Priyanka Upendra: ಮಿಸ್‌ ನಂದಿನಿ ಚಿತ್ರದ ಟ್ರೇಲರ್‌ ಬಿಡುಗಡೆ

By Govindaraj SFirst Published Aug 5, 2022, 12:21 PM IST
Highlights

ಪ್ರಿಯಾಂಕ ಉಪೇಂದ್ರ ನಟನೆಯ ‘ಮಿಸ್‌ ನಂದಿನಿ’ ಚಿತ್ರದ ಟ್ರೇಲರ್‌ ಅನ್ನು ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಬಿಡುಗಡೆ ಮಾಡಿದರು. ‘ಒಳ್ಳೆಯ ಸಾಮಾಜಿಕ ಸಂದೇಶವನ್ನು ಹೊತ್ತು ತಂದಿರುವ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದು, ಇಂಥ ಮತ್ತಷ್ಟು ಒಳ್ಳೆಯ ಚಿತ್ರಗಳು ಬರಲಿ’ ಎಂದು ಶಾಸಕರು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪ್ರಿಯಾಂಕ ಉಪೇಂದ್ರ ನಟನೆಯ ‘ಮಿಸ್‌ ನಂದಿನಿ’ ಚಿತ್ರದ ಟ್ರೇಲರ್‌ ಅನ್ನು ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಬಿಡುಗಡೆ ಮಾಡಿದರು. ‘ಒಳ್ಳೆಯ ಸಾಮಾಜಿಕ ಸಂದೇಶವನ್ನು ಹೊತ್ತು ತಂದಿರುವ ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದು, ಇಂಥ ಮತ್ತಷ್ಟು ಒಳ್ಳೆಯ ಚಿತ್ರಗಳು ಬರಲಿ’ ಎಂದು ಶಾಸಕರು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಗುರುದತ್ತ ಎಸ್‌ ಆರ್‌ ನಿರ್ದೇಶನ ಮಾಡಿರುವ ಈ ಚಿತ್ರವನ್ನು ನೀಲಕಂಠ ಸ್ವಾಮಿ ಕೆ ಪಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಸರ್ಕಾರಿ ಶಾಲೆಯ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ. ‘ಸಾಮಾಜಿಕ ಸಂದೇಶವನ್ನು ದೊಡ್ಡ ಮಟ್ಟದಲ್ಲಿ ಹೇಳಿರುವ ಸಿನಿಮಾ ಇದು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಕನ್ನಡ ಭಾಷೆಯನ್ನು ಎಲ್ಲರೂ ಕಲಿಯಬೇಕು. ಸರ್ಕಾರಿ ಶಾಲೆಯ ಮಹತ್ವ ಏನು ಎಂಬುದನ್ನು ತಿಳಿಸುವ ಸಿನಿಮಾ ಇದು. ಹೀಗಾಗಿ ಎಲ್ಲರು ನೋಡಬಹುದಾದ ಒಳ್ಳೆಯ ಕತೆ ಚಿತ್ರದಲ್ಲಿದೆ’ ಎಂಬುದು ನಿರ್ದೇಶಕ ಗುರುದತ್ತ ಎಸ್‌ ಆರ್‌ ಮಾತುಗಳು.

ದುರ್ಗಾ ಹೋಮ, ಲಲಿತಾ ಸಹಸ್ರನಾಮ ಪೂಜೆ ಮಾಡಿಸಿದ ಪ್ರಿಯಾಂಕಾ ಉಪೇಂದ್ರ!

ಸಾಯಿ ಸರ್ವೇಶ್‌ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಾಹಣ ಮಾಡಿದ್ದಾರೆ. ‘ಸರ್ಕಾರಿ ಶಾಲೆಯ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ತುಂಬಾ ಮಹತ್ವ ಎನಿಸುವ ಪಾತ್ರ ಮತ್ತು ಸಿನಿಮಾ. ಕನ್ನಡ ಭಾಷೆಯ ಸಂಭಾಷಣೆಗಳು ಎಲ್ಲೂ ತಪ್ಪಾಗದಂತೆ ಎಚ್ಚರ ವಹಿಸುತ್ತಲೇ ನನ್ನ ಪಾತ್ರ ನಿಭಾಯಿಸಿದ್ದೇನೆ’ ಎಂದರು ಪ್ರಿಯಾಂಕ ಉಪೇಂದ್ರ. ಚಿತ್ರದ ನಿರ್ಮಾಪಕರು ಹಾಗೂ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿರುವ ಪತ್ರಕರ್ತ ಯತಿರಾಜ್‌ ಚಿತ್ರದ ಕುರಿತು ಹೇಳಿಕೊಂಡರು.

ಇಂದಿನ ಸರ್ಕಾರಿ ಶಾಲೆಯ ಸ್ಥಿತಿಗತಿ ಹಾಗೂ ಅಭಿವೃದ್ಧಿ ಕುರಿತಂತೆ ಸಿನಿಮಾ ಮಾಡಿದ್ದಾರೆ. ಹಳ್ಳಿಯಲ್ಲಿ ಒಂದು ಖಾಸಗಿ ಶಾಲೆ ತೆರೆದರೆ, ಅದು ಹತ್ತು ಸರ್ಕಾರಿ ಶಾಲೆಯನ್ನು ಕಬಳಿಸುತ್ತದೆ. ಹಿಂದುಳಿದ, ದಲಿತ ವರ್ಗ ಇರುವ ಕಡೆ ಶಾಲೆಗಳು ಕುಂಠಿತವಾಗಿದೆ. ಶಿಕ್ಷಣ ಇಲಾಖೆ ಒಬ್ಬ ವಿದ್ಯಾರ್ಥಿಗೆ 4 ಸಾವಿರ ಖರ್ಚು ಮಾಡುತ್ತಿದೆ. ಎಲ್ಲವನ್ನು ಸರ್ಕಾರವೇ ನೋಡಿಕೊಳ್ಳಬೇಕು ಅಂದರೆ ಕಷ್ಟ. ಅಂತಹ ಪರಿಕಲ್ಪನೆಯನ್ನು ನಾವು ಮೊದಲು ಬಿಡಬೇಕು ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು.

ನಟಿಯರ ದೇಹದ ಬಗ್ಗೆ ಟೀಕಿಸಬೇಡಿ: ಪ್ರಿಯಾಂಕಾ ಉಪೇಂದ್ರ

ಶ್ರೀವಿಜಯ್ ಫಿಲಂಸ್ ಮೂಲಕ ನೀಲಕಂಠಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಶಾ ಸಹ ನಿರ್ಮಾಪಕರು.ಕಾರವಾರ, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು. ನಿರ್ದೇಶಕ ಗುರುದತ್ ಎಸ್.ಆರ್.ಮುಖ್ಯಮಂತ್ರಿಯಾಗಿ ಸಿದ್ಲಿಂಗು ಶ್ರೀಧರ್, ಶಿಕ್ಷಕರಾಗಿ ಅಪ್ಪಣ್ಣ, ರಘುಪಾಂಡೇಶ್ವರ್, ಅಧಿಕಾರಿಯಾಗಿ ಯತಿರಾಜ್, ಶಾಸಕನಾಗಿ ಡ್ಯಾನಿಕುಟ್ಟಪ್ಪ, ವಕೀಲೆಯಾಗಿ ಲಕ್ಷ್ಮೀ ಸಿದ್ದಯ್ಯ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಾಯಿಸರ್ವೇಶ್ ನೀಡಿದ್ದಾರೆ.
 

click me!