ತಿನ್ಸ್‌ಬೇಕು, ಕುಡ್ಸ್ಬೇಕು ಒಂದಷ್ಟು ಮಜಾ ಮಾಡ್ಸ್ಬೇಕು, ಚಿತ್ರರಂಗದಲ್ಲಿ ಬಕೆಟ್ ಹಿಡಿಬೇಕು: ಮಯೂರ್ ಪಟೇಲ್

By Vaishnavi ChandrashekarFirst Published Feb 6, 2023, 11:57 AM IST
Highlights

ಆಕ್ಟಿಂಗ್ ಮಾತ್ರವಲ್ಲ ನಾಯಕ ನಟನಿಗೆ ಬ್ಯುಸಿನೆಸ್‌ ಮಾಡಲು ಬರಬೇಕು ಎಂದು ಹೇಳುವ ನಟ ಮಯೂರ್ ಪಟೇಲ್‌ ಮೊದಲ ಸಿನಿಮಾ ಪ್ರಚಾರ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. 
 

2003ರಲ್ಲಿ ಮಧನ್ ಪಟೇಲ್ ಪುತ್ರ ಮಯೂರ್ ಪಟೇಲ್‌ ಅಭಿನಯಿಸಿರುವ ಮಣಿ ಸಿನಿಮಾ ರಿಲೀಸ್ ಆಗುತ್ತದೆ. ಮೊದಲ ಸಿನಿಮಾದಲ್ಲಿ ದೊಡ್ಡ ತಾರ ಬಳಗವಿದೆ ಸೂಪರ್ ಹಿಟ್ ಹಾಗೆ ಹೀಗೆ ಎಂದು ಮಾತನಾಡುವವರಿಗೆ ರಿಲೀಸ್ ಸಮಯದಲ್ಲಿ ಎಷ್ಟು ಕಷ್ಟವಾಯ್ತು ಎಂದು ಸ್ವತಃ ಮಯೂರ್ ಹಂಚಿಕೊಂಡಿದ್ದಾರೆ.

'ಮಣಿ ಸಿನಿಮಾ ರಿಲೀಸ್‌ ಸಮಯದಲ್ಲಿ ತುಂಬಾ ಕಷ್ಟವಾಯ್ತು. ಆಗ ಟೀ-ಜಂಕ್ಷನ್‌ನಲ್ಲಿ ಹೋರ್ಡಿಂಗ್ ಹಾಕಿಸುವುದು ಅಂದ್ರೆ ದೊಡ್ಡ ಸಿನಿಮಾ ರೀತಿ. ಒಂದು ವಾರಕ್ಕೆ 20 ಸಾವರಿ ಹಣ ಕೊಡಬೇಕಿತ್ತು. ಒಂದು ತಿಂಗಳು ಅಲ್ಲಿ ಹೋರ್ಡಿಂಗ್ ಮಾಡಿಸಬೇಕು ಅಂದ್ರೆ 1 ಲಕ್ಷ ಬೇಕು. ಪೋಸ್ಟರ್ ಹಾಕ್ಸಿ ಅಂತ ಹೇಳುವುದು ತುಂಬಾನೇ ಸುಲಭ. ನನ್ನ ಮೊದಲ ಸಿನಿಮಾ ಅಲ್ಲಿ ಹೋರ್ಡಿಂಗ್ ಹಾಕಿಸಬೇಕು ಯಾರನ್ನ ಕೇಳಬೇಕು ಹೇಗೆ ಮಾಡಬೇಕು ಗೊತ್ತಿಲ್ಲ. ನಿಜ ಹೇಳಬೇಕು ಅಂದ್ರೆ ಸಿನಿಮಾ ಇಂಡಸ್ಟ್ರಿಗೆ ಬರಲು ಆಕ್ಟಿಂಗ್ ಬೇಕು ಅನ್ನೋದು ಅಷ್ಟೇ ಗೊತ್ತಿತ್ತು ಹೇಗೆ ಅಂದ್ರೆ ಆಕ್ಟಿಂಗ್ ಇದ್ರೆ ಎಲ್ಲಾ ನಡೆಯುತ್ತದೆ ಟ್ಯಾಲೆಂಟ್‌ ಇದ್ರೆ ಅದೇ investment ಅಂದುಕೊಂಡಿದ್ದೆ. ಇಲ್ಲ ಅದು ಸುಳ್ಳು. ನಮ್ಮ ಬಳಿ ಎಲ್ಲಾ ಇರಬೇಕು. ಬ್ಯುಸಿನೆಸ್‌ ತಲೆಯಲ್ಲಿ ಇರಬೇಕು, ಒಂದಷ್ಟು ಜನರಿಗೆ ಬಕೆಟ್ ಹಿಡಿಯಬೇಕು...ಈ ವಿಚಾರದ ಬಗ್ಗೆ ನಾನು ಬಹಿರಂಗವಾಗಿ ಸತ್ಯ ಹೇಳುತ್ತಿರುವೆ. ಒಂದಷ್ಟು ಜನರಿಗೆ ತಿನ್ನಿಸಬೇಕು ಕುಡಿಸಬೇಕು...ಮಜಾ ಮಾಡಿಸಬೇಕು ಇದು ನಮಗೆ ಏನೂ ಗೊತ್ತಿಲ್ಲ. ಅಭ್ಯಾಸ ನಮಗೂ ಇದೆ ಆದರೆ ಇದನ್ನು ಬಂಡವಾಳ ಮಾಡಿಕೊಂಡು ಜೀವನ ನಡೆಸುವವರು ಒಂದಷ್ಟು ಜನರಿದಾರೆ ಅದು ತಪ್ಪು' ಎಂದು ರಘುರಾಮ್ ನಡೆಸುವ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಮಯೂರ್ ಮಾತನಾಡಿದ್ದಾರೆ. 

17 ವರ್ಷಕ್ಕೆ ಮದುವೆ, ಮಗು ಆದ್ಮೇಲೆ ಸಿನಿಮಾ; ವಿಚ್ಛೇದನದ ಬಗ್ಗೆ ನಟಿ ಅಶ್ವಿನಿ ಗೌಡ ಮಾತು

'ನನ್ನ ಮೊದಲ ಸಿನಿಮಾ ಬಗ್ಗೆ ಒಬ್ಬರು ಬರೆಯಬೇಕು ನನ್ನ ಜೊತೆ ಮಾತನಾಡಬೇಕು ಅಂದ್ರೆ ದುಡ್ಡು ಕೊಡಬೇಕು. ಅದು ನನಗೆ ಗೊತ್ತಿಲ್ಲ ಜರ್ನಿ ಸಾಗುತ್ತಾ ಸಾಗುತ್ತಾ ಎಲ್ಲಿ ಹೇಗೆ ಯಾರನ್ನು ಹೇಗೆ ಬಳಸಿಕೊಳ್ಳಬೇಕು ಜೊತೆ ನಾವು ಹೇಗೆ ನಡೆದುಕೊಳ್ಳಬೇಕು ಅನ್ನೋದು ತಿಳಿದುಕೊಂಡೆ. ಆ ಸಮಯದಲ್ಲಿ ಕಲಿಸುವವರು ಯಾರೂ ಇರಲಿಲ್ಲ. ಎಲ್ಲರೂ ಅಂದುಕೊಳ್ಳುತ್ತಾರೆ ತಂದೆ ಇದ್ದಾರೆ ಬಿಡು ಅಂತ ಆದರೆ ನನ್ನ ತಂದೆ ಏನೂ ಹೇಳಿಕೊಟ್ಟಿಲ್ಲ. ನಿನ್ನಲ್ಲಿ ನಿಜವಾದ ಕಲೆ ಇದ್ರೆ ಭಗವಂತ ನಿನ್ನ ಕೈ ಹಿಡಿಯುತ್ತಾನೆ ಅಂತ ಪ್ರ್ಯಾಕ್ಟಿಕಲ್ ಆಗಿ ಹೇಳುತ್ತಿದ್ದರು. ಒಂದು ಘಟನೆ ಹೇಳಬೇಕು...ಸ್ಕೂಲ್‌ನಲ್ಲಿ ನಾನು ಕಡಿಮೆ ಮಾರ್ಕ್ಸ್‌ ಪಡೆದುಕೊಂಡಿದ್ದೆ ತಂದೆ ಅಲ್ಲಿಗೆ ಬಂದು ಚೆನ್ನಾಗಿ ಮಾಡುತ್ತಾನೆ ಮುಂದಿನ ಸಲ ಒಳ್ಳೆ ಮಾರ್ಕ್ಸ್‌ ಬರುತ್ತೆ ಅಂತ ಹೇಳಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಚೆನ್ನಾಗಿ ಓದಿ ಮಾರ್ಕ್ಸ್‌ ತರುವುದಾದರೆ ಓದು ಇಲ್ಲ ನಿನ್ನ ಹಣೆ ಬರಹ ಅಂತ ಹೇಳಿ ಬಿಟ್ಟರು. ನನ್ನ ಜೀವನದಲೂ ಇಷ್ಟೇ ಪ್ರಾಕ್ಟಿಕಲ್ ಅಗಿರುವೆ. 5% ಮಾತ್ರ ನಿನ್ನ ಕಲೆಗೆ ಬೆಲೆ ಇರುವುದು 95% ನಿನ್ನಲ್ಲಿ ಏನ್‌ ಇದೆ ಅದನ್ನು ಕಿತ್ಕೊಂಡು ತಿನ್ನುವವರು ಎಂದು ಕಿವಿ ಮಾತು ಹೇಳಿದ್ದಾರೆ' ಎಂದಿದ್ದಾರೆ ಮಯೂರ್ ಪಟೇಲ್. 

ಮಲ್ಲೇಶ್ವರಂನಲ್ಲಿ ಬ್ರಾಹ್ಮಿನ್‌ ಕ್ರೌಡ್‌ ಜಾಸ್ತಿ; ಹೋಟೆಲ್‌ ಬಾಗಿಲು ಮುಚ್ಚಿದ ನಟಿ ಆಶಿತಾ

'ಈಗ ಚಿತ್ರರಂಗಕ್ಕೆ ಕಾಲಿಡುವವರಿಗೆ ಅಕ್ಟಿಂಗ್ ಗೊತ್ತಿರುತ್ತದೆ ಬ್ಯುಸಿನೆಸ್‌ ಗೊತ್ತಿರುತ್ತದೆ ಯಾರನ್ನು ಹಿಡಿದರೆ ಏನು ಕೆಲಸ ಆಗುತ್ತದೆ ಎಂದು ಗೊತ್ತಿರುತ್ತದೆ ಆದರೆ ನನಗೆ ಈಗಲೂ ಏನೂ ಗೊತ್ತಿಲ್ಲ. ಓಟಿಟಿಗೆ ಹೋಗಿ ಮಾತನಾಡಿ ಎನ್ನುತ್ತಾರೆ ಹೇಗೆ ಮಾಡಬೇಕು ಅದು ನನಗೆ ಗೊತ್ತಿಲ್ಲ. ಕ್ಯಾಮೆರಾ ಮುಂದೆ ನಿಲ್ಲಿಸಿದ ಆಕ್ಟಿಂಗ್ ಮಾಡು ಅಂದ್ರೆ ಮಾತ್ರ ನನಗೆ ಆಗುವುದು' ಎಂದು ಹೇಳಿದ್ದಾರೆ. 

click me!