
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆ ದಿನಾಂಕಕ್ಕೆ ಕಾಯುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಜೇಮ್ಸ್ ಚಿತ್ರದ ನಂತರ ಪುನೀತ್ ಕೈಯಲ್ಲಿ ಯಾವ ಸಿನಿಮಾ ಇದೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ...
ನವಗ್ರಹದಲ್ಲಿ ದರ್ಶನ್ ಪಾತ್ರ ವಿನೋದ್ ಪ್ರಭಾಕರ್ ಮಾಡಬೇಕಿತ್ತು; ಅಸಲಿ ಕತೆ ಬಯಲು ಮಾಡಿದ ದಿನಕರ್!
ಹೌದು! ನಟ ದರ್ಶನ್ ಸಹೋದರ ದಿನಕರ್ ಪುನೀತ್‌ಗಾಗಿ ಚಿತ್ರಕತೆ ಒಂದನ್ನು ರೆಡಿ ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಚಿತ್ರಕತೆ ಬರೆಯುತ್ತಿದ್ದರು ಎಂಬ ಮಾಹಿತಿ ಇತ್ತು. ಆದರೀಗ ಅದು ಪುನೀತ್‌ಗೆ ಎಂಬ ಸತ್ಯ ಹೊರ ಬಂದಿದೆ.
"
ಈಗಾಗಲೇ ಮೂರು ಸೂಪರ್ ಹಿಟ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ದಿನಕರ್ ಈ ಕತೆಗೂ ಒಳ್ಳೆಯ ಟ್ವಿಸ್ಟ್ ಕೊಟ್ಟಿರುತ್ತಾರೆ ಎಂಬ ನಂಬಿಕೆ ಅಭಿಮಾನಿಗಳದ್ದು. ಇಷ್ಟು ದಿನ ದಿನಕರ್ ಹಾಗೂ ದರ್ಶನ್ ಕಾಂಬಿನೇಷನ್ ಕಾಣ ಬಯಸುತ್ತಿದ್ದ ಅಭಿಮಾನಿಗಳು, ಪುನೀತ್ ಜೊತೆ ಕೈ ಜೋಡಿಸಿರುವ ವಿಚಾರ ಕೇಳಿ ಥ್ರಿಲ್ ಆಗಿದ್ದಾರೆ.
ಗಾಳಿ ಮಾತುಗಳಿಗೆ ದಿನಕರ್ ತೂಗುದೀಪ ಫುಲ್ ಸ್ಟಾಪ್: ದರ್ಶನ್ ಜೊತೆ ಸಿನಿಮಾ?
ಕೆಲವು ದಿನಗಳ ಹಿಂದೆ ಯುವರತ್ನ ಚಿತ್ರದ ಮೂರನೇ ಹಾಡು ಬಿಡುಗಡೆ ಆಗಬೇಕಿತ್ತು ಆದರೆ ಸಣ್ಣ ತಾಂತ್ರಿಕ ಸಮಸ್ಯೆಯಿಂದ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಸ್ವತಃ ಪುನೀತ್ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.