'ಪುರಸೋತ್ ರಾಮ' ಚಿತ್ರಕ್ಕೆ ಪೈರೆಸಿ ಕಾಟ!

By Kannadaprabha NewsFirst Published Dec 15, 2020, 4:17 PM IST
Highlights

ಕಳೆದ ಶುಕ್ರವಾರ ಬಿಡುಗಡೆಯಾದ ಹಾಸ್ಯಚಿತ್ರ ‘ಪುರಸೋತ್ ರಾಮ’ವನ್ನು ಪೈರಸಿ ಮಾಡಲಾಗಿದೆ ಎಂದು ನಿರ್ಮಾಪಕಿ ಮಾನಸ ಆರೋಪಿಸಿದ್ದಾರೆ. 
 

ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರತಂಡದ ಬೆಂಬಲಕ್ಕೆ ನಿಂತಿದೆ.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾನಸ, ‘ಈ ಚಿತ್ರವನ್ನು ಬಹಳ ಕಷ್ಟಪಟ್ಟು ಮಾಡಿದ್ದೇವೆ. ರಿಲೀಸ್‌ಗೆ, ಕೋವಿಡ್ ಸುರಕ್ಷತೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ಬಹಳ ಶ್ರಮ ಹಾಕಿದ್ದೇವೆ. ಅಂಥದ್ದರಲ್ಲಿ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದಾಗ ಯಾರೋ ಕದ್ದು ಚಿತ್ರೀಕರಣ ಮಾಡಿದ್ದಾರೆ. ಯೂಟ್ಯೂಬ್, ಟೆಲಿಗ್ರಾಮ್‌ಗಳಲ್ಲೆಲ್ಲ ಹರಿಯಬಿಟ್ಟಿದ್ದಾರೆ. ಕೆಲವೊಂದು ಆ್ಯಪ್‌ಗಳಲ್ಲೂ ಈ ಸಿನಿಮಾ ಹಾಕಿದ್ದಾರೆ. ಸುಮಾರು ೮೦೦೦ ಮಂದಿ ಡೌನ್‌ಲೋಡ್ ಮಾಡಿದ್ದಾರೆ. ನನಗೆ ಇದು ಗೊತ್ತಾದಾಗ ಬಹಳ ಆಘಾತವಾಯ್ತು’ ಎಂದಿದ್ದಾರೆ.

‘ವಿಷಯ ತಿಳಿದ ಕೂಡಲೇ ಎ್‌ಐಆರ್ ದಾಖಲಿಸಿದ್ದೇವೆ. ಸಿನಿಮಾವನ್ನು ಡಿಲೀಟ್ ಮಾಡಿಸಿದ್ದೇವೆ. ಆದರೆ ಇಷ್ಟರ ನಡುವೆ ಆದ ಅನಾಹುತವೇ ನಮ್ಮನ್ನು ಕಂಗಾಲು ಮಾಡಿದೆ. ಈಗಾಗಲೇ ಕೋವಿಡ್‌ನಿಂದ ತೀವ್ರ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಇದು ಚೇತರಿಸಿಕೊಳ್ಳಲಾಗದಂಥಾ ಹೊಡೆತ. ಇನ್ನಾದರೂ ಪೈರಸಿ ವಿರುದ್ಧ ಕಠಿಣ ಕಾಯ್ದೆ ಜಾರಿಯಾಗಬೇಕು’ ಎಂದು ಅವರು ಹೇಳಿದ್ದಾರೆ.

ಇನ್ಮುಂದೆ ಪೈರಸಿ ಆಟ ನಡೆಯಲ್ಲ, ಯಾಕಂದ್ರೆ ಪೆಂಡಿ ಬಂದಿದೆಯಲ್ಲ! 

ಸುದ್ದಿಗೋಷ್ಠಿಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್, ಭಾ ಮಾ ಹರೀಶ್, ಕರಿ ಸುಬ್ಬು, ವೆಂಕಟೇಶ್, ರಾಜೇಶ್ ಬ್ರಹ್ಮಾವರ ಹಾಜರಿದ್ದು ಚಿತ್ರತಂಡವನ್ನು ಬೆಂಬಲಿಸಿದರು. ಪೈರೆಸಿ ವಿರುದ್ಧ ದನಿ ಎತ್ತಿದರು. 

click me!