ಅಪ್ಪು ಸಿನಿಮಾ ಸೀಕ್ರೆಟ್ ಹೇಳಿದ ಪುರಿ ಜಗನ್ನಾಥ್.. ಪುನೀತ್ ಸಿನಿಮಾ ಮಧ್ಯೆ ಶಿವಣ್ಣ ಬಂದಿದ್ದು ಹೇಗೆ?

Published : Mar 10, 2025, 02:35 PM ISTUpdated : Mar 10, 2025, 02:53 PM IST
ಅಪ್ಪು ಸಿನಿಮಾ ಸೀಕ್ರೆಟ್ ಹೇಳಿದ ಪುರಿ ಜಗನ್ನಾಥ್.. ಪುನೀತ್ ಸಿನಿಮಾ ಮಧ್ಯೆ ಶಿವಣ್ಣ ಬಂದಿದ್ದು ಹೇಗೆ?

ಸಾರಾಂಶ

ಮಾರ್ಚ್ 14 ರಂದು ನಟ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ (ಪುನೀತ್ ಹುಟ್ಟುಹಬ್ಬ ಮಾರ್ಚ್ 17) ಅವರ ಮೊಟ್ಟಮೊದಲ ಸಿನಿಮಾ 'ಅಪ್ಪು' ಬಿಡುಗಡೆ ಆಗಲಿದೆ. ಅದು ತಮಗೆ ಸಿಕ್ಕಿದ್ದು ಹೇಗೆ ಎಂಬ ಗುಟ್ಟನ್ನು ನಿರ್ದೇಶಕ ಪುರಿ ಜಗನ್ನಾಥ್.. ಆ ಸೀಕ್ರೆಟ್ ಈಗ ರಿವೀಲ್ ಆಗಿದೆ..

ತೆಲುಗು ಚಿತ್ರರಂಗದ ಫೇಮಸ್ ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh) ಸೀಕ್ರೆಟ್ ಒಂದನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಅವರು ಪುನೀತ್ ರಾಜ್‌ಕುಮಾರ್ (Puneeth Rajkumar) ಮೊಟ್ಟಮೊದಲ ನಟನೆಯ 'ಅಪ್ಪು' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅದು ಸೂಪರ್ ಹಿಟ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತಿದೆ. ಆದರೆ, ಆ ಬಳಿಕ ಅವರೇ ಕಥೆ ಮಾಡಿದ್ದ ಚಿತ್ರ 'ವೀರ ಕನ್ನಡಿಗ ಮಾತ್ರ ಪ್ಲಾಪ್ ಪಟ್ಟಿ ಸೇರಿತ್ತು. ಅದು ಇಲ್ಲಿನ ವಿಷಯವಲ್ಲ, ಅಪ್ಪು ಚಿತ್ರವನ್ನು ತೆಲುಗು ನಿರ್ದೇಶಕರು ಮಾಡಿದ್ದು ಹೇಗೆ? ತೆಲುಗಿನ ಪುರಿ ಜಗನ್ನಾಥ್ ಅವರು ಕನ್ನಡಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್ ಸ್ಟೋರಿ.. 

ಹೌದು, ತೆಲುಗಿನ ಪುರಿ ಜಗನ್ನಾಥ್ ಅವರು ಡಾ ರಾಜ್‌ಕುಮಾರ್ ಅವರ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಅವರಿಗೆ 'ಅಪ್ಪು' ಸಿನಿಮಾವನ್ನು (Appu) ನಿರ್ದೇಶಿಸಿ ಅದು ಸೂಪರ್ ಹಿಟ್ ಆಯಿತು. ಕನ್ನಡದ, ಅದರಲ್ಲೂ ಅಪ್ಪಟ ಕನ್ನಡಾಭಿಮಾನಿ ಡಾ ರಾಜ್‌ಕುಮಾರ್ ಅವರ ಬ್ಯಾನರ್‌ನಲ್ಲಿ, ಅವರ ಮಗನಿಗೆ ಕನ್ನಡ ನಿರ್ದೇಶಕರನ್ನು ಬಿಟ್ಟು ತೆಲುಗು ನಿರ್ದೇಶಕರು ಬಂದಿದ್ದು ಹೇಗೆ ಎಂದು ಆ ಕಾಲದಲ್ಲಿ ಹಲವರು ಮಾತನ್ನಾಡಿದ್ದರು. ಆದರೆ, ಅದು ನಿರ್ಮಾಪಕರ ಆಯ್ಕೆ ಎಂಬುದನ್ನು ತಿಳಿದ ಮೇಲೆ ಸುಮ್ಮನಾಗಿದ್ದರು. ಹಾಗಿದ್ದರೆ ಅದು ಆಗಿದ್ದು ಹೇಗೆ? 

ಶಂಕರ್‌ನಾಗ್ ಪರಿಚಯಿಸಿದ ಪುಟಾಣಿ ಪ್ರತಿಭೆ, ಶಿವಣ್ಣ ಜೊತೆ 'ರಣರಂಗ'ದಲ್ಲೂ ಹೋರಾಡಿದೆ..!

ಆ ಸೀಕ್ರೆಟ್ ಈಗ ರಿವೀಲ್ ಆಗಿದೆ. ಮಾರ್ಚ್ 14 ರಂದು ನಟ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ (ಪುನೀತ್ ಹುಟ್ಟುಹಬ್ಬ ಮಾರ್ಚ್ 17) ಅವರ ಮೊಟ್ಟಮೊದಲ ಸಿನಿಮಾ 'ಅಪ್ಪು' ಬಿಡುಗಡೆ ಆಗಲಿದೆ. ಈ ಸಮಯದಲ್ಲಿ ಅದು ತಮಗೆ ಸಿಕ್ಕಿದ್ದು ಹೇಗೆ ಎಂಬ ಗುಟ್ಟನ್ನು ನಿರ್ದೇಶಕ ಪುರಿ ಜಗನ್ನಾಥ್ ಅವರು ರಟ್ಟು ಮಾಡಿದ್ದಾರೆ. ಈ ಬಗ್ಗೆ ಅವರು 'ನಾನು ಶಿವಣ್ಣ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರಿಂದಲೇ ಅಪ್ಪು ಸಿನಿಮಾ ಸಾಧ್ಯವಾಗಿದ್ದು.. ಶಿವಣ್ಣ ಇಲ್ಲ ಅಂದಿದ್ದರೆ ನಾನು ಪುನೀತ್ ಸರ್ ಜೊತೆ ಸಿನಿಮಾ ಮಾಡಲು ಸಾಧ್ಯ ಆಗುತ್ತಿರಲಿಲ್ಲ.. ಎಂದಿದ್ದಾರೆ. 

ಒಟ್ಟಿನಲ್ಲಿ, ಪುನೀತ್ ಅಭಿಮಾನಿಗಳೂ ಸೇರಿದಂತೆ ಎಲ್ಲಾ ಕನ್ನಡದ ಸಿನಿಪ್ರೇಕ್ಷಕರಿಗೂ ಅಪ್ಪು ಸಿನಿಮಾ ಪುರಿ ಜಗನ್ನಾಥ್ ನಿರ್ದೇಶಿಸಲು ಕಾರಣ ಈ ಮೂಲಕ ತಿಳಿದುಬಂತು. ಇದೀಗ, ಅಪ್ಪು ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ. ಮಾರ್ಚ್ 14 ರಂದು ಹತ್ತಿರದ ಚಿತ್ರಮಂದಿರಕ್ಕೆ ಹೋಗಲು ರೆಡಿಯಾಗಿ..!

 ರಾಕಿಂಗ್ ಸ್ಟಾರ್ ಯಶ್ ಆಪ್ತಮಿತ್ರನ ಸಾವು.. ದಡ ಮುಟ್ಟುವ ಮೊದಲೇ ಮುಳಗಿಹೋದ ಅರ್ಜುನ್ ಕೃಷ್ಣ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ