
ಮಹಿಳಾ ಪ್ರಧಾನ ಕತೆಯನ್ನು ಒಳಗೊಂಡ ಸಿನಿಮಾ. ಈ ಕಾರಣಕ್ಕೆ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಬೇಕೆಂದು ಸೆಲೆಬ್ರಿಟಿ ಶೋ ಮಾದರಿಯಲ್ಲೇ ಮಹಿಳಾ ಸ್ಪೆಷಲ್ ಶೋ ಆಯೋಜಿಸಲಾಗುತ್ತಿದೆ.
ಬಿಡುಗಡೆಯ ನಂತರ ಅಥವಾ ಬಿಡುಗಡೆಯ ದಿನವೇ ಈ ವಿಶೇಷ ಪ್ರದರ್ಶನ ನಡೆಯಲಿದೆ. ‘ಅತ್ಯಾಚಾರಕ್ಕೆ ಒಳಗಾದ ಒಬ್ಬ ಹೆಣ್ಣು ಮಗಳ ಕತೆ. ದೆಹಲಿಯಲ್ಲಿ ನಿರ್ಭಯ ಪ್ರಕರಣ ನಡೆಯಿತು. ಒಂದು ವೇಳೆ ಆ ನಿರ್ಭಯ ಬದುಕಿ, ತನಗೆ ಆದ ಅನ್ಯಾಯವನ್ನು ಪ್ರಶ್ನಿಸಿದರೆ ಏನಾಗುತ್ತಿತ್ತು, ಜತೆಗೆ ಆಕೆ ಎಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಳು ಎಂಬುದು ‘ರಂಗನಾಯಕಿ’ ಚಿತ್ರದ ಕತೆ. ಮಹಿಳೆಯರಿಗೆ ಧೈರ್ಯ ತುಂಬುವ ಮತ್ತು ಅರಿವು ಮೂಡಿಸುವ ಕತೆ ಇದಾಗಿದ್ದು ಮಹಿಳೆಯರಿಗೆ ಈ ಸಿನಿಮಾ ತಲುಪಬೇಕು ಎಂದು ಅವರಿಗಾಗಿಯೇ ಪ್ರತ್ಯೇಕವಾದ ಶೋ ಆಯೋಜಿಸಲಾಗಿದೆ’ ಎಂಬುದು ನಿರ್ಮಾಪಕರು ಕೊಡುವ ವಿವರಣೆ.
ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಚಿತ್ರವಿದು. ಚಿತ್ರದ ನಿರ್ಮಾಪಕ ನಾರಾಯಣ್ ಈ ಹಿಂದೆ ಎಟಿಎಂನಲ್ಲಿ ಮಹಿಳೆ ಮೇಲಾದ ಮಾರಣಾಂತಿಕ ಘಟನೆಯನ್ನು ಇಟ್ಟುಕೊಂಡು ಮಾಡಿದ್ದ ‘ಎಟಿಎಂ’ ಚಿತ್ರವನ್ನು ನಿರ್ಮಿಸಿದವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.