
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕುಟುಂಬದಲ್ಲಿ ಮಕ್ಕಳ ಹವಾ ಹೆಚ್ಚಾಗಿದೆ. ಐರಾ, ಯಥರ್ವ್ ಹಾಗೂ ರಿಯಾ ಈಗ ಮತ್ತೊಮ್ಮ ತಮ್ಮನನ್ನು ಬರ ಮಾಡಿಕೊಂಡಿದ್ದಾರೆ. ಹೌದು ರಾಧಿಕಾ ಸಹೋದರ ಗೌರಂಗ್ ಗೆ ಈಗಾಗಲೇ ರಿಯಾ ಎಂಬ ಮುದ್ದಾದ ಮಗಳಿದ್ದಾರೆ. ಇದೀಗ ಪುತ್ರನ ಎಂಟ್ರಿ ಆಗಿದೆ.
ರಾಧಿಕಾ ಪಂಡಿತ್ ತಮ್ಮ ಗೌರಂಗ್ ಕುಟುಂಬ ನೋಡಲು ಎಷ್ಟು ಚಂದ!
'ನಮ್ಮ ಪುಟ್ಟ ಕಂದಮ್ಮ ಆಗಮಿಸಿದ್ದಾನೆ. ಗೌರಂಗ್ ಹಾಗೂ ನಾನು ನಮ್ಮ ಕುಟುಂಬಕ್ಕೆ ಆರವ್‌ನನ್ನು ಬರ ಮಾಡಿಕೊಂಡಿರುವ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಜನವರಿ 28 ನಾವೆಂದೂ ಮರೆಲಾಗದ ದಿನ. ಮಗಳು ರಿಯಾ ಆಗಲೇ ತಮ್ಮನನ್ನು ಮುದ್ದಾಡುತ್ತಿದ್ದಾಳೆ,' ಎಂದು ಗೌರಂಗ್ ಪತ್ನಿ ಸಹನಾ ಬರೆದುಕೊಂಡಿದ್ದಾರೆ.
ಗೌರಂಗ್ ಕುಟುಂಬ ವಿದೇಶದಲ್ಲಿ ನಲೆಸಿರುವ ಕಾರಣ ಅಲ್ಲಿಯೇ ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಶ್ರೀ ಕೃಷ್ಣನ ಥೀಮ್‌ನಿಂದ ತೊಟ್ಟಿಲನ್ನು ಅಲಂಕಾರ ಮಾಡಲಾಗಿತ್ತು. ಪುತ್ರಿ ರಿಯಾ ಹೂ ಹಿಡಿದು ತೊಟ್ಟಿಲ ಮುಂದೆ ನಿಂತಿದ್ದಾಳೆ.
ಗೌರಂಗ್ ಹಾಗೂ ಸಹನಾ ಪೋಟೋಗೆ ರಾಧಿಕಾ ಪಂಡಿತ್ ತಪ್ಪದೇ ಕಾಮೆಂಟ್ ಮಾಡುತ್ತಾರೆ.
ನೀವು ಕೊಟ್ಟ ನಗು ಧಿರಿಸಿರುವೆ; ವ್ಯಾಲೆಂಟೈನ್ಸ್ ಡೇ ಆಚರಿಸಿದ ರಾಕಿಂಗ್ ದಂಪತಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.