
ಇಡೀ ಭಾರತೀಯ ಚಿತ್ರರಂಗವೇ ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಿಸಲು ಕಾತುರದಿಂದ ಕಾಯುತ್ತಿದೆ. ಚಿತ್ರದ ಎಲ್ಲಾ ಕೆಲಸಗಳು ಸರಾಗವಾಗಿ ಸಾಗುತ್ತಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ನಟ ಯಶ್ ಡಬ್ಬಿಂಗ್ ಶುರು ಮಾಡಿದ್ದಾರೆ, ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಟ್ಟೀಟ್ ಮಾಡಿದ್ದಾರೆ.
ಕೆಜಿಎಫ್ ಚಿತ್ರತಂಡದ ಗೆಟ್ ಟುಗೆದರ್ ಹೀಗಿತ್ತು..!
'ರಾಕಿ ಜೊತೆ ಡಬ್ಬಿಂಗ್ ಸಖತ್ ರಾಕಿಂಗ್ ಆಗಿರುತ್ತದೆ,' ಎಂಬುದಾಗಿ ಪ್ರಶಾಂತ್ ಟ್ಟೀಟ್ ಮಾಡಿದ್ದಾರೆ. ಫೋಟೋದಲ್ಲಿ ಯಶ್ ಮತ್ತು ಪ್ರಶಾಂತ್ ರಾಮ ಲಕ್ಷಣರಂತೆ ತಬ್ಬಿಕೊಂಡಿದ್ದಾರೆ. ಅಂದಹಾಗೆ ಯಶ್ ಕನ್ನಡಕ್ಕೆ ಮಾತ್ರ ಡಬ್ ಮಾಡುತ್ತಾರಾ ಅಥವಾ ಬೇರೆ ಭಾಷೆಗೂ ಅವರೇ ಡಬ್ ಮಾಡುತ್ತಾರಾ ಎನ್ನುವುದಕ್ಕೆ ಸದ್ಯ ಉತ್ತರವಿಲ್ಲ.
ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ಯಶ್ ಹಾಗೂ ಪ್ರಶಾಂತ್ ನೀಲ್ ಡಬ್ಬಿಂಗ್ ಮಾಡುತ್ತಿದ್ದಾರೆ. ಯಶ್ ಡಬ್ಬಿಂಗ್ ವಿಚಾರದಲ್ಲಿ ನೀವು ಗಮನಿಸಲೇ ಬೇಕಾದ ಅಂಶವೊಂದಿದೆ. ರಾಕಿಂಗ್ ಸ್ಟಾರ್ ನಟ ಡಾ.ರಾಜ್‌ಕುಮಾರ್ ಅವರನ್ನು ಅನುಕರಿಸುತ್ತಿದ್ದಾರೆ. ನಟ ಯಶ್ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆ ತನಕ ಮಾತ್ರ ಡಬ್ಬಿಂಗ್ ಮಾಡುತ್ತಾರೆ.
ಅಪ್ಪನ ನಗಿಸ್ತಿದ್ದಾನೆ ಯಶ್ ಮಗ: ವಿಡಿಯೋ ವೈರಲ್
ಯಶ್ ಡಬ್ಬಿಂಗ್ ವಿಚಾರದಲ್ಲಿ ಅಣ್ಣಾವ್ರ ಅನುಕರಣೆ ಏಕೆ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಸಾಮಾನ್ಯ. ಆದರೆ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಚಾರವೂ ಹೌದು. ಬೆಳಗ್ಗಿನ ಸಮಯದಲ್ಲಿ ಧ್ವನಿ ಫ್ರೆಶ್ ಇರುತ್ತದೆ, ಬೆಳಗ್ಗಿನ ವಾತಾವರಣಕ್ಕೆ ಅದ್ಭುತವಾಗಿ ಬೆಸ್ಟ್ ವಾಯ್ಸ್ ಕ್ರಿಯೇಟ್ ಮಾಡಬಹುದು ಎಂಬ ಕಾರಣಕ್ಕೆ ಎನ್ನಲಾಗಿದೆ. ಹೀಗಾಗಿ ಯಶ್ ಬೆಳಗ್ಗೆ ಮಾತ್ರ ಡಬ್ಬಿಂಗ್ ಮಾಡುತ್ತಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.