
ವಿಷ್ಣುವರ್ಧನ್ ಕನ್ನಡ ಸಿನಿ ಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ಸಾಹಸಸಿಂಹನಾಗಿ ಶಾಶ್ವತವಾಗಿ ನೆಲೆಸಿದ್ದಾರೆ. ಹೀಗಿರುವಾಗ ಅವರ ವಿರುದ್ಧ ಯಾರಾದ್ರೂ ಅವಹೇಳನಕಾರಿ ಮಾತುಗಳನ್ನಾಡಿದ್ರೆ ಸುಮ್ನೆ ಬಿಡ್ತಾರಾ.ನೋ ವೇ ಚಾನ್ಸೇ ಇಲ್ಲ.....
ಸಹಾಸಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಟಾಲಿವುಡ್ ನಟ ವಿಜಯ್ ರಂಗರಾಜುಗೆ ವಿಷ್ಣು ಅಭಿಮಾನಿಗಳು ರೊಚ್ಚಿಗೆದಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ತೆಲಗು ನಟ ವಿಜಯ್ ರಂಗರಾಜುಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ವಿಷ್ಣು ಬಗ್ಗೆ ಕೆಟ್ಟ ಮಾತಾಡಿದ ನಟನಿಗೆ ಸುದೀಪ್ ವಾರ್ನಿಂಗ್..!
ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ತೆಲುಗು ನಟ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಎಂದು ಪವರ್ ಸ್ಟಾರ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ನೀವು ಕ್ಷಮೆ ಕೇಳಿ ನಿಮ್ಮ ಮಾತುಗಳನ್ನ ಹಿಂಪಡಿಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ. ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು” ಎಂದು ಜಾಡಿಸಿದ್ದಾರೆ.
ತೆಲುಗು ನಟ ವಿಜಯ್ ರಂಗರಾಜು ಎಂಬುವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ವಿಷ್ಣುವರ್ಧನ್ ಅವರಿಗೆ ಲೇಡಿಸ್ ವೀಕ್ ನೆಸ್ ಇತ್ತು. ಒಂದು ಬಾರಿ ನಾನು ಅವರ ಕಾಲರ್ ಹಿಡಿದುಕೊಂಡೆ ಎಂದು ಹೇಳಿದ್ದು ಇದು ವಿಷ್ಣು ಅಭಿಮಾನಿಗಳು ಕೆರಳುವಂತೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.