ಸಂದೇಶ್ ನಾಗರಾಜ್ ನಿರ್ಮಾಣದ ಪ್ಯಾನ್ ಇಂಡಿಯಾ ಚಿತ್ರಕ್ಕೆ Prabhu Deva ಹಿರೋ!

Suvarna News   | Asianet News
Published : Feb 07, 2022, 12:56 PM IST
ಸಂದೇಶ್ ನಾಗರಾಜ್ ನಿರ್ಮಾಣದ ಪ್ಯಾನ್ ಇಂಡಿಯಾ ಚಿತ್ರಕ್ಕೆ Prabhu Deva ಹಿರೋ!

ಸಾರಾಂಶ

ನಟ ಪ್ರಭುದೇವ ಸ್ಯಾಂಡಲ್​ವುಡ್‌​ಗೆ ನಾಯಕನಟನಾಗಿ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ಅದು ದೊಡ್ಡ ಬ್ಯಾನರ್​​ನ ಅಡಿಯಲ್ಲಿ ಸಿನಿಮಾ ಸಿದ್ಧವಾಗಲಿದೆ. ವಿಶೇಷವಾಗಿ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಚಿತ್ರ ತಯಾರಾಗಲಿದೆಯಂತೆ.

ಖ್ಯಾತ ಬಹುಭಾಷಾ ನಟ ಹಾಗೂ ತಮ್ಮ ಅಮೋಘ ನೃತ್ಯದ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರಭುದೇವ (Prabhu Deva) ಅವರಿಗೆ ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇದೆ. ತಮ್ಮ ಡ್ಯಾನ್ಸ್​​ನಿಂದಾಗಿಯೇ (Dance) ದೇಶಾದ್ಯಂತ ಅಭಿಮಾನಿಗಳನ್ನು (Fans) ಹೊಂದಿರುವ ಪ್ರಭುದೇವ ಅವರು ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೌದು! ಪ್ರಭುದೇವ ಸ್ಯಾಂಡಲ್​ವುಡ್‌​ಗೆ (Sandalwood) ನಾಯಕನಟನಾಗಿ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ಅದು ದೊಡ್ಡ ಬ್ಯಾನರ್​​ನ ಅಡಿಯಲ್ಲಿ ಸಿನಿಮಾ ಸಿದ್ಧವಾಗಲಿದೆ. ವಿಶೇಷವಾಗಿ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಚಿತ್ರ ತಯಾರಾಗಲಿದೆಯಂತೆ.

ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿ, ಅಪಾರ ಅನುಭವವಿರುವ ಹೆಸರಾಂತ ನಿರ್ಮಾಪಕ ಸಂದೇಶ್ ಪ್ರೊಡಕ್ಷನ್ಸ್ (Sandesh Productions) ಸಂಸ್ಥೆಯಲ್ಲಿ ರೆಡಿಯಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ (Sandesh Nagaraj) ಅವರು ಇಲ್ಲಿವರೆಗೂ ನಿರ್ಮಾಣ ಮಾಡಿರುವ ಸಿನಿಮಾಗಳು ಸಕ್ಸಸ್​ ಕಂಡಿವೆ. ಇದೀಗ ಈ ಸಂಸ್ಥೆಯ ಮೂಲಕ ಪ್ಯಾನ್ ಇಂಡಿಯಾ (Pan India) ಚಿತ್ರ ತಯಾರಾಗುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ.

ಪುನೀತ್ ರಾಜ್‌ಕುಮಾರ್, ಅಶ್ವಿನಿ ಅವರ ಜೊತೆ ಕಾಣಿಸಿಕೊಂಡ ಪ್ರಭುದೇವ!

ಈ ಸಿನಿಮಾದಲ್ಲಿ ಪ್ರಭುದೇವ ಅವರು ನಾಯಕನಾಗಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೇರೆ ಯಾವೆಲ್ಲ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ, ನಿರ್ದೇಶನ ಮಾಡುವವರು ಯಾರು, ಪ್ರಭುದೇವ ಅವರಿಗೆ ನಾಯಕಿ ಯಾರು, ಸಿನಿಮಾದ ಟೈಟಲ್ ಏನು ಇಂತಹ ಹಲವು ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಹಂಚಿಕೊಳ್ಳುವುದಾಗಿ ನಿರ್ಮಾಪಕ ಸಂದೇಶ್​ ನಾಗರಾಜ್​ ತಿಳಿಸಿದ್ದಾರೆ. ಪ್ರಭುದೇವ ಉಪೇಂದ್ರ (Upendra) ಅಭಿನಯದ H2o ಸಿನಿಮಾದಲ್ಲಿ ನಟಿಸಿದ್ದು, ಇತ್ತೀಚೆಗೆ ಡಾರ್ಲಿಂಗ್​ ಕೃಷ್ಣ (Darling Krishna) ಅಭಿನಯದ 'ಲಕ್ಕಿ ಮ್ಯಾನ್' (Lucky Man) ಸಿನಿಮಾದಲ್ಲಿ ಪವರ್​ಸ್ಟಾರ್​​ ಪುನೀತ್​ ರಾಜ್​ಕುಮಾರ್​(Puneeth Rajkumar) ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರವು ಇನ್ನೂ ತೆರೆಕಂಡಿಲ್ಲ.



ಇತ್ತೀಚೆಗಷ್ಟೇ ನಿರ್ಮಾಪಕ ಸಂದೇಶ್​ ನಾಗರಾಜ್​ ಅವರು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್‌ (Shivarajkumar) ಜೊತೆ ಹೊಸ ಸಿನಿಮಾ ಘೋಷಿಸಿದ್ದರು. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಸಮರ' ಹಾಗೂ 'ಆರ್ಯನ್' ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಚಿ. ಗುರುದತ್ (Chi Gurudutt) ಇನ್ನೂ ಹೆಸರಿಡದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಕಥಾಹಂದರದ ಚಿತ್ರದ ಬಗ್ಗೆ ಶಿವರಾಜ್ ಕುಮಾರ್ ಒಪ್ಪಿಕೊಂಡಿದ್ದರು.

James Teaser: ಫೆ.11ಕ್ಕೆ ಬಿಡುಗಡೆಯಾಗಲಿದೆ ಪುನೀತ್ ಕೊನೆ ಚಿತ್ರದ ಟೀಸರ್!

ಚಿ ಗುರುದತ್​ ಮತ್ತು ಶಿವರಾಜ್​ಕುಮಾರ್​ ಅವರ ನಡುವೆ ಉತ್ತಮ ಗೆಳೆತನ ಇದೆ. ಇಬ್ಬರೂ ಬಾಲ್ಯದ ಗೆಳೆಯರು. 'ಆನಂದ್​' (Anand) ಸಿನಿಮಾ ಕಾಲದಿಂದಲೂ ಅವರಿಬ್ಬರ ಸಿನಿಮಾ ಜರ್ನಿ ಮುಂದುವರಿದುಕೊಂಡು ಬಂದಿದೆ. ಹೀಗಾಗಿ ಇವರ ಕಾಂಬಿನೇಶನ್‌ ಸಿನಿಮಾ ಎಂಬುದರ ಮೇಲೆ ಕೊಂಚ ನಿರೀಕ್ಷೆ ಹಾಗೂ ಕುತೂಹಲ ಇದ್ದೇ ಇರುತ್ತದೆ. ಶಿವಣ್ಣ ಮಾತ್ರವಲ್ಲದೇ ಈ ಚಿತ್ರದಲ್ಲಿ ಯಾರೆಲ್ಲ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಇರುತ್ತೆ ಹಾಗೂ ಚಿತ್ರದ ಟೈಟಲ್ ಏನು ಅನ್ನೋದನ್ನ ಚಿತ್ರತಂಡ ಸದ್ಯದಲೇ ಅನೌನ್ಸ್ ಮಾಡಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!