ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಎರಡನೇ ದಿನವಾದ ಶನಿವಾರ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸುವ ಮೂಲಕ ಅಗಲಿದ ನಟನನ್ನು ಸ್ಮರಿಸಿಕೊಳ್ಳಲಾಯಿತು.
ಬೆಂಗಳೂರು (ಮಾ.06): ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ (13th Bengaluru International Film Festival) ಎರಡನೇ ದಿನವಾದ ಶನಿವಾರ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ನುಡಿ ನಮನ ಸಲ್ಲಿಸುವ ಮೂಲಕ ಅಗಲಿದ ನಟನನ್ನು ಸ್ಮರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಭಗವಾನ್ (Bhagavan) ಮಾತನಾಡಿ, ‘ಪುನೀತ್ ರಾಜ್‌ಕುಮಾರ್ ನಟನೆ ಮತ್ತು ದಾನ ಎರಡರಲ್ಲೂ ಅಪ್ಪನನ್ನು ಮೀರಿಸಿದವರು. ಸ್ವತಃ ಡಾ ರಾಜ್‌ಕುಮಾರ್ (Dr Rajkumar) ಅವರೇ ಒಮ್ಮೆ ಚಿತ್ರದ ಶೂಟಿಂಗ್‌ನಲ್ಲಿ ‘ಇವನು ನನ್ನನ್ನೇ ಮೀರಿಸುತ್ತಾನೆ’ ಎಂದು ಖುಷಿಪಟ್ಟಿದ್ದರು’ ಎಂದು ಹೇಳಿದರು.
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ (Sunil Puranik), ‘ಪುನೀತ್ ರಾಜ್‌ಕುಮಾರ್ ಅವರ ‘ಪೃಥ್ವಿ’ (Prithvi) ನನ್ನಿಷ್ಟದ ಸಿನಿಮಾ. ಆ ಚಿತ್ರದ ಪ್ರತಿ ದೃಶ್ಯ ನನ್ನ ಕಣ್ಣ ಮುಂದೆ ಇದೆ. ಒಬ್ಬ ಕಮರ್ಷಿಯಲ್ ಹೀರೋ ಕತೆಗೆ ತಮ್ಮನ್ನು ಒಗ್ಗಿಸಿಕೊಂಡರೆ ಎಂಥ ಸಿನಿಮಾ ಮೂಡಿ ಬರುತ್ತದೆ ಎಂಬುದಕ್ಕೆ ‘ಪೃಥ್ವಿ’ ಸಿನಿಮಾ ಅತ್ಯುತ್ತಮ ಉದಾಹರಣೆ’ ಎಂದರು.
ನಿರ್ದೇಶಕ ಚೇತನ್ ಕುಮಾರ್ (Chetan Kumar), ‘ಎರಡು ವರ್ಷ ಹತ್ತಿರದಿಂದ ಕಂಡ ವ್ಯಕ್ತಿ ಇಲ್ಲ ಎಂದರೆ ಅರಗಿಸಿಕೊಳ್ಳುವುದು ಕಷ್ಟ. ‘ಜೇಮ್ಸ್’ (James) ಚಿತ್ರಕ್ಕೆ ನಾವು 3ಡಿ ಲಿರಿಕಲ್ ವಿಡಿಯೋಗೆ ಅವರ ಮನೆಯ ಮುಂದೆಯೇ ಚಿತ್ರೀಕರಣ ಮಾಡಿದ್ದೆವು. ಅದು ಚಿತ್ರೀಕರಣ ಆದ ಮೂರನೇ ದಿನಕ್ಕೆ ಪುನೀತ್ ಅವರು ನಮ್ಮನ್ನು ಅಗಲಿದರು. ‘ಜೇಮ್ಸ್’ ಚಿತ್ರಕ್ಕೆ ಯಾವ ಜಾಗದಲ್ಲಿ ಕೊನೆಯ ದೃಶ್ಯದಲ್ಲಿ ನಟಿಸಿದರೋ ಅದೇ ಜಾಗದಲ್ಲಿ ಅವರ ದೇಹವನ್ನು ಇಟ್ಟಿದ್ದರು. ಅದು ನೆನೆದರೆ ಈಗಲೂ ದುಃಖವಾಗುತ್ತದೆ’ ಎಂದರು. ನಿರ್ದೇಶಕ ಪವನ್ ಒಡೆಯರ್ ಮಾತನಾಡಿದರು.
undefined
BIFFES: 'ಪೆದ್ರೋ' ಸಿನಿಮಾ ಆಯ್ಕೆಯಾಗದ್ದಕ್ಕೆ ನಟ ರಿಷಬ್, ನಟೇಶ್ ಬೇಸರ
‘ಪುನೀತ್ ಅವರು ಇಲ್ಲದೆ, ಅವರ ಕುರಿತು ಮಾತನಾಡುವ ಸಂದರ್ಭ ಬಂದಿದ್ದು ದುಃಖದ ಸಂಗತಿ. ನಾವೆಲ್ಲ ದೇವರನ್ನು ಹಲವು ರೀತಿಯಲ್ಲಿ ನೋಡುತ್ತೇವೆ. ಆದರೆ, ಪುನೀತ್ ಅವರು ಮನುಷ್ಯತ್ವದಲ್ಲಿ ದೇವರನ್ನು ನೋಡುತ್ತಿದ್ದರು. ರಣವಿಕ್ರಮ ಚಿತ್ರೀಕರಣದ ಸಮಯದಲ್ಲಿ ತಂದೆ ಇಲ್ಲದೆ ಮಗುವಿಗೆ 10ನೇ ತರಗತಿವರೆಗೂ ವಿದ್ಯಾಭ್ಯಾಸಕ್ಕೆ ಬೇಕಾದ ನೆರವು ನೀಡಿದ್ದರು. ಅವರು ಅಭಿಮಾನಿಗಳನ್ನು ದೇವರು ಅಂತ ತೋರಿಕೆಗೆ ಹೇಳುತ್ತಿರಲಿಲ್ಲ’ ಎಂದರು.
ಮಾ.3 ವಿಶ್ವ ಕನ್ನಡ ಚಲನಚಿತ್ರ ದಿನ: ಕನ್ನಡದ ಪ್ರಪ್ರಥಮ ವಾಕ್ ಚಿತ್ರ ಸತಿ ಸುಲೋಚನ 1934ರ ಮಾರ್ಚ್ 3ರಂದು ತೆರೆ ಕಂಡ ಸ್ಮರಣಾರ್ಥವಾಗಿ ಮಾರ್ಚ್ 3ನ್ನು ‘ವಿಶ್ವ ಕನ್ನಡ ಚಲನಚಿತ್ರ ದಿನ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಗುರುವಾರ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಯೋಜಿಸಿದ್ದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಮಾ.3ರಿಂದ 10ರ ವರೆಗೆ) ಉದ್ಘಾಟಿಸಿ ಅವರು ಮಾತನಾಡಿದರು.
BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ, ಮನೇಲಿ ಮೂವಿ ನೋಡ್ಬಹುದಾ?
ಮಾರ್ಚ್ 3 ಕನ್ನಡ ಚಿತ್ರರಂಗಕ್ಕೆ (Sandalwood) ಐತಿಹಾಸಿಕ ದಿನ. ಏಕೆಂದರೆ, ಇದು ಕನ್ನಡದ ಪ್ರಪ್ರಥಮ ವಾಕ್ ಚಿತ್ರ ಬಿಡುಗಡೆಯಾದ ದಿನ. ಈ ದಿನವೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ (Government of Karnataka) ಮಾರ್ಚ್ 3ಅನ್ನು ವಿಶ್ವ ಕನ್ನಡ ಚಲನಚಿತ್ರ ದಿನ ಎಂದು ಘೋಷಿಸುತ್ತಿದ್ದೇನೆ. ಅಲ್ಲದೆ, ಇನ್ನು ಮುಂದೆ ಇದೇ ದಿನದಂದು ಅಂತಾರಾಷ್ಟ್ರೀಯ ಚಲಚಿತ್ರೋತ್ಸವ ಆರಂಭಿಸಲಾಗುವುದು ಎಂದು ತಿಳಿಸಿದರು.