James 2022: ಪುನೀತ್ ರಾಜ್‍ಕುಮಾರ್ ಪವರ್‌ಪ್ಯಾಕ್ಡ್ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್

Suvarna News   | Asianet News
Published : Mar 06, 2022, 02:18 PM ISTUpdated : Mar 06, 2022, 02:20 PM IST
James 2022: ಪುನೀತ್ ರಾಜ್‍ಕುಮಾರ್ ಪವರ್‌ಪ್ಯಾಕ್ಡ್ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್

ಸಾರಾಂಶ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹು ನಿರೀಕ್ಷಿತ 'ಜೇಮ್ಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯು/ಎ' ಸರ್ಟಿಫಿಕೇಟ್ ಸಿಕ್ಕಿದೆ.  ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ, ಚೇತನ್ ಕುಮಾರ್ (Chetan Kumar) ನಿರ್ದೇಶನದ 'ಜೇಮ್ಸ್' (James) ಚಿತ್ರದ ಬಿಡುಗಡೆಗೆ ರಾಜ್ಯಾದ್ಯಂತ ಕಾತರ ಹೆಚ್ಚಾಗಿದೆ. ಪುನೀತ್ ಹುಟ್ಟುಹಬ್ಬಕ್ಕೆ 'ಜೇಮ್ಸ್‌' ಸಿನಿಮಾ ರಿಲೀಸ್ ಆಗಲಿದೆ. ಅಂದರೆ ಮಾರ್ಚ್ 17ಕ್ಕೆ ಪವರ್‌ಫುಲ್ ಸಿನಿಮಾ 'ಜೇಮ್ಸ್‌' ಬಿಡುಗಡೆಯಾಗಲಿದೆ. ಈ ಹೊತ್ತಲ್ಲೇ ಅಪ್ಪು ಅಭಿನಯದ ಕೊನೆಯ ಸಿನಿಮಾದ ಚಿತ್ರಕ್ಕೆ ಸೆನ್ಸಾರ್‌ನಿಂದ ಸರ್ಟಿಫಿಕೇಟ್ ಸಿಕ್ಕಿದೆ. ಹೌದು! ಟೀಸರ್‌ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ 'ಜೇಮ್ಸ್' ಚಿತ್ರವು ಸೆನ್ಸಾರ್​​ನಲ್ಲಿ (Censor) ಪಾಸಾಗುವ ಮೂಲಕ ಮೆಚ್ಚುಗೆಯನ್ನು ಪಡೆದಿದೆ.

ಸೆನ್ಸಾರ್​ನಲ್ಲಿ ಯಾವುದೇ ಕಟ್​ ಇಲ್ಲದೆ ಯು/ಎ ಪ್ರಮಾಣಪತ್ರ (UA Censor Certificate) ಸಿಕ್ಕಿದೆ. ಇದರ ಜತೆಗೆ ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಕಟ್​ ಮಾಡಲು ಸೆನ್ಸಾರ್ ಮಂಡಳಿ ಸೂಚನೆ ನೀಡಿಲ್ಲ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಜೇಮ್ಸ್​' ಸಿನಿಮಾದ ಟೀಸರ್​ನಲ್ಲಿ (Teaser) ಪುನೀತ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ಆಗಿ ಅಬ್ಬರಿಸಿದ್ದರು‌. ಇದಾದ ಬಳಿಕ 'ಟ್ರೇಡ್​ಮಾರ್ಕ್'​ (Trademark) ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದರು. ಈ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ವಿಶೇಷವಾಗಿ 'ಜೇಮ್ಸ್'​ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಅವರ ಸಹೋದರ ಶಿವರಾಜ್​ಕುಮಾರ್ (Shivarajkumar) ಡಬ್​ ಮಾಡಿದ್ದಾರೆ.

James 2022: ಪುನೀತ್ ರಾಜ್‌ಕುಮಾರ್ ಟ್ರೇಡ್‌ಮಾರ್ಕ್‌ ಹಾಡು ಬಿಡುಗಡೆ!

ಸದ್ಯ ಆಯಾಯ ಪ್ರದೇಶಗಳ ಪುನೀತ್ ಅಭಿಮಾನಿಗಳು (Fans) ಮಾ.17ರಂದು ದೊಡ್ಡ ಮಟ್ಟದಲ್ಲಿ 'ಜೇಮ್ಸ್' ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಈ ಮಧ್ಯೆ ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಪಟ್ಟಿ (Theatres List) ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರಮಂದಿರಗಳ ಪಟ್ಟಿ ಕೈಸೇರದ ಹೊರತು ಕಟೌಟ್ ಹಾಕಲು, ಮಿಕ್ಕ ಸಂಭ್ರಮಗಳ ಸಿದ್ಧತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಬೇಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಯಾವ ಚಿತ್ರ ಮಂದಿರಗಳಲ್ಲಿ 'ಜೇಮ್ಸ್' ಬಿಡುಗಡೆ ಆಗುತ್ತದೆಂದು ತಿಳಿಸಬೇಕೆಂಬುದು ಅಭಿಮಾನಿಗಳ ಒತ್ತಾಯ. 



ಸಿನಿಮಾ ಬಿಡುಗಡೆಗೆ ಇನ್ನು ಕೆಲವು ದಿನ ಮಾತ್ರ ಬಾಕಿ ಇದೆ. ಚಿತ್ರಮಂದಿರಗಳ ಪಟ್ಟಿ ಬಿಡುಗಡೆ ಆಗದೇ ಇರುವುದರಿಂದ ಅಭಿಮಾನಿಗಳಿಗೆ ಯಾವ ಚಿತ್ರಮಂದಿರದಲ್ಲಿ ಸಿನಿಮಾ ಬರಲಿದೆ ಎಂಬ ಐಡಿಯಾ ಸಿಗುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ 'ಜೇಮ್ಸ್' ಸಿನಿಮಾ ತಮ್ಮ ಸಮೀಪದ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಯೇ ಆಗುತ್ತದೆ ಎಂಬ ನಂಬಿಕೆಯಿಂದ ಅಭಿಮಾನಿಗಳು ತಯಾರಿ ಶುರು ಮಾಡಿಕೊಂಡಿದ್ದಾರೆ. ಅನ್ನದಾನ, ರಕ್ತದಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. 'ಜೇಮ್ಸ್​' ಚಿತ್ರದ ಪ್ರಿ ರಿಲೀಸ್ ಈವೆಂಟ್‌ಗೆ ಅದ್ದೂರಿ ತಯಾರಿಗಳು ನಡೆಯುತ್ತಿವೆ. ಪುನೀತ್‌ ರಾಜ್‌ಕುಮಾರ್ ಅವರ ಆಸೆಯಂತೆ ಹೊಸಪೇಟೆಯಲ್ಲಿ (Hosapete ) ಸಿನಿಮಾ ಬಿಡುಗಡೆಯ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ. 

Making of James Movie 2022: ಚಿತ್ರದ ಎಲ್ಲಾ ಫೈಟ್​ ಸೀನ್‌ಗಳು ಅಪ್ಪು ಸರ್ ಮೊಬೈಲ್​ನಲ್ಲಿತ್ತು: ಚೇತನ್‌ಕುಮಾರ್

ಈ ನಿಟ್ಟಿನಲ್ಲಿ ಚಿತ್ರತಂಡ ದೊಡ್ಡ ಮಟ್ಟದಲ್ಲಿ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನೂ ಈ ಕಾರ್ಯಕ್ರಮಕ್ಕೆ ಟಾಲಿವುಡ್‌ನಿಂದ (Tollywood) ನಟರಾದ ಚಿರಂಜೀವಿ (Chiranjeevi), ಜ್ಯೂಎನ್‌ಟಿಆರ್ (Jr NTR) ಮುಂತಾದವರು ಆಗಮಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ, ಚಿತ್ರತಂಡ ಮಾತ್ರ ಈ ಬಗ್ಗೆ ಅಧಿಕೃತವಾಗಿ ಹೇಳುತ್ತಿಲ್ಲ. ಈಗಾಗಲೇ ಬೇರೆ ಬೇರೆ ಭಾಷೆಗಳಿಗೂ 'ಜೇಮ್ಸ್'  ಚಿತ್ರವನ್ನು ಡಬ್ (Dubbing) ಮಾಡಲಾಗಿದ್ದು, ಹೀಗಾಗಿ ಚಿತ್ರದ ಪ್ರಿ ರಿಲೀಸ್ ಈವೆಂಟ್ ಅನ್ನು ಕೂಡ ಪ್ಯಾನ್ ಇಂಡಿಯಾ ಕಾರ್ಯಕ್ರಮವಾಗಿ ರೂಪಿಸಬೇಕು ಎಂಬುದು ಚಿತ್ರತಂಡದ ಗುರಿ.

ಇನ್ನು 'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶರತ್ ಕುಮಾರ್, ಶ್ರೀಕಾಂತ್,‌ ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರಬಳಗ ಈ ಚಿತ್ರಕ್ಕಿದ್ದು, ಸ್ವಾಮಿ ಜೆ ಗೌಡ ಕ್ಯಾಮರಾ ಕೈಚಳಕ, ಚರಣ್ ರಾಜ್ ಸಂಗೀತ ಸಂಯೋಜನೆಯಿದೆ. ಕಿಶೋರ್ ಪತ್ತಿಕೊಂಡ (Kishore Pathikonda) ಚಿತ್ರವನ್ನು ನಿರ್ಮಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ