
ನಾಯಕನ ಪರಿಚಯ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಮಾನಸ ಹೊಳ್ಳ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಚಂದನವನಕೆ ಬಂದ’ ಎಂಬ ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ರಚನೆ ಮಾಡಿದ್ದಾರೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶ್ರೀನಿವಾಸ ಶಿಡ್ಲಘಟ್ಟ.
‘ನನ್ನ ಮಗ ಅಭಯ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ. ಎರಡು ವರ್ಷಗಳ ನಂತರ ಚಿತ್ರರಂಗಕ್ಕೆ ಬರಲಿ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟಮಾಡಿಕೊಂಡಿದ್ದ ಕತೆ ಕೇಳಿ ನನ್ನ ಮಗನೇ ಈ ಕತೆಗೆ ಸೂಕ್ತ ಎನಿಸಿತು. ಹೀಗಾಗಿ ‘ಮನಸಾಗಿದೆ’ ಚಿತ್ರದ ಮೂಲಕ ಅಭಯ್ ಹೀರೋ ಆಗಿ ನಿಮ್ಮ ಮುಂದೆ ಬರುತ್ತಿದ್ದಾನೆ. ಆತನನ್ನು ಬೆಂಬಲಿಸಿ’ ಎಂಬುದು ನಿರ್ಮಾಪಕರ ಮನವಿ. ಏಪ್ರಿಲ… 15ರಿಂದ 3 ಹಂತದಲ್ಲಿ ಬೆಂಗಳೂರು, ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ.
ಜನ ಸಿನಿಮಾ ನೋಡೋಕೆ ಬರ್ತಿಲ್ಲ, ಏನ್ ಮಾಡೋದು?; ಒಂದು ಗಂಟೆಯ ಕತೆಯ ನಿರ್ದೇಶಕರ ಕತೆ ಕೇಳಿ!
ಚಿತ್ರದಲ್ಲಿ ಮೇಘಶ್ರೀ ಹಾಗೂ ಅಧಿರಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ . ‘ಸಾಕಷ್ಟುಪ್ರೇಮಕತೆಗಳು ತೆರೆಮೇಲೆ ಬಂದಿವೆ. ಆದರೆ, ಈ ಚಿತ್ರದ ಮೂಲಕ ಹೇಳ ಹೊರಟಿರುವ ಪ್ರೇಮ ಕತೆ ಬರೆಯದ್ದೇ ಆಗಿದೆ. ಪ್ರೀತಿ ವರ್ಸಸ್ ಮಾನವೀಯತೆ ಈ ಚಿತ್ರದ ಪ್ರಧಾನ ಅಂಶಗಳು’ ಎಂದರು ನಿರ್ದೇಶಕರು. ಸಾಹಸ ಸಂಯೋಜನೆ ಥ್ರಿಲ್ಲರ್ ಮಂಜು ಅವರದ್ದು. ‘ಚಿತ್ರದ ಹೆಸರು ಕೇಳಿಯೇ ನಾನು ಮೆಚ್ಚಿಕೊಂಡಿದ್ದೆ. ಚಿತ್ರದಲ್ಲಿ ಮೂರು ಮುಖ್ಯ ಆ್ಯಕ್ಷನ್‌ಗಳಿವೆ. ಅಭಯ್ ಪ್ರತಿಭಾವಂತ ನಟರಾಗುತ್ತಾರೆಂಬ ನಂಬಿಕೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು ಥ್ರಿಲ್ಲರ್ ಮಂಜು ಅವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.