ನಟಿ ಅದಿತಿ ಪ್ರಭುದೇವ ಮಾಡಿದ ನುಚ್ಚಿನುಂಡೆ ಹೇಗಿದೆ? ಪತ್ನಿಯ ಅಡುಗೆ ತಿಂದು ಪತಿ ಹೇಳಿದ್ದೇನು?

Published : Apr 18, 2023, 02:40 PM IST
ನಟಿ ಅದಿತಿ ಪ್ರಭುದೇವ ಮಾಡಿದ ನುಚ್ಚಿನುಂಡೆ ಹೇಗಿದೆ? ಪತ್ನಿಯ ಅಡುಗೆ ತಿಂದು ಪತಿ ಹೇಳಿದ್ದೇನು?

ಸಾರಾಂಶ

ನಟಿ ಅದಿತಿ ಪ್ರಭುದೇವ ನುಚ್ಚಿನುಂಡೆ ಮಾಡೋದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ಅದಿತಿ ಮಾಡಿದ ಅಡುಗೆ ತಿಂದು ಪತಿ ಹಾಡಿಹೊಗಳಿದ್ದಾರೆ?

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಸಿನಿಮಾ ಶೂಟಿಂಗ್ ಜೊತೆಗೆ ಯುಟ್ಯೂಬ್ ವಾಹಿನಿಯನ್ನು ನಿಭಾಯಿಸುತ್ತಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಅಡುಗೆ, ಜ್ಯೂಸ್‌, ಸಿಂಪಲ್ ರೆಸಿಪಿ, ಫ್ಯಾಮಿಲಿ, ಶಾಪಿಂಗ್ ಅಂತ ಎಲ್ಲಾ ರೀತಿಯ ವಿಡಿಯೋ ಮಾಡುತ್ತಿರುತ್ತಾರೆ. ಪ್ರತಿ ಬಾರಿಯೂ ವಿಭಿನ್ನ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಅದಿತಿ. ಹೆಚ್ಚಾಗಿ ಅಡುಗೆ ಮತ್ತು ವಿಶೇಷ ರೆಸಿಪಿಗಳನ್ನು ಅಭಿಮಾನಿಗಳಿಗೆ ಹೇಳಿಕೊಡುತ್ತಾರೆ. ಜೊತೆಗೆ ಅವರ ಅಮ್ಮ ಮಾಡುವ ರುಚಿಕರವಾದ ತಿನಿಸುಗಳನ್ನು ತೋರಿಸುತ್ತಾರೆ. ಸದ್ಯ ಅದಿತಿ ನುಚ್ಚಿನುಂಡೆ ಮಾಡುವುದು ಹೇಗೆ ಎಂದು ಹೇಳಿದ್ದಾರೆ. ಅದಿತಿ ಮಾಡಿದ ಅಡುಗೆಗೆ ಅವರ ಪತಿ ಫಿದಾ ಆಗಿದ್ದಾರೆ. 

ದಿನಕ್ಕೊಂದು ವಿಶೇಷ ರೀತಿಯ ಅಡುಗೆ ಮಾಡಿ ಪತಿಗೆ ಬಡಿಸುತ್ತಾರೆ ಅದಿತಿ. ಆರೋಗ್ಯಕರವಾದ ಮತ್ತು ಡಯಟ್ ಆಹಾರ ತಿನ್ನುವ ಅದಿತಿ ತಾವೆ ತಯಾರಿಸಿಕೊಳ್ಳುತ್ತಾರೆ. ಈ ಬಾರಿ ಅದಿತಿ ನುಚ್ಚಿನುಂಡೆ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ತನ್ನ ದಿನಚರೆ ಹೇಗಿರುತ್ತೆ ಎಂದು ಅದಿತಿ ತನ್ನ ವಾಹಿನಿ ಮೂಲಕ ಹೇಳುವ ಅದಿತಿ ಜೊತೆಗೆ ಒಂದಿಷ್ಟು ರುಚಿಕರವಾದ ತಿನಿಸಿನ ಬಗ್ಗೆಯೂ ಹೇಳಿಕೊಡುತ್ತಾರೆ.

ನುಚ್ಚಿನುಂಡೆ ಮಾಡುವುದು ಹೇಗೆಂದು ಹೇಳಿರುವ ಅದಿತಿ, ಒಂದು ಲೋಟ ಅಕ್ಕಿ, ಒಂದು ಲೋಟ ಕಡಲೆ ಬೇಳೆ ಮತ್ತು ಒಂದು ಲೋಟ ತೊಗರಿ ಬೇಳೆ ತೆಗೆದುಕೊಂಡು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಹಾಕಬೇಕು. 3 ಗಂಟೆ ನೆನೆಹಾಕಬೇಕು. ಬಳಿಕ ಮಿಕ್ಸಿ ಮಾಡಿಕೊಂಡು ಅದಕ್ಕೆ ತೆಂಗಿನ ತುರಿ, ಸಬ್ಸಕ್ಕಿ ಸೊಪ್ಪು, ಆಲಿವ್ ಎಣ್ಣೆ, ಚಿಲ್ಲಿ ಪುಡಿ, ಅರಿಶಿಣ ಪುಡಿ, ಇಂಗು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಿಸಿಕೊಂಡು ಉಂಡೆ ಮಾಡಿ ಸ್ಟೀಮ್‌ನಲ್ಲಿ ಬೇಯಿಸಬೇಕು. ಅರಿಶಿಣದ ಎಲೆ ಅಥವಾ ದೊಡ್ಡಪತ್ರೆ ಎಲೆಯಲ್ಲಿ ಬೇಯಿಸಿದ್ರೆ ಚೆನ್ನಾಗಿ ಇರುತ್ತೆ ಅಂತಾರೆ ಅದಿತಿ. 8 ರಿಂದ 10 ನಿಮಿಷ ಸ್ಟೀಮರ್‌ನಲ್ಲಿ ಬೇಯಿಸಿದರು. ಇದಕ್ಕೆ ಕೆಂಪು ಚೆಟ್ನಿ ಹಾಗೂ ತುಪ್ಪ ಸೇರಿಸಿದರೆ ತಿನ್ನಲು ರುಚಿಯಾಗಿರುತ್ತೆ ಅಂತಾರೆ ಅದಿತಿ. ಈ ವಿಶೇಷವಾದ ರುಚಿಕರವಾದ ತಿನಿಸನ್ನು ಪತಿ ಯಶಸ್ ಅವರಿಗೆ ಬಡಿಸಿದರು. 

ಬೆಂಗಳೂರಿಂದ ದಾವಣಗೆರೆ ಪ್ರಯಾಣದಲ್ಲಿ ಸಿಕ್ಕ ಜನರಿಗೆ 25 ಸಾವಿರ ರೂಪಾಯಿ ಹಂಚಿದ ನಟಿ ಅದಿತಿ ಪ್ರಭುದೇವ

ಪತ್ನಿ ಮಾಡಿದ ಅಡುಗೆ ನೋಡಿ ಯಶಸ್ ಸಂತಸಗೊಂಡರು. ದಿನಕ್ಕೊಂದು ರೀತಿಯ ಅಡುಗೆ ಮಾಡ್ತೀಯಾ, ಇದು ತುಂಬಾ ಚೆನ್ನಾಗಿ ಎಂದು ಹೊಗಳಿದರು. ಪತಿಯಿಂದ ಹೊಗಳಿಸಿಕೊಂಡ ಅದಿತಿ ಫೇವರಿಟಿ ಲಿಸ್ಟ್‌ಗೆ ನುಚ್ಚಿನುಂಡೆ ಸೇರಿಸಿಕೊಂಡರು. 

10 ನಿಮಿಷದಲ್ಲಿ ಬಾಯಲ್ಲಿ ನೀರೂರುವ ಮಾವಿನ ಉಪ್ಪಿನಕಾಯಿ ಮಾಡಿದ ನಟಿ Aditi Prabhudeva

ಅದಿತಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಜಮಾಲಿ ಗುಡ್ಡು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅನೇಕ ಸಿನಿಮಾಗಳಲ್ಲಿ ಅದಿತಿ ಬ್ಯುಸಿಯಾಗಿದ್ದಾರೆ. ತೋತಾಪುರಿ-2, 5ಡಿ, ಅಂದೊಂದಿತ್ತು ಕಾಲ, ಮಾಫಿಯಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ