ಡಾ.ವಿಷ್ಣು ಅವಹೇಳನ: ನಟ ವಿಜಯ್‌ ವಿರುದ್ಧ ಕನ್ನಡ ಚಿತ್ರರಂಗ ಆಕ್ರೋಶ!

Kannadaprabha News   | Asianet News
Published : Dec 13, 2020, 09:07 AM IST
ಡಾ.ವಿಷ್ಣು ಅವಹೇಳನ: ನಟ ವಿಜಯ್‌ ವಿರುದ್ಧ ಕನ್ನಡ ಚಿತ್ರರಂಗ ಆಕ್ರೋಶ!

ಸಾರಾಂಶ

ವಿಷ್ಣುವರ್ಧನ್‌ ಅವರ ಕುರಿತು ಸಂದರ್ಶನವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಕನ್ನಡ ಚಿತ್ರರಂಗವನ್ನು ಕೆರಳಿಸಿದ್ದು, ನಟರಾದ ಜಗ್ಗೇಶ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಧನಂಜಯ್‌, ಅನಿರುದ್‌್ಧ, ಯಶ್‌ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದ, ಕ್ಷಮೆಗೆ ಒತ್ತಾಯಿಸಿದ್ದಾರೆ.

ಅಲ್ಲದೆ ಸಾಹಸ ಸಿಂಹ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರು ವಿಜಯ ರಂಗರಾಜು ಕೂಡಲೇ ಕ್ಷಮೆ ಕೇಳುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ.

ಮತ್ತೊಂದು ಕಡೆ ವಿಷ್ಣುವರ್ಧನ್‌ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿ, ‘ವಿಜಯ ರಂಗರಾಜು ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ವಿಷ್ಣು ಸೇನಾ ಸಮಿತಿಯು ತಮ್ಮ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ನೇತೃತ್ವದಲ್ಲಿ ವಿಜಯ ರಂಗರಾಜು ವಿರುದ್ಧ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸುವುದಕ್ಕೂ ಮುಂದಾಗಿದೆ.

ವಿಷ್ಣುವರ್ಧನ್ ಬಗ್ಗೆ ಅವಹೇಳನ ಮಾತು: ತೆಲುಗು ನಟನಿಗೆ ಪವರ್ ಸ್ಟಾರ್ ಖಡಕ್ ಎಚ್ಚರಿಕೆ! 

ಕ್ಷಮೆಗೆ ಪುನೀತ್‌ ಆಗ್ರಹ:

ಈ ಬಗ್ಗೆ ನಟ ಪುನೀತ್‌ರಾಜ್‌ಕುಮಾರ್‌ ಅವರು ಟ್ವೀಟ್‌ ಮಾಡಿ, ‘ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿ ತೋರುವುದು. ಯಾವುದೇ ಭಾಷೆಯ ನಟರಾದರು ಗೌರವ ಕೊಡುವುದು ಮುಖ್ಯ. ಅವಹೇಳನಕರವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡæಯಬೇಕು ಎಂದಿದ್ದಾರೆ.

ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್‌ ಬಗ್ಗೆ ಅವಹೇಳನಕರವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡæಯಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ ಹಾಗೂ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ. ಮೊದಲು ಮಾನವನಾಗು’ ಎಂದಿದ್ದಾರೆ.

ವಿಷ್ಣು ಬಗ್ಗೆ ಕೆಟ್ಟ ಮಾತಾಡಿದ ನಟನಿಗೆ ಸುದೀಪ್ ವಾರ್ನಿಂಗ್..! 

ಬದುಕಿದ್ದಾಗ ಮಾತಾಡಿದ್ರೆ ಗಂಡಸುತನ- ಸುದೀಪ್‌:

ನಟ ಸುದೀಪ್‌ ವಿಡಿಯೋ ಟ್ವೀಟ್‌ ಮಾಡಿ, ‘ವಿಜಯ ರಂಗರಾಜು ಎಂಬ ವ್ಯಕ್ತಿ ವಿಷ್ಣುವರ್ಧನ್‌ ಅವರ ಬಗ್ಗೆ ಕೇವಲವಾಗಿ ಮಾತನಾಡಿರುವ ವಿಡಿಯೋ ನೋಡಿದೆ. ವಿಜಯ ರಂಗರಾಜು ಅವರೇ, ಒಬ್ಬ ವ್ಯಕ್ತಿ ಬಗ್ಗೆ ಏನು ಮಾತನಾಡಬೇಕು ಎಂಬುದು ಅದು ನಿಮಗೆ ಬಿಟ್ಟವಿಚಾರ. ಆದರೆ, ಆ ವ್ಯಕ್ತಿ ಬದುಕಿರುವಾಗ ಮಾತಾಡಿದರೆ ಒಂಚೂರು ಗಂಡಸ್ತನ ಇರುತ್ತದೆ ಎನ್ನುವ ನಂಬಿಕೆ ನನ್ನದು. ವಿಷ್ಣು ಅವರು ಇದ್ದಾಗ ನೀವು ಹೀಗೆ ಮಾತನಾಡಿದ್ದರೆ ಅವರು ನಿಮಗೆ ಉತ್ತರ ಕೊಡುತ್ತಿದ್ದರು’ ಎಂದಿದ್ದಾರೆ.

‘ಆದರೆ, ವಿಷ್ಣು ಅವರು ಇಲ್ಲದಿದ್ದಾಗ ಕೋಟಿ ಕೋಟಿ ಜನರಿಗೆ ಆರಾಧ್ಯ ದೈವ ಆಗಿರುವ ವಿಷ್ಣು ಅವರ ಬಗ್ಗೆ ಈ ರೀತಿ ಮಾತನಾಡುವುದು ತುಂಬಾ ದೊಡ್ಡ ತಪ್ಪು. ಎಲ್ಲ ಭಾಷೆಯ ಚಿತ್ರರಂಗದವರು ಒಟ್ಟಾಗಿ ನಡೆಯುತ್ತಿರಬೇಕಾದರೆ ನಿಮ್ಮಂಥವರು ಹೀಗೆ ಮಾತನಾಡುವುದರಿಂದ ಎಲ್ಲವೂ ಚೂರು ಚೂರು ಆಗಿ ಬಿದ್ದು ಹೋಗುತ್ತವೆ. ಕನ್ನಡ ಚಿತ್ರರಂಗದವನಾಗಿ ನಾನು ಹೇಳುವುದಾದರೆ ನಾವು ಬೇರೆ ಚಿತ್ರರಂಗದ ಹಿರಿಯರಿಗೆ ತುಂಬಾ ಗೌರವ ಕೊಡುತ್ತೇವೆ. ಆದರೆ, ನೀವು ನಮ್ಮ ಚಿತ್ರರಂಗದ ಒಬ್ಬ ಹಿರಿಯ ವ್ಯಕ್ತಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ಸುದೀಪ್‌ ಹೇಳಿದ್ದಾರೆ.

ವಿಷ್ಣುವರ್ಧನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತೆಲಗು ನಟ 

‘ನಿಮ್ಮ ಈ ಹೇಳಿಕೆಗಳನ್ನು ನಿಮ್ಮ ಚಿತ್ರರಂಗದಲ್ಲಿ ಇರುವವರೇ ಒಪ್ಪುವುದಿಲ್ಲ. ನೀವು ವಿಷ್ಣುವರ್ಧನ್‌ ಅವರಿಗೆ ಇದು ಬೆಂಗಳೂರು ಅಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದೇನೆ ಎಂದಿದ್ದೀರಿ. ಆ ಮಟ್ಟಕ್ಕೆ ಹೋಗಬೇಡಿ ಸಾರ್‌. ಈಗ ವಿಷ್ಣುವರ್ಧನ್‌ ಅವರು ಇಲ್ಲದೆ ಇರಬಹುದು. ನಾವೆಲ್ಲ ಇದ್ದೇವೆ. ಇಲ್ಲಿ ಯಾರೂ ಕೈಲಾಗದೆ ಇರುವವರಲ್ಲ. ವಿಷ್ಣು ಅವರನ್ನು ಅಭಿಮಾನಿಸುವ ಕೋಟಿ ಕೋಟಿ ಅಭಿಮಾನಿಗಳು ಇಲ್ಲಿದ್ದಾರೆ. ನೀವು ಆಡಿರುವ ಮಾತುಗಳನ್ನು ವಾಪಸು ಪಡೆಯಿರಿ. ನಿಮ್ಮಂಥವರಿಂದ ಚಿತ್ರರಂಗ ಹಾಳಾಗೋದು ಬೇಡ’ ಎಂದು ಖಡಕ್‌ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

 

ದರಿದ್ರ ಮುಖ- ಜಗ್ಗೇಶ್‌:

‘ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆಮಾತಾಡುವ ಗುಣದವ ಎಲ್ಲಿಯೂ ಸಲ್ಲದವ. ಅದರಲ್ಲೂ ಇವ ಕಲಾವಿದನಂತೆ. ಈ ದರಿದ್ರ ಮುಖ ಯಾವ ಚಿತ್ರದಲ್ಲೂ ನೋಡಿದ ನೆನಪಿಲ್ಲ. ಕನ್ನಡದ ಹೃದಯಗಳೇ ಇವನ ಅನಿಷ್ಠ ಸೊಲ್ಲು ಅಡಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ. ಇವನ ಉದ್ಧಟತನ ಮಾತಿಗೆ ಕ್ಷಮೆಯಿಲ್ಲ. ಸತ್ತವರು ದೇವರ ಸಮ’ ಎಂದು ನಟ ಜಗ್ಗೇಶ್‌ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಹೀನಮಟ್ಟಕ್ಕೆ ಇಳಿವವ ಕಲಾವಿದ ಆಗಲ್ಲ- ಯಶ್‌:

ವಿಷ್ಣುವರ್ಧನ್‌ ಅವರು ಕನ್ನಡ ನಾಡು ಕಂಡ ಮಹಾನ್‌ ಸಾಧಕರು. ಅಂತಹ ಸಾಧಕರನ್ನು ನಿಂದಿಸಿ ಹೆಸರು ಮಾಡಬಯಸುವವ ಹಾಗೂ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ ಎಂದು ನಟ ಯಶ್‌ ಕಿಡಿ ಕಾರಿದ್ದಾರೆ.

ಸರಿದಾರಿಯಲ್ಲಿ ನಡೆಯುವವರು ಬೆವರು ಹರಿಸಿ ಹಂತ-ಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ. ಅಡ್ಡದಾರಿಯಲ್ಲಿ ನಡೆಯವವರು ಅಂತಹ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೇ ಉಳಿದುಬಿಡುತ್ತಾರೆ. ವಿಷ್ಣು ಸರ್‌ ಪ್ರತಿಭೆ ಹಾಗೂ ನಟನೆಯ ಜೊತೆಜೊತೆಗೆ ಅವರ ಬದುಕು, ವ್ಯಕ್ತಿತ್ವದಿಂದ ನಮ್ಮ ಮನೆ-ಮನದಲ್ಲಿ ಅಜರಾಮರವಾಗಿರುವವರು. ಅಂತ ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?