ಪುನೀತ್ ಕನಸನ್ನು 6 ವರ್ಷದಲ್ಲಿ ನನಸು ಮಾಡಿದ ಯಶ್; ಅಪ್ಪು ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದ ರಾಕಿಂಗ್ ಸ್ಟಾರ್!

Published : Aug 13, 2026, 06:18 PM IST
Puneeth Rajkumar Yash

ಸಾರಾಂಶ

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಯಶ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ತಾವು ಕಂಡ ಕನಸನ್ನು ಹೇಳಿದ್ದರು. ಪುನೀತ್ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಯಶ್ ಕೇವಲ ಆರೇಳು ವರ್ಷದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನನಸು ಮಾಡಿದ್ದಾರೆ. ಟಾಕ್ಸಿಕ್ ಪಾತ್ರವಲ್ಲ, ಹಾಗಾದರೆ ಯಾವುದು? ಇಲ್ಲಿ ತಿಳಿಯಿರಿ

ಕನ್ನಡ ಚಿತ್ರರಂಗದ ಮರೆಯಲಾಗದ ನೆನವುಗಳಲ್ಲಿ ಒಬ್ಬರಾಗಿರುವ ಪುನೀತ್ ರಾಜ್‌ ಕುಮಾರ್ ಅವರು ಸಿನಿಮಾಗಳು ಹಾಗೂ ನಾಯಕ ನಟರ ಬಗ್ಗೆ ಹೇಳಿದ ಬಹುತೇಕ ಮಾತುಗಳು ನೈಜ ಘಟನೆಗಳಾಗಿ ನಮ್ಮ ಕಣ್ಣಮುಂದೆ ಬಂದಿವೆ. ಅದರಲ್ಲಿಯೂ ನಟ ಯಶ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಪುನೀತ್ ರಾಜ್‌ಕುಮಾರ್ ಹೇಳಿದ ಮಾತನ್ನು ಇದೀಗ ಯಶ್ ನನಸು ಮಾಡಿದ್ದಾರೆ.

ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಗಜಕೇಸರಿ ಸಿನಿಮಾವನ್ನು ಮಾಡಿದಾಗಲೇ ಸುವರ್ಣ ನ್ಯೂಸ್‌ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್ ಕುಮಾರ್ ಅವರನ್ನು ನಟಿ ತಾರಾ ಅವರು ಮಾತನಾಡಿಸಿದ್ದರು. ಈ ವೇಳೆ ನಟ ಯಶ್ ಕೂಡ ಹಾಜರಿದ್ದರು. ಆಗ ನಟಿ ತಾರಾ ಅವರು ಸುವರ್ಣ ನ್ಯೂಸ್ ಲೋಗೋ ಹಿಡಿದು 'ಪುನೀತ್ ಅವರೇ ನೀವು ಯಶ್ ಅವರನ್ನು ಯಾವ ಪಾತ್ರದಲ್ಲಿ ನೋಡಬೇಕು ಅಂತಾ ಇಷ್ಟ, ಅಂದರೆ ಯಾವ ರೀತಿ ಪರದೆ ಮೇಲೆ ನೋಡಬೇಕು ಅಂತಾ ಇಷ್ಟಪಡ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ

ಇದಕ್ಕೆ ಉತ್ತರಿಸಿದ ಪುನೀತ್ ರಾಜ್ ಕುಮಾರ್ ಅವರು, ಎಂದಿನಂತೆ ನಗುತ್ತಲೇ 'ರಾಕಿ ಬಾಯ್' ಎಂದು ಹೇಳುತ್ತಾರೆ. ಆಗ ಅದನ್ನ ಮಾಡಾಯ್ತು (ಕೆಜಿಎಫ್ ಸಿನಿಮಾ), ಆ ಬಗ್ಗೆ ಹಿಸ್ಟರಿ ಕೂಡ ಕ್ರಿಯೇಟ್ ಆಯ್ತು. ಅದನ್ನು ಬಿಟ್ಟು ಬೇರೆ ಯಾವುದು ಎಂದು ಪುನಃ ತಾರಾ ಅವರು ಪ್ರಶ್ನೆ ಮಾಡುತ್ತಾರೆ.

ಇತಿಹಾಸ ಅಥವಾ ಪೌರಾಣಿಕ ಪಾತ್ರ

ಪುನೀತ್ ಮಾತು ಮುಂದುವರೆಸಿ, ಯಶ್ ಅವರು ಬೇರೆ ಮತ್ತೆ ಈಗ ಇರುವ ಯಶ್ ಗಡ್ಡಕ್ಕೆ ಹಾಗೂ ಕೂದಲಿನ ಉದ್ದಕ್ಕೆ ನನಗೆ ಅನ್ನಿಸುವ ಮಟ್ಟಿಗೆ ಹಿಸ್ಟೋರಿಕಲ್ ಅಥವಾ ಮೈಥಲಾಗಿಕಲ್ ಕ್ಯಾರೆಕ್ಟರ್ (ಐತಿಹಾಸಿಕ ಅಥವಾ ಪೌರಾಣಿಕ ಪಾತ್ರ) ಅನ್ನು ಮಾಡಬೇಕು. ಈಗಾಗಲೇ ಅದನ್ನು ಕೃಷ್ಣ ಡೈರೆಕ್ಷನ್ ಮಾಡಿರುವ ಸಿನಿಮಾ ಗಜಕೇಸರಿ ಸಿನಿಮಾದಲ್ಲಿ ಮಾಡಿದ್ದಾರೆ. ಆದರೆ, ಅದರಲ್ಲಿ ಕೇವಲ ಒಂದು ಬಿಟ್ (ಒಂದು ದೃಶ್ಯ) ಬಂದು ಹೋಗುತ್ತದೆ. ಭವಿಷ್ಯ ಈಗಿರುವ ತಂತ್ರಜ್ಞಾನ ಮತ್ತು ಜನರು ಇಚ್ಛೆಪಡುವಂತಹದ್ದನ್ನು ನೋಡಿದರೆ ಹಿಸ್ಟೋರಿಕಲ್ ಪಾತ್ರದಲ್ಲಿ ಯಶ್ ಬಂದರೆ ವೆರಿಗುಡ್ ಎಂದು ಹೇಳುತ್ತಾರೆ.

ಪುನೀತ್ ಅವರ ಕನಸಿನಂತೆ 2019ರಲ್ಲಿ ಹೇಳಿದ ಮಾತನ್ನು ಯಶ್ ಕೆಲವೇ ವರ್ಷಗಳನ್ನು ನನಸು ಮಾಡಿದ್ದಾರೆ. ಅದೂ ಕೂಡ ಪ್ಯಾನ್ ಇಂಡಿಯಾ ಮಟ್ಟಿಗೆ ದೊಡ್ಡದಾದ ಪಾತ್ರದಲ್ಲಿ ರಾಮಾಯಣದ ಪ್ರಮುಖ ಪಾತ್ರಧಾರಿ 'ರಾವಣ'ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಯಶ್ ಅವರು ತಮ್ಮೊಂದಿಗೆ ಒಡನಾಟವಿದ್ದ ಯಾವುದೇ ಗಣ್ಯರು ಹೇಳಿದ ಒಳ್ಳೆಯ ಮಾತನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂಬುದಕ್ಕೆ ಇದೂ ಕೂಡ ಒಂದು ಉದಾಹರಣೆಯಾಗಿದೆ. ಇನ್ನು ರಾಮಾಯಣ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶ್ರೀರಾಮನಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ರಾವಣ ಪಾತ್ರಕ್ಕೂ ನೀಡುತ್ತಿರುವುದು ಯಶ್‌ಗೆ ಸಂದ ದೊಡ್ಡ ಗೌರವವೂ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದ ‘777 ಚಾರ್ಲಿ’ ನಿರ್ದೇಶಕರಿಗೆ ಬಾಲಿವುಡ್‌ ಬಾಗಿಲು ಓಪನ್‌: ದೊಡ್ಡ ನಟರ ಜೊತೆ ಚರ್ಚೆ
ವಿಜಯಲಕ್ಷ್ಮಿ ದರ್ಶನ್‌ ಹೊಸ ಪೋಸ್ಟ್‌: 'ದೇವರಿಗೆ ಗೊತ್ತು' ಕ್ಯಾಪ್ಷನ್‌, ಹುಟ್ಟಿಕೊಂಡಿವೆ ಹಲವು ಪ್ರಶ್ನೆಗಳು!