ಅಪ್ಪು ವಿದೇಶದಲ್ಲಿ ಪ್ರಯಾಣ ಮಾಡುವಾಗ ಅಣ್ಣಾವ್ರ ಅಭಿಮಾನಿ ಸಿಕ್ಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಏನಿತ್ತು......
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಿಡುವಿನ ಸಮಯದಲ್ಲಿ ಸಾಕಷ್ಟು ಪ್ರಯಾಣ ಮಾಡುತ್ತಿದ್ದರು. ವರ್ಷಕ್ಕೆ ಎರಡು ಮೂರು ಸಲ ಫ್ಯಾಮಿಲಿ ಟ್ರಿಪ್ ಹೋಗುತ್ತಿದ್ದರು. ಸಖತ್ ಖುಷಿಯಿಂದ ಎಂಜಾಯ್ ಮಾಡಿರುವ ಕ್ಷಣಗಳ ಬಗ್ಗೆ ಫೋಟೋ ಕೂಡ ಅಪ್ಲೋಡ್ ಮಾಡುತ್ತಿದ್ದರು.ಹಾಗೆ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬರುವಾಗ ನಡೆದ ಘಟನೆ ನೆನಪಿಸಿಕೊಂಡಿದ್ದಾರೆ. ವಿದೇಶದಲ್ಲಿ ತಂದೆಯ ಹೆಸರಿಗೆ ಎಷ್ಟು ಬೆಲೆ ಇದೆ? ತಂದೆಯ ಹಾಡಿಗೆ ಎಷ್ಟು ಅಭಿಮಾನಿಗಳು ಇದ್ದಾರೆ ಅನ್ನೋದು ಹಂಚಿಕೊಂಡಿದ್ದಾರೆ.
'ಸಿಡ್ನಿ ಮೂಲಕ ಬೆಂಗಳೂರಿಗೆ ವಾಪಸ್ ಬರ್ತಿದ್ವಿ.ಆಗ ಏರ್‌ಪೋರ್ಟ್‌ನಲ್ಲಿ ಇಮಿಗ್ರೇಷನ್ ಆಫೀಸರ್ ನನ್ನ ಪಾಸ್‌ಪೋರ್ಟ್ ತೆಗೆದುಕೊಂಡು ನೋಡಿದರು. ಪಾಸ್‌ಪೋರ್ಟ ನೋಡುವುದು ನನ್ನ ಮುಖ ನೋಡುವುದು ಮಾಡುತ್ತಿದ್ದರು. ಪಾಸ್‌ಪೋರ್ಟನಲ್ಲಿ ಒಂದು ಹೆಸರು ಇರುತ್ತದೆ ಅದೇ ನಮ್ಮ ತಂದೆಯ ನಿಜವಾದ ಹೆಸರು ಮುತ್ತುರಾಜ್ ಎಂದು. ಅದಾದ ಮೇಲ ಕೊನೆಯಲ್ಲಿ ಒಂದು ಸರ್‌ನೇಮ್ ಬರುತ್ತದೆ, ಆಗ ಕೂಡ ಹೆಸರು ನೋಡುತ್ತಾನೆ ನನ್ನ ಮುಖ ನೋಡುತ್ತಾನೆ ಅಲ್ಲಿ ಇದ್ದಿದ್ದು ರಾಜ್‌ಕುಮಾರ್ ಅಂತ ಹೆಸರು. ನನ್ನ ಯಾಕೆ ಇಷ್ಟು ಸಲ ನೋಡುತ್ತಿದ್ದಾನೆ ಅಂದ ನಾನು ಕೂಡ ಯೋಚನೆ ಮಾಡಿದೆ. ಇದ್ದಕ್ಕಿದ್ದಂತೆ ಖುರ್ಚಿಯಿಂದ ಎದ್ದು ಸರ್ ನೀವು ಡಾ.ರಾಜ್‌ಕುಮಾರ್ ಮಗನಾ ಎಂದು ಕೇಳಿದ್ರು'ಎಂದು ಹಲವು ವರ್ಷಗಳ ಹಿಂದೆ ನಡೆದ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ.
'ಹೌದು ಸರ್ ನಾನು ಡಾ.ರಾಜ್‌ಕುಮಾರ್ ಅವರ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಅಂತ ಅಂದೆ. ಒಂದು ನಿಮಿಷ ಅಂತ ಹೇಳಿ ನನ್ನ ಬಳಿಗೆ ಬಂದು ಹ್ಯಾಂಡ್‌ಶೇಕ್ ಮಾಡಿದ್ದರು.ನಾನು ಮೂಲತಃ ಚೆನ್ನೈನವರು ನನ್ನ ಮಾತೃಭಾಷೆ ತಮಿಳು ಆದರೆ ಆಸ್ಟ್ರೇಲಿಯಾಗೆ 40 ವರ್ಷಗಳು ಆಗಿದೆ.ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ಏಕೆಂದರೆ ಅವರು ಹಾಡುಗಳಿಗೋಸ್ಕರ. ಯಾವಾಗ ಫ್ಯಾನ್ ಆದೆ ಅಂದ್ರೆ ರಾಘವೇಂದ್ರ ಸ್ವಾಮಿಗಳ ಆಲ್ಬಂ ಮಾಡಿದರು ರಾಘವೇಂದ್ರ ರಾಘವೇಂದ್ರ ಎನ್ನಿರಿ ಆ ಹಾಡು ಅಂದ್ರು' ಎಂದು ಪುನೀತ್ ಹೇಳಿದ್ದಾರೆ.
ಇವಾಗ ಮಾತಾಡೋರು ಆಗ ಮುಂದೆ ಬರ್ಬೇಕಿತ್ತು; ದರ್ಶನ್ ಪರ ತೊಡೆ ತಟ್ಟಿದ ಧನ್ವೀರ್