ಡೇಟಿಂಗ್ ಗೀಟಿಂಗ್ ಇಲ್ಲ ನಾನು ಅಜ್ಜಿ ತರ ಯೋಚನೆ ಮಾಡ್ತೀನಿ, ಸಿಂಗಲ್ ಆಗಿದ್ದೀನಿ: ಚೈತ್ರಾ ಆಚಾರ್

Published : Mar 10, 2025, 02:07 PM ISTUpdated : Mar 10, 2025, 02:16 PM IST
ಡೇಟಿಂಗ್ ಗೀಟಿಂಗ್ ಇಲ್ಲ ನಾನು ಅಜ್ಜಿ ತರ ಯೋಚನೆ ಮಾಡ್ತೀನಿ, ಸಿಂಗಲ್ ಆಗಿದ್ದೀನಿ: ಚೈತ್ರಾ ಆಚಾರ್

ಸಾರಾಂಶ

ಚೈತ್ರಾ ಆಚಾರ್ ಟೋಬಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳಿಂದ ಯಶಸ್ಸು ಗಳಿಸಿದ್ದಾರೆ. ಸದ್ಯಕ್ಕೆ ಅವರು ಸಿಂಗಲ್ ಆಗಿದ್ದು, ತಮ್ಮ ವೃತ್ತಿ ಜೀವನದ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ. ಮಾಡರ್ನ್ ಆಗಿದ್ದರೂ ಹಳೇ ಕಾಲದ ಯೋಚನೆಗಳನ್ನು ಹೊಂದಿರುವ ಅವರು, ಡೇಟಿಂಗ್ ಆಪ್‌ಗಳ ಬಗ್ಗೆ ಆಸಕ್ತಿ ಹೊಂದಿಲ್ಲ. ಆನ್‌ಲೈನ್‌ನಲ್ಲಿ ಪರಿಚಯವಾದವರನ್ನು ಪ್ರೀತಿಸುವುದು ಕಷ್ಟ ಎನ್ನುತ್ತಾರೆ.

ಮಹಿರಾ, ಅ ದೃಶ್ಯ, ಗಿಲ್ಕಿ, ತಲೆ ದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಆಚಾರ್ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ತಂದುಕೊಟ್ಟಿದ್ದು ಟೋಬಿ ಸಿನಿಮಾ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ನಟಿ ಚೈತ್ರಾ ಇನ್ನೂ ಸಿಂಗಲ್ ಅಂದ್ರೆ ಯಾರೂ ನಂಬುವುದಿಲ್ಲ. ಯಾಕೆ ಸಿಂಗಲ್? ಯಾವ ಆಲೋಚನೆಯಲ್ಲಿ ಸಿಂಗಲ್ ಆಗಿರಬೇಕು ನಿರ್ಧರಿಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

'ಸದ್ಯ ಜೀವನದಲ್ಲಿ ನಾನು ಸಿಂಗಲ್ ಆಗಿದ್ದೀನಿ. ಸಾಕಷ್ಟು ಕ್ರಶ್ ಸ್ಟೋರಿಗಳು ಬರುತ್ತಿರುತ್ತದೆ. ಆದರೆ ಸಿಂಗಲ್ ಆಗಿರಬೇಕು ಎಂದು ನಾನು ನಿರ್ಧರಿಸಿದ್ದೀನಿ ಏಕೆಂದರೆ ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸಬೇಕು ಎಂದು. ನಾನು ನೋಡಲು ಮಾಡರ್ನ್ ಹುಡುಗಿ ಆಗಿದ್ದರೂ ಕೂಡ ಸಖತ್ ಹಳೆ ಕಾಲದ ಅಜ್ಜಿ ರೀತಿಯಲ್ಲಿ ಯೋಚನೆ ಮಾಡುತ್ತೀನಿ. ಹೀಗಾಗಿ ಡೇಟಿಂಗ್ ಆಪ್‌ಗಳ ಬಗ್ಗೆ ನನಗೆ ಅರ್ಥವೇ ಆಗುವುದಿಲ್ಲ ಅದರಲ್ಲೂ ಟಿಂಡರ್, ಬಂಬಲ್‌ ತಲೆಗೆ ಹೋಗುವುದಿಲ್ಲ. ಆನ್‌ಲೈನ್‌ನಲ್ಲಿ ವ್ಯಕ್ತಿನ ಭೇಟಿ ಮಾಡಿ ಲವ್ ಹೇಗೆ ಅವರ ಮೇಲೆ ಲವ್ ಆಗುತ್ತದೆ ಎಂದು ನನಗೆ ಅರ್ಥ ಆಗುವುದಿಲ್ಲ. ನಾನು ವ್ಯಕ್ತಿ ವ್ಯಕ್ತಿ ಭೇಟಿ ಮಾಡಿದಾಗ ಮಾತನಾಡಿ ಇಷ್ಟ ಪಡುವ ವ್ಯಕ್ತಿ. ನನಗೆ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಮದುವೆ ಬಗ್ಗೆ ಪ್ರಶ್ನೆಗಳು ಬರುತ್ತದೆ ಆದರೆ ತಮಾಷೆಯಗಿ ಓದಲು ಅಷ್ಟೇ ಚಂದ. ವೈಯಕ್ತಿಕವಾಗಿ ಮೆಸೇಜ್ ಮಾಡಿದಾಗ ಚೆನ್ನಾಗಿ ಮೆಸೇಜ್ ಮಾಡ್ತಾರೆ ಆದರೆ ಕಾಮೆಂಟ್ ಮಾಡಿದಾಗ ನೆನೆಗಟಿವ್ ಹಾಕ್ತಾರೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಚೈತ್ರಾ ಮಾತನಾಡಿದ್ದಾರೆ.

ಈ ಕಾರಣಕ್ಕೆ 16ನೇ ವಯಸ್ಸಿಗೆ ಮನೆ ಬಿಟ್ಟು ಓಡಿ ಹೋದ ಸಂಯುಕ್ತ ಹೆಗ್ಡೆ; ಕಾರಣ ಕೇಳಿ ಬೆಚ್ಚಿಬಿದ್ದ ಕಿರಿಕ್ ಅಭಿಮಾನಿಗಳು!

ಟ್ರೋಲ್‌ಗೆ ಉತ್ತರ: 

ಟ್ರೋಲ್ ಮಾಡುವವರು ಯಾವತ್ತೂ ಫೇಮಸ್ ಆಗಲ್ಲ ಟ್ರೋಲ್ ಆಗುವವರು ಬೇಗ ಫೇಮಸ್ ಆಗುತ್ತಾರೆ. ನೀನು ಎಲ್ಲೋ 5 ಸಾವಿರ-20 ಸಾವಿರ ರೂಪಾಯಿ ಸಂಬಳ ತೆಗೆದುಕೊಂಡು ಬೇರೆ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡ್ಕೊಂಡು ನೀವು ಎಷ್ಟು ಫೇಮಸ್ ಮಾಡ್ತಿದ್ದೀರಾ ಗೊತ್ತಾ?ಇಲ್ಲಿ ಯೋಚನೆ ಮಾಡಿ ಫ್ರೀ ಪ್ರಚಾರ ಪಡೆದುಕೊಂಡು ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ. ಯಾರೋ ಕಾಮೆಂಟ್ ಮಾಡಿರುವುದಕ್ಕೆ ನಾನು ಪ್ರತಿಕ್ರಿಯೆ ಕೊಟ್ಟುಬಿಟ್ಟರೆ ಅವನಿಗೆ ಫ್ರೀ ಪಬ್ಲಿಸಿಟಿ ಸಿಗುತ್ತದೆ.ನನ್ನ ಫೋಟೋ ಬಂದು ಕಾಮೆಂಟ್ ಮಾಡುವವರು ಏನೋ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ಅಂತ ಮಾತನಾಡುತ್ತಿದ್ದಾರೆ ಅವರು ಮಾತು ಕೇಳೋಣ ಅಂತ ಪ್ರೊಪೈಲ್ ನೋಡಿಬಿಟ್ಟರೆ ಅಷ್ಟೇ. ಜನರು ಬಂದು ಕಾಮೆಂಟ್ ಮಾಡುವುದು ಒಂದು ಟ್ರೋಲ್ ಮಾಡುವ ರೀತಿ ಒಂದು.ಫೋಟೋ ಇನ್‌ಸೈಟ್ ನೋಡಿದರೆ ಅವರು ಮಾಡಿರುವ ಕೆಲಸ ಗಮನಕ್ಕೆ ಬರುತ್ತದೆ. ನಾನು ಆ ಫೋಟೋ ಹಾಕಿದಾಗ ಕೇವಲ 12 ಸಾವಿರ ಫಾಲೋವರ್ಸ್ ಇದ್ರು ಆದರೆ 3 ಮಿಲಿಯನ್ ಜನರು ಅಕೌಂಟ್ ಹುಡುಗಿ ಆ ಫೋಟೋ ನೋಡಿದ್ದಾರೆ.ಅಷ್ಟೇ ಅಲ್ಲ ಎದೆ ಕಾಣಿಸುವಂತೆ ಹಾಕಿದ್ದ ಫೋಟೋವನ್ನು ಸುಮಾರು 8 ಸಾವಿರ ಜನರು ಸೇವ್ ಮಾಡುಕೊಂಡಿದ್ದಾರೆ. ಯಾಕೆ ನೀವು ಒಳ್ಳೆಯವರು ಸೇವ್ ಮಾಡಿಕೊಳ್ಳಬಾರದು ಅಲ್ವಾ? ಇಂತಹ ಜನರು ಫೋಟೋ ಸೇವ್ ಮಾಡಿಕೊಂಡು ಫಾಲೋ ಮಾಡುತ್ತಿಲ್ಲ ಅಂದ್ರೆ ಅವರ ಉದ್ದೇಶ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದಿದ್ದಾರೆ ಚೈತ್ರಾ. 

ಯಾಕೆ ಸಪ್ತಮಿ ಅಂತ ಹೆಸರಿಟ್ಟರು? 7ರ ಹಿಂದೆ ಇರುವ ಸೀಕ್ರೆಟ್‌ ರಟ್ಟು ಮಾಡಿದ ಕಾಂತಾರ ಸುಂದರಿ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?