'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ'..! ಈ ಮಾತಿಗೆ ಅಪ್ಪು ರಿಯಾಕ್ಷನ್ ನೋಡಿ..!

Published : Apr 16, 2025, 12:48 PM ISTUpdated : Apr 16, 2025, 01:23 PM IST
'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ'..! ಈ ಮಾತಿಗೆ ಅಪ್ಪು ರಿಯಾಕ್ಷನ್ ನೋಡಿ..!

ಸಾರಾಂಶ

ಅಲ್ಲೊಬ್ಬ ಹುಡುಗ ರಸ್ತೆಯಲ್ಲಿ ಅದನ್ನು ನೋಡಿದ್ದಾನೆ. ಅವನಿಗೆ ಹೆಲ್ಮೆಟ್ ಹಾಕಿಕೊಂಡು ಯಾರೋ ಸೈಕಲ್‌ನಲ್ಲಿ ಹೋಗೋದು ನೋಡಿ ತುಂಬಾ ಅಚ್ಚರಿಯಾಗಿದೆ. ಕಾರಣ, ಅದೆಷ್ಟೋ ಬೈಕ್ ಸವಾರರೇ ಮೇನ್ ರೋಡ್‌ನಲ್ಲೇ ಹೆಲ್ಮೆಟ್ ಹಾಕೋದಿಲ್ಲ. ಅಂಥದ್ರಲ್ಲಿ ಹಳ್ಳಿಯ ರಸ್ತೆಯಲ್ಲಿ..

ಕನ್ನಡ ಚಿತ್ರರಂಗದ ಸ್ಟಾರ್ ನಟ, ಕರ್ನಾಟಕ ರತ್ನ ಬಿರುದು ಗಳಿಸಿ ಮರೆಯಾಗಿ ಹೋದ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಲೈಫಲ್ಲಿ ನಡೆದ ರಿಯಲ್ ಸ್ಟೋರಿ ಇದು. ಪುನೀತ್ ಅವರಿಗೆ ಸೈಕಲ್, ಬೈಕ್ ಓಡಿಸುವ ಕ್ರೇಜ್ ಬಹಳಷ್ಟು ಇತ್ತು ಎಂಬುದು ಬಹಳಷ್ಟು ಜನರಿಗೆ ಗೊತ್ತಿದೆ. ಅದರಂತೆ, ಒಮ್ಮೆ ಅವರು ತಮ್ಮಿಷ್ಟದ ಸೈಕಲ್ ಏರಿ ಸವಾರಿ ಹೊರಟಿದ್ದಾರೆ. ಆದರೆ, ತಲೆ ಸೇಫ್ಟಿಗೆ ಎಂದು ಹೆಲ್ಮೆಟ್ ಧರಿಸಿ ಒಂದು ಕಡೆ ರೋಡ್‌ನಲ್ಲಿ ರೈಡ್ ಮಾಡುತ್ತಿದ್ದಾರೆ. 

ಅಲ್ಲೊಬ್ಬ ಹುಡುಗ ರಸ್ತೆಯಲ್ಲಿ ಅದನ್ನು ನೋಡಿದ್ದಾನೆ. ಅವನಿಗೆ ಹೆಲ್ಮೆಟ್ ಹಾಕಿಕೊಂಡು ಯಾರೋ ಸೈಕಲ್‌ನಲ್ಲಿ ಹೋಗೋದು ನೋಡಿ ತುಂಬಾ ಅಚ್ಚರಿಯಾಗಿದೆ. ಕಾರಣ, ಅದೆಷ್ಟೋ ಬೈಕ್ ಸವಾರರೇ ಮೇನ್ ರೋಡ್‌ನಲ್ಲೇ ಹೆಲ್ಮೆಟ್ ಹಾಕೋದಿಲ್ಲ. ಅಂಥದ್ರಲ್ಲಿ ಹಳ್ಳಿಯ ರಸ್ತೆಯಲ್ಲಿ ಅದೂ ಸೈಕಲ್‌ನಲ್ಲಿ ಹೋಗುತ್ತಿರುವ ಯಾರೋ ಒಬ್ಬರು ಹೆಲ್ಮಟ್ ಹಾಕಿರೋದನ್ನು ನೋಡಿ ಆತನಿಗೆ ವಿಚಿತ್ರ ಹಾಗೂ ವಿಭಿನ್ನ ಎನಿಸಿದೆ. ಅದನ್ನು ನೋಡಿ, ಒಬ್ಬನೇ ಇದ್ದರೂ ಜೋರಾಗಿ 'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ..' ಎಂದಿದ್ದಾನೆ ಆ ಹುಡುಗ.

19ನೇ ಪುಣ್ಯ ತಿಥಿ: ಅಣ್ಣಾವ್ರ ಈ ಸೀಕ್ರೆಟ್‌ ಇನ್ನೂ ಗೊತ್ತಿಲ್ವಾ?

ಅದನ್ನು ಕೇಳಿದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಒಳಗೊಳಗೇ ನಗುವೋ ನಗು.. ಕಾರಣ, ಸೇಫ್ಟಿಗೆ ಎಂದು ಹಾಕ್ಕೊಂಡಿದ್ದು ಆತನಿಗೆ ಅರ್ಥವಾಗಿಲ್ಲ. ಈ ಬಗ್ಗೆ ಮಾತನ್ನಾಡಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು 'ನನಗೆ ಆ ಹುಡುಗನ ಮಾತನ್ನು ಕೇಳಿ ನಗು ತಡೆಯಲಾಗಲಿಲ್ಲ. ಅವನಿಗೆ ಸೈಕಲ್ ಓಡಿಸುವಾಗ ಹೆಲ್ಮೆಟ್ ಹಾಕಿರೋದನ್ನ ನೋಡಿ ಭಾರೀ ತಮಾಷೆ ಎನ್ನಿಸಿದೆ. ಅದಕ್ಕೇ ಆ ಹುಡುಗ ಅದನ್ನು ನೋಡಿದ ತಕ್ಷಣ ಜೋರಾಗಿಯೇ ರಿಯಾಕ್ಟ್ ಮಾಡಿದ್ದಾನೆ. ಆದರೆ, ಅದು ನಾನೇ ಎಂಬುದು ಆತನಿಗೆ ಗೊತ್ತಿಲ್ಲ' ಎಂದಿದ್ದಾರೆ. ಈ ಘಟನೆಯನ್ನು ಸಂದರ್ಶನದಲ್ಲಿ ನಗುತ್ತಾ ಹೇಳಿಕೊಂಡಿದ್ದಾರೆ. 

ಇಲ್ಲಿ ಅರ್ಥ ಮಾಡಿಕೊಳ್ಳುವ ಸಂಗತಿ ಸಾಕಷ್ಟಿದೆ. ಕಾರಣ, ಅದು ಸೈಕಲ್ ಆಗಿರಲಿ ಅಥವಾ ಬೈಕ್ ಆಗಿರಲಿ, ಟೂ ವೀಲರ್‌ನಲ್ಲಿ ಸವಾರಿ ಮಾಡುವಾಗ ಹೆಲ್ಮೆಟ್ ಇದ್ದರೆ ಒಳ್ಳೆಯದು. ಆದರೆ ಅದನ್ನು ಹಲವರು ಅರ್ಥ ಮಾಡಿಕೊಳ್ಳುವುದಿಲ್ಲ. ರಸ್ತೆ ಹಳ್ಳಿಯದಾಗಿರಲಿ ಅಥವಾ ಸಿಟಿಯಲ್ಲೇ ಆಗಿರಲಿ, ಹೆಲ್ಮಟ್ ನಮ್ಮ ದೇಹದ ಸೂಕ್ಷ್ಮ ಭಾಗವಾದ ತಲೆ ಅಂದರೆ ಮೆದುಳನ್ನು ಸಂರಕ್ಷಿಸುತ್ತದೆ. ಆದರೆ, ಹಲವರು ಅತ್ಯಗತ್ಯ ಎನ್ನುವ ಬೈಕ್ ರೈಡ್‌ಗೂ ಹೆಲ್ಮೆಟ್ ಹಾಕಿಕೊಳ್ಳದೇ ಸಮಸ್ಯೆ ತಂದುಕೊಳ್ಳುತ್ತಾರೆ. ಅದು ರೂಲ್ಸ್ ಫಾಲೋ ಮಾಡೋದಕ್ಕಿಂತ ಹೆಚ್ಚಾಗಿ ನಮ್ಮ ಸೇಫ್ಟಿಗೆ ಮುಖ್ಯ ಎಂದು ಹಲವರು ಅರ್ಥ ಮಾಡಿಕೊಳ್ಳೋದಿಲ್ಲ.

ಚಂದನ್‌ ಶೆಟ್ಟಿ ರೊಮಾನ್ಸ್‌ಗೆ ಸೆನ್ಸಾರ್ ಒಪ್ಪಿಗೆ ಕೂಡ ಸಿಕ್ತು ಗುರೂ.. ಇನ್ನೇನಿದೆ ಪ್ರಾಬ್ಲಂ..?!

ಆದರೆ, ಪುನೀತ್ ರಾಜ್‌ಕುಮಾರ್ ಅವರಿಗೆ ಆ ಅರಿವು ಇತ್ತು. ಅದಕ್ಕೇ ಅವರು ಹೆಲ್ಮೆಟ್ ಹಾಕಿಕೊಂಡು ಸೈಲಕ್ ಸವಾರಿ ಮಾಡಿದ್ದಾರೆ. ಜೊತೆಗೆ, ತಮ್ಮ ಐಡೆಂಟಿಟಿ ಸಿಗದಿರಲಿ ಎಂಬ ಸಂಗತಿ ಕೂಡ ಇದ್ದೆ ಇದೆ. ಇಂದು ನಟ ಪುನೀತ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ನೆನಪು ಸದಾ ಕನ್ನಡಿಗರ ಜೊತೆಯಲ್ಲಿ ಇದ್ದೇ ಇರುತ್ತದೆ. ಕಾರಣ, ಅವರು ಬದುಕಿ ಹೋಗಿರುವ ರೀತಿ.

ಅದು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಅವರು ಮಾಡಿರುವ ಸಹಾಯ ಇರಬಹುದು, ಅಥವಾ, ತಮ್ಮ ಅಭಿನಯದ ಸಿನಿಮಾಗಳ ಮೂಲಕ ಸಮಾಜಕ್ಕೆ ಕೊಟ್ಟ ಸಂದೇಶವೇ ಆಗಿರಬಹುದು. ಒಟ್ಟಿನಲ್ಲಿ, ನಟ ಪುನೀತ್ ಅವರು ಪ್ರತಿಯೊಂದು ವಿಷಯದಲ್ಲಿಯೂ ಸೂಕ್ಷ್ಮವಾದ ಸಂದೇಶವನ್ನು ಕೊಟ್ಟಿದ್ದಾರೆ. ಅರ್ಥ ಮಾಡಿಕೊಳ್ಳುವವರಿಗೆ ಅವರಿಂದ ಸಾಕಷ್ಟು ಸಂಗತಿ ಕಲಿಯುವಂಥದ್ದು ಇದೆ. 

ಯಶ್ ಶೂಟಿಂಗ್‌ ಸೆಟ್‌ಗೇ ಲಗ್ಗೆ ಇಟ್ಟು ರಾಧಿಕಾ ಪಂಡಿತ್ ಅದೇನ್ ಮಾಡಿದಾರೆ ನೋಡಿ; ಹೊಸ ಕಥೆನಾ..?!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!
ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?