ ಮಾಡುವುದಕ್ಕೆ ತುಂಬಾ ಸಮಯವಿದೆ ನಾನು ತಡೆಯಬಹುದು. ಮೊದಲ ಸಿನಿಮಾದಲ್ಲಿ ನನ್ನ ನಟನೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು ಅನ್ನೋದು ನನ್ನ ಆಸೆ'ಎಂದು ಮೋನಿಷಾ ಟೈಮ್ಸ್ ಆಫ್ ಇಂಡಿಯಾ ಸಂದರ್ಶನಲ್ಲಿ ಮಾತನಾಡಿದ್ದಾರೆ.

ಹೊಸ ಲುಕ್‌ನಲ್ಲಿ ತರುಣ್- ಸೋನಲ್; ಮತ್ತೆ ಎಲ್ಲಿಗೆ ಎಂದು ಕಾಲೆಳೆದ ನೆಟ್ಟಿಗರು!

'ನನ್ನ ಮೊದಲ ಸಿನಿಮಾದ ಬಗ್ಗೆ ಚಿಂತೆ ಮಾಡುತ್ತಲೇ ಅದೆಷ್ಟೋ ರಾತ್ರಿ ನಿದ್ರೆ ಮಾಡಿಲ್ಲ. ನನ್ನ ಪರಿಸ್ಥಿತಿಯನ್ನು ನನ್ನ ತಂದೆ ತುಂಬಾ ಗಮನಿಸಿದ್ದಾರೆ. 'ನನ್ನ ಮುಂದಿನ ಸಿನಿಮಾ ಸಿಟಿ ಲೈಟ್ಸ್‌ನಲ್ಲಿ ನಿನ್ನನ್ನು ನಾಯಕಿಯಾಗಿ ಮಾಡುವೆ'ಎಂದು ತಂದೆ ಕೊನೆಗೂ ಹೇಳಿದ್ದರು. ಕೇಳಿ ಆಶ್ಚರ್ಯವಾಗಿತ್ತು ಅದೇ ಸಮಯದಲ್ಲಿ ಖುಷಿ ಕೂಡ ಆಯ್ತು. ಈ ಚಿತ್ರದ ಕಥೆ ನನ್ನ ತಂದೆಯಲ್ಲಿ ತಲೆಯಲ್ಲಿ ಓಡುತ್ತಿತ್ತು ಆದರೆ ನನ್ನನ್ನು ನಾಯಕಿ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ನಾನು ಪ್ರತಿಯೊಬ್ಬರಂತೆ ನಟನೆ ಕಲಿತು ಅವಕಾಶ ಗಿಟ್ಟಿಸಿಕೊಳ್ಳಬೇಕು ಅನ್ನೋದು ತಂದೆಯ ತಲೆಯಲ್ಲಿ ಇತ್ತು' ಎಂದು ಮೋನಿಷಾ ಹೇಳಿದ್ದಾರೆ. 

ಈ ಅವಕಾಶ ನನ್ನ ಕನಸು ನನಸು ಮಾಡಿದೆ; ಜನರ ಆಶೀರ್ವಾದ ಬೇಡಿ ಭವ್ಯಾ ಗೌಡ ಪೋಸ್ಟ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?