
‘ಕತೆಯಲ್ಲಿ ನಾಯಕಿಯದ್ದು ವಿಶಿಷ್ಟವಾದ ಪಾತ್ರ. ಸದ್ಯಕ್ಕೆ ಆ ಪಾತ್ರದ ವ್ಯಕ್ತಿತ್ವದ ಕುರಿತು ನಾನೇನು ಹೇಳೋದಿಲ್ಲ. ಆದರೆ ತುಂಬಾ ವಿಭಿನ್ನ ಮತ್ತು ವಿಶಿಷ್ಟಎನಿಸುವ ಪಾತ್ರವಂತೂ ಹೌದು. ಆ ಪಾತ್ರಕ್ಕೆ ಸೂಕ್ತವಾದ ನಾಯಕಿಯ ಹುಡುಕಾಟದಲ್ಲಿದ್ದಾಗ ನನಗೆ ಸೂಕ್ತ ಎನಿಸಿದ್ದು ರಚಿತಾರಾಮ್’ ಎನ್ನುತ್ತಾರೆ ನಿರ್ದೇಶಕ ನಾಗೇಂದ್ರ ಪ್ರಸಾದ್.
ಪತಿಯ ಹುಟ್ಟಹಬ್ಬದಂದು ಟೇಬಲ್ ಮೇಲೆ ಕುಣಿದು ಕುಪ್ಪಳಿಸಿದ ರಕ್ಷಿತಾ!
ತುಂಬಾ ಆಳ, ಭಾವ, ವೇದನೆ ತುಂಬಿಕೊಂಡ ಒಬ್ಬ ವಿವಾಹಿತ ಯುವಕ. ಆತನ ಭಾವನೆ, ವೇದನೆ ಅವನದಷ್ಟೇ ಆಗದೆ, ಇಡೀ ಯುವ ಸಮೂಹಕ್ಕೂ ಕನೆಕ್ಟ್ ಆಗುವಂತಹ ಪಾತ್ರ. ಸಿನಿಮಾ ಕೂಡ ಹಾಗೆಯೇ. ಉದ್ವೇಗದ ಪಂಥಾಹ್ವಾನ ಅದು. ಆ ಮೂಲಕ ಕಲಾವಿದನಾಗಿ ನನಗೂ ಒಂದು ಬೆಲೆ ಸಿಗುವ ನಿರೀಕ್ಷೆಯಿದೆ.- ವಸಿಷ್ಠ ಸಿಂಹ, ನಟ
ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!
‘ಪಂಥ’ ಎನ್ನುವ ಟೈಟಲ್‌ಗೆ ‘ಡಿಬೇಟ್ ಆನ್ ದಿ ಬೆಟ್’ ಎನ್ನುವ ಸಬ್ ಟೈಟಲ್ ಚಿತ್ರಕ್ಕಿದೆ. ನವೆಂಬರ್ ಮೊದಲ ವಾರ ಚಿತ್ರ ಸೆಟ್ಟೇರುತ್ತಿದೆ. ಎನ್. ಶ್ರೀಧರ್ ಹಾಗೂ ಎಲ್. ಅಶ್ವತ್‌್ಥ ನಾರಾಯಣ್ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆನ್ನುವ ಮಾಹಿತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.