ಅಪ್ಪಟ ಬಳ್ಳಾರಿ ಫ್ಲೇವರಿನ 'ಅಮರ ಪ್ರೇಮಿ ಅರುಣ್‌'; ತರುಣ ಪ್ರವೀಣ್‌ ಕುಮಾರ್‌ ಮೊದಲ ಸಿನಿಮಾ!

Kannadaprabha News   | Asianet News
Published : Apr 03, 2021, 09:23 AM IST
ಅಪ್ಪಟ ಬಳ್ಳಾರಿ ಫ್ಲೇವರಿನ 'ಅಮರ ಪ್ರೇಮಿ ಅರುಣ್‌'; ತರುಣ ಪ್ರವೀಣ್‌ ಕುಮಾರ್‌ ಮೊದಲ ಸಿನಿಮಾ!

ಸಾರಾಂಶ

ಒಂದು ಊರನ್ನೂ ಪಾತ್ರವಾಗಿಸುವ ಸಿನಿಮಾಗಳು ತಯಾರಾಗುವುದು ತುಂಬಾ ಅಪರೂಪ. ಅಂಥಾ ಅಪರೂಪದ ಸಿನಿಮಾಗೆ ಶುಕ್ರವಾರ ಮುಹೂರ್ತ ಆಗಿದೆ. ಬಳ್ಳಾರಿಯಲ್ಲಿ ನಡೆಯುವ, ಬಳ್ಳಾರಿಯನ್ನು ಒಂದು ಪಾತ್ರವಾಗಿಸಿರುವ ಆ ಸಿನಿಮಾದ ಹೆಸರು ‘ಅಮರ ಪ್ರೇಮಿ ಅರುಣ್‌’. 

ಘಟಾನುಘಟಿ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇರುವ ಕತೆಗಾರ ಪ್ರವೀಣ್‌ ಕುಮಾರ್‌ ನಿರ್ದೇಶನದ ಸಿನಿಮಾ ಇದು.

ಒಲವು ಸಿನಿಮಾ ತಂಡ ನಿರ್ಮಿಸಿರುವ ಈ ಚಿತ್ರದ ಟೈಟಲ್‌ ಘೋಷಣೆ ಆಗಿರಲಿಲ್ಲ. ಚಿತ್ರರಂಗದ ಗಣ್ಯರಾದ ಗಿರೀಶ್‌ ಕಾಸರವಳ್ಳಿ, ಬಿ ಸುರೇಶ್‌, ಯೋಗರಾಜ್‌ ಭಟ್‌, ಎಂಕೆ ಸುಬ್ರಹ್ಮಣ್ಯ, ಅಭಯ್‌ ಸಿಂಹ, ಮಹೇಶ್‌ ರಾವ್‌ ಸೇರಿದಂತೆ ಆರು ಮಂದಿ ಟೈಟಲ್‌ ಲಾಂಚ್‌ ಮಾಡಿದರು. ಈ ಆರು ಮಂದಿ ಜೊತೆಯೂ ನಿರ್ದೇಶಕ ಪ್ರವೀಣ್‌ ಕುಮಾರ್‌ ಕೆಲಸ ಮಾಡಿದ್ದಾರೆ. ಹಾಗಾಗಿ ಇದೊಂಥರಾ ಗುರು ವಂದನಾ ಕಾರ್ಯಕ್ರಮದಂತೆಯೂ ಇದೆ ಎಂದು ಯೋಗರಾಜ್‌ ಭಟ್‌ ತಮಾಷೆ ಮಾಡಿದರು.

'ಕ್ರಿಟಿಕಲ್‌ ಕೀರ್ತನೆಗಳು' ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ! 

ಹರಿಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ, ಮಹೇಶ್‌ ಬಂಗ್‌, ಭೂಮಿಕಾ ರಘು, ಡಾ. ಮನೋನ್ಮಣಿ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಎಲ್ಲರೂ ಈಗ ಬಳ್ಳಾರಿ ಭಾಷೆ ಕಲಿಯುತ್ತಿದ್ದಾರೆ. ಈ ಸಿನಿಮಾದ ಪ್ರತೀ ಫ್ರೇಮಿನಲ್ಲೂ ಪ್ರತೀ ಸೌಂಡಿನಲ್ಲೂ ಬಳ್ಳಾರಿ ಕಾಣಿಸಬೇಕು ಎಂದು ಸಂಗೀತ ನಿರ್ದೇಶಕ ಕಿರಣ್‌ ರವೀಂದ್ರನಾಥ್‌, ಛಾಯಾಗ್ರಾಹಕ ಪ್ರವೀಣ್‌ ಯೋಜನೆ ರೂಪಿಸುತ್ತಿದ್ದಾರೆ.

ಹಿರಿಯ ನಿರ್ದೇಶಕರು ಆಶೀರ್ವದಿಸಿದ್ದಾರೆ. ಹೊಸ ಹುಡುಗರ ತಂಡ ಹುರುಪಿನಿಂದ ಕೆಲಸ ಆರಂಭಿಸಿದೆ. ಬಳ್ಳಾರಿ ಫ್ಲೇವರಿನ ಸಿನಿಮಾ ಪ್ರೀತಿಯಿಂದ ತಯಾರಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep