
ವಾರದ ಹಿಂದೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಖಚಿತ ಪಡಿಸಿದ ಮೇಘನಾ ರಾಜ್ ಇಂದು ಶೇರ್ ಮಾಡಿಕೊಂಡ ಫೋಟೋ ಆಕೆಯ ದೃಢ ನಿರ್ಧಾರ ಹಾಗೂ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ.
ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಈ ಗುಟ್ಟು!
ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪೋಸ್ಟ್ ಇಷ್ಟವಾದರೆ, ಮೇಘನಾ ಅದನ್ನು ಇನ್‌ಸ್ಟಾ ಸ್ಟೋರಿಗೆ ಶೇರ್ ಮಾಡಿಕೊಳ್ಳುತ್ತಾರೆ. ಇದು ಅಂಥದ್ದೇ ಫೋಸ್ಟ್ ಆಗಿದ್ದು, ಅದರಲ್ಲಿ ಬರೆದಿರುವ ಸಾಲುಗಳು ಮನಸ್ಸನ್ನು ತಾಗುತ್ತದೆ. ಏನಿದೆ ಅ ಫೋಸ್ಟಿನಲ್ಲಿ?
ಖುಷಿ ಜೊತೆಗೆ ಸರ್ಜಾ ಕುಟುಂಬಕ್ಕೆ ಆಘಾತ; ಮೇಘನಾ, ಪುತ್ರನಿಗೂ ಕೋವಿಡ್!
'ನಾನು ಬೆಳೆಸುತ್ತಿರುವ ಮಗ ಕೈಯಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಮಗಳು ಸುರಕ್ಷಿತವಾಗಿರುತ್ತಾಳೆ. ಇದು ನನ್ನ ಮಾತು' ಎಂದಿದೆ. ( I am raising a son that your daughter will be safe with. I promise) ಈ ಫೋಸ್ಟನ್ನು ನಿರ್ದೇಶಕ ಪನ್ನಗಾ ಭರಣ ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ಸಾಲಗಳು ಓದಲು ಸುಲಭವಿರಬಹುದು ಆದರೆ ಮಕ್ಕಳನ್ನು ಪೋಷಕರು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವುದು ಪೋಷಕರ ದೊಡ್ಡ ಸವಾಲು. ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ನಿಲ್ಲಿಸ ಬೇಕಾದರೆ ಗಂಡು ಮಕ್ಕಳನ್ನು ಸರಿ ದಾರಿಯಲ್ಲಿ ಬೆಳೆಸುವುದು ಪೋಷಕರ ಮೇಲಿರುವ ದೊಡ್ಡ ಜವಾಬ್ದಾರಿ.
ಜೂನಿಯರ್ ಚಿರುಗೆ ತಾಯಿ ಮಾತ್ರವಲ್ಲದೇ, ತಂದೆ ಸ್ಥಾನದಲ್ಲಿಯೂ ನಿಂತು ಪಾಲನೆ ಮಾಡುತ್ತಿರುವ ಮೇಘನಾ ರಾಜ್ ಅವರ ಈ ಫೋಸ್ಟನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನೀವು ನಿಜವಾಗಿಯೂ ಸ್ಟ್ರಾಂಗ್ ಎಂದು ಬೆನ್ನು ತಟ್ಟಿದ್ದಾರೆ. ಸದ್ಯ ಮೇಘನಾ ಹಾಗೂ ಪಾಪು ಇಬ್ಬರು ಜಯನಗರದ ತಮ್ಮ ತಾಯಿ ಮನೆಯಲ್ಲಿದ್ದಾರೆ. ತಂದೆ ಸುಂದರ್ ರಾಜ್ ಹಾಗೂ ಪ್ರೇಮಿಳಾ ಜೋಷಾಯ್ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.