ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವ್ರು, ನಾನು ನಗುತ್ತಿರುವುದೇ ಮಗ ರಾಯನ್‌ಗಾಗಿ: ಮೇಘನಾ ರಾಜ್

Published : Apr 18, 2023, 02:56 PM IST
ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವ್ರು, ನಾನು ನಗುತ್ತಿರುವುದೇ ಮಗ ರಾಯನ್‌ಗಾಗಿ: ಮೇಘನಾ ರಾಜ್

ಸಾರಾಂಶ

ರಾಯನ್ ರಾಜ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾನಾ? ಮ್ಯೂಸಿಕ್‌ ಆಂಡ್‌ ಫ್ರೆಂಡ್ಸ್ ತುಂಬಾನೇ ಇಷ್ಟ ಎಂದ ಮೇಘನಾ ರಾಜ್...

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ 'ತತ್ಸಮ ತದ್ಭವ' ಚಿತ್ರದ ಮೂಲಕ ಮತ್ತೊಮ್ಮೆ ಬಿಗ್ ಕಮ್ ಬ್ಯಾಕ್ ನೀಡುತ್ತಿದ್ದಾರೆ. ಸ್ನೇಹಿತ ಪನ್ನಗಾಭರಣ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಮೇಘನಾ ರಾಜ್‌ಗೆ ಜೋಡಿಯಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭವಾಗಿದೆ..ಪ್ರಚಾರದಲ್ಲಿ ನಡುವೆ ಕೆಲಸ ಮತ್ತು ಮಗನ ಬಗ್ಗೆ ಮೇಘನಾ ಚರ್ಚೆ ಮಾಡಿದ್ದಾರೆ.

'ರಾಯನ್‌ ರಾಜ್‌ ಸರ್ಜಾನ ನೋಡಿಕೊಳ್ಳುವ ಜವಾಬ್ದಾರಿ ನನಗೆ ಇದ್ದಿದ್ರೆ ಅ ಒಂದು ಶ್ರಕ್ತಿಯಿಂದ ನಾನು 100 ಸಿನಿಮಾ ಮಾಡಬಹುದಿತ್ತು. ತಾಯಿ ಆಗಿರುವುದು ದೊಡ್ಡ ಕೆಲಸ, ಕಷ್ಟದ ಕೆಲಸ. ಸಿನಿಮಾ ಕೆಲಸ ಮತ್ತು ರಾಯನ್‌ನ ನೋಡಿಕೊಳ್ಳುವ ಕೆಲಸ ಕಂಪೇರ್ ಮಾಡಲು ಆಗಲ್ಲ ಆದರೂ ಹೇಗೋ ಮ್ಯಾನೇಜ್ ಮಾಡುತ್ತಿರುವೆ. ಅಮ್ಮ ಮತ್ತು ಮನೆಯಲ್ಲಿ ಸಹಾಯ ಮಾಡುವವರು ಇದ್ದಾರೆ ಅವರು ನೋಡಿಕೊಳ್ಳುತ್ತಾರೆ. ಯಾರ ಸಹಾಯ ಇಲ್ಲದೆ ನಾನೊಬ್ಬಳೆ ನೋಡಿಕೊಳ್ಳಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ಏನು ಅನಿಸುತ್ತದೆ ಅಂದ್ರೆ ನಾನು ಒಬ್ಬಳೆ ಎಲ್ಲಾ ಮಾಡಿದರೆ ಒಳ್ಳೆ ತಾಯಿ ಆಗುವೆ ಅನಿಸುತ್ತದೆ ಆದರೆ ಅದು ಸುಳ್ಳು ನಮಗೆ ಆಗಿಲ್ಲ ಅಥವಾ ಸಹಾಯ ಬೇಕು ಅಂದ್ರೆ ಮತ್ತೊಬ್ಬರನ್ನು ಕೇಳಬಹುದು. ಎಷ್ಟೋ ಜನ ಸಹಾಯವಿಲ್ಲ ಮನೆ, ಮಕ್ಕಳು ಮತ್ತು ಕೆಲಸ ಮಾಡುತ್ತಾರೆ ಅದನ್ನು ನೋಡಿ ನಾನು ಯಾಕೆ ಮ್ಯಾನೇಜ್ ಮಾಡಬಾರದು ಅನ್ನೋ ಮನಸ್ಥಿತಿ ಬಂದಿರುವೆ. ನನ್ನ ಮಗ ಸಿನಿಮಾ ಮಾಡ್ತಾನಾ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ..ಮೊದಲು ಅವನು ಸ್ಕೂಲ್‌ಗೆ ಹೋಗಲಿ  ABCD ಕಲಿಯಬೇಕು ಆಮೇಲೆ ಅವನೇ ಡೈಲಾಗ್ ಹೇಳಲಿ ಅವನ ಇಷ್ಟ' ಎಂದು ಕನ್ನಡ ಖಾಸಗಿ ಚಾನೆಲ್‌ನಲ್ಲಿ ಮೇಘನಾ ಮಾತನಾಡಿದ್ದಾರೆ.

ನಾನಲ್ಲದ ವ್ಯಕ್ತಿಯಾಗಿ ಬದುಕಲು ಅಸಾಧ್ಯ; ಎಮೋಷನಲ್‌ ನಿಂದನೆ ಬಗ್ಗೆ ಮೇಘನಾ ರಾಜ್

'ಜೀವನ ಪರ್ಫೆಕ್ಟ್‌ ಆಗುತ್ತಿದೆ ಅಂದುಕೊಳ್ಳುವಾಗ ದೇವರಿಗೆ ಹೊಟ್ಟೆ ಉರಿ ಅಗಿ ಒಂದನ್ನು ಕಿತ್ತುಕೊಳ್ಳುತ್ತಾನೆ. ನನ್ನ ಕಣ್ಣಿಗೆ ನನಗೆ ಪರ್ಫೆಕ್ಟ್‌ ಅನಿಸೋದು ನನ್ನ ಮಗ. ರಾಯನ್ ಬೆಳೆಯುತ್ತಾ ಬೆಳೆಯುತ್ತಾ ಅವನ ದೃಷ್ಠಿಯಲ್ಲಿ ಅವನ ತಾಯಿ ಸದಾ ನಗುತ್ತಿರಬೇಕು ಸದಾ ಕೆಲಸ ಮಾಡುತ್ತಿರುವುದನ್ನು ನೋಡಿಕೊಂಡು ಬೆಳೆಯಬೇಕು. ಅವನ ಮುಂದೆ ಯಾವ ನೋವು ತೋರಿಸುವುದಿಲ್ಲ. ಎಷ್ಟೇ ಕಷ್ಟ ಇದ್ರೂ ನನ್ನ ತಂದೆ ತಾಯಿ ನನ್ನ ಮುಂದೆ ನೋವು ತೋರಿಸುವುದಿಲ್ಲ..ನನ್ನ ತಂದೆ ತಾಯಿ ನನ್ನನ್ನು ಹಾಗೆ ಬೆಳೆಸಿರುವಾಗ ನಾನು ಯಾಕೆ ನನ್ನ ಮಗನಿಗೆ ಕಷ್ಟದ ರೀತಿಯಲ್ಲಿ ಬೆಳೆಸಬೇಕು? ನಾನು ನಗುತ್ತಿರುವುದು ನನ್ನ ಮಗನಿಗೋಸ್ಕರ ನನ್ನ ಮಾನಸಿಕ ನೆಮ್ಮದಿಗಾಗಿ ನಗುತ್ತಿರುವೆ' ಎಂದು ಮೇಘನಾ ರಾಜ್ ಹೇಳಿದ್ದಾರೆ. 

ಊಟ ಮಾಡ್ಸೋದೇ ದೊಡ್ಡ ಕಷ್ಟ: ತುಂಟ ರಾಯನ್ ಜೊತೆ ಮೇಘನಾ ರಾಜ್ ರೆಡಿ ಆಗೋದು ಹೀಗೆ

'ಕಲೆ ಕಡೆ ರಾಯನ್ ಚಿಕ್ಕ ವಯಸ್ಸಿಗೆ ಆಸ್ತಿ ತೋರಿಸುತ್ತಿದ್ದಾನೆ. ಮನೆ ತುಂಬಾ ಕಲಾವಿದರಿದ್ದೀವಿ ಅದೇ  ಮಾತನಾಡುತ್ತೀವಿ ಅಲ್ಲದೆ ರಕ್ತದಲ್ಲಿ ಕಲೆ ಬಂದಿದೆ ಅದನ್ನು ಬೇಡ ಅಂದ್ರು ತೆಗೆಯಲು ಆಗಲ್ಲ ಅವನ ಇಷ್ಟ. ತುಂಬಾ ಚೆನ್ನಾಗಿ ಮಾತನಾಡುತ್ತಾನೆ ಸಾಕಷ್ಟು ವಿಡಿಯೋಗಳನ್ನು ಸೆರೆ ಹಿಡಿದಿರುವೆ. ಸಮ್ಮರ್ ಕ್ಲಾಸ್ ಅಂತ ಎಲ್ಲೂ ಹಾಕಿಲ್ಲ ಕಾರಣ ರಾಯನ್ ಮೊದಲು ಮನೆಯಲ್ಲಿ ಇರಬೇಕು ಸದಾ ಫ್ರೆಂಡ್ಸ್‌ ಎಂದು ಆಟವಾಡಲು ಹೋಗುತ್ತಾನೆ  ದಿನ ಫ್ರೆಂಡ್ಸ್‌ ಬೇಕು. ನಮ್ಮ ಫ್ರೆಂಡ್ಸ್‌ ಗ್ರೂಪ್‌ನಲ್ಲಿರುವವರೆಲ್ಲಾ ಅವನಿಗೆ ಸ್ನೇಹಿತರು ಹೀಗಾಗಿ ಹೊರಗಡೆ ಹೋಗವ ಅಗತ್ಯವೇ ಇಲ್ಲ. ಒಂದೊಂದು ಸಲ ಅನಿಸುತ್ತೆ ಜೀವನ ಹೀಗೆ ಇರಬೇಕು ಎಂದು ಚಿರು ಪ್ಲ್ಯಾನ್ ಮಾಡಿಕೊಟ್ಟಿದ್ದಾರೆ. ಸಮ್ಮರ್ ಕ್ಯಾಂಪ್‌ಗೆ ಹಾಕಲ್ಲ ಚಿಕ್ಕ ವಯಸ್ಸು ಮೊದಲು ಸ್ಕೂಲ್‌ಗೆ ಸೇರಿಸಬೇಕು. ರಾಯನ್‌ಗೆ ಯಾವ ಡಿಜಿಟಲ್‌ ವಸ್ತು ಕೊಟ್ಟರೂ ಇಷ್ಟ ಆಗಲ್ಲ ಅತನಿಗೆ ಆಟವಾಡಬೇಕು, ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಎಲ್ಲೇ ಹೋದರೂ ಅವನ ಜೊತೆ ಒಂದು ಆನೆ ಗೊಂಬೆನೆ ಇಟ್ಕೊಂಡಿರುತ್ತಾನೆ' ಎಂದಿದ್ದಾರೆ ಮೇಘನಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ