ನಿರ್ದೇಶಕ ಮಹೇಶ್‌ ಕುಮಾರ್‌ಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ನಿರ್ಮಾಪಕ ಉಮಾಪತಿ!

By Suvarna News  |  First Published Mar 25, 2021, 4:27 PM IST

ಯಶಸ್ಸಿನ ಉತ್ತುಂಗದಲ್ಲಿರುವ ನಿರ್ಮಾಪಕ ಉಮಾಪತಿ ತಮ್ಮ ಎರಡನೇ ಚಿತ್ರದ ನಿರ್ದೇಶಕರಿಗೆ ಕಾರು ಉಡುಗೊರೆಯಾಗಿ ನೀಡಿದ್ದಾರೆ.


ಸ್ಯಾಂಡಲ್‌ವುಡ್‌ ರೋರಿಂಗ್ ಸ್ಟಾರ್ ಶ್ರೀ ಮುರಳಿ ಬಹು ನಿರೀಕ್ಷಿತ ಚಿತ್ರ 'ಮದಗಜ'. ಚಿತ್ರದ ನಿರ್ದೇಶಕ ಮಹೇಶ್ ಕುಮಾರ್‌ ಸಿನಿಮಾವನ್ನು ಆದಷ್ಟು ರಿಚ್‌ ಆಗಿ ತೋರಿಸಬೇಕೆಂದು ಎಲ್ಲಾ ರೀತಿಯ ಶ್ರಮ ವಹಿಸುತ್ತಿದ್ದಾರೆ. ಮಹೇಶ್‌ಗೆ ಸಾಥ್‌ ಕೊಟ್ಟ ನಿರ್ಮಾಪಕ ಉಮಾಪತಿ ಇಂದು ಒಂದು ಬಿಗ್ ಸರ್ಪ್ರೈಸ್‌ ತಂದು ಎದುರಿಗಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಮಹೇಶ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಪಾಳಕ್ಕೆ ಹೊಡಿಬೇಕು, ಪೈರಸಿ ಮಾಡಿದ್ರೆ ಜೀವನವೆಲ್ಲಾ ಕೋರ್ಟ್‌ನಲ್ಲಿ ಕಳೆಯಬೇಕು: ಉಮಾಪತಿ 

Tap to resize

Latest Videos

'ನನಗೆ ಉಮಾಪತಿ ಅವರಿಂದ ಸಿಕ್ಕ ಸರ್ಪ್ರೈಸ್‌ ಕಾರು,' ಎಂದು ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಟಾಪ್‌ ಎಂಡ್‌ ಹುಂಡೈ ವೆನ್ಯೂ ಕಾರನ್ನು ಉಮಾಪತಿಯವರು ನೀಡಿದ್ದಾರೆ. ಸುಮಾರು 12-14 ಲಕ್ಷ ರೂ. ಬೆಲೆ ಕಾರು ಇದಾಗಿದ್ದು, ಸನ್‌ ರೂಫ್‌ ಸಹ ಹೊಂದಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಇಬ್ಬರೂ ಕಾರು ಪಕ್ಕ ನಿಂತು ಫೋಟೋಗೆ ಪೋಸ್‌ ನೀಡಿದ್ದಾರೆ.

SUV ಮಾರಾಟದಲ್ಲಿ ಬ್ರೆಜಾ, ನೆಕ್ಸಾನ್ ಹಿಂದಿಕ್ಕಿದ ವೆನ್ಯೂ; ಮೊದಲ ಸ್ಥಾನಕ್ಕೆ ಹ್ಯುಂಡೈ! 

'ರಾಬರ್ಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕನಾಗಿ ಕಾಲಿಟ್ಟ ಉಮಾಪತಿ ಅವರ ಎರಡನೇ ಸಿನಿಮಾ 'ಮದಗಜ' ಚಿತ್ರೀಕರಣ ನಡೆಯುತ್ತಿದೆ.  ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರಮುಖ ವಿಲನ್ ಪಾತ್ರದಲ್ಲಿ ಜಗಪತಿ ಬಾಬು ಅಭಿನಯಿಸಿದ್ದಾರೆ.  

ರಾಬರ್ಟ್‌ ಮೊದಲನೇ ವಾರವೇ 75 ಕೋಟಿ ಕಲೆಕ್ಷನ್ ಮಾಡಿತ್ತು. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಾಬರ್ಟ್‌ ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ.

 

click me!