
ನಟ ಉಪೇಂದ್ರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ‘ಈ ಚಿತ್ರದ ಪೋಸ್ಟರ್ ಹಾಗೂ ದೃಶ್ಯಗಳನ್ನು ನೋಡುತ್ತಿದ್ದರೆ ನನಗೆ ಮಾಲಾಶ್ರೀ ನೆನಪಾಗುತ್ತಾರೆ. ಪ್ರಿಯಾಂಕ ಪೊಲೀಸ್ ಗೆಟಪ್‌ನಲ್ಲಿ ಪವರ್‌ಫುಲ್ಲಾಗಿ ಕಾಣುತ್ತಿದ್ದಾರೆ. ಮಹಿಳಾ ಕಲಾವಿದರು ಇಂಥ ಖಡಕ್ ಪಾತ್ರಗಳನ್ನು ಮಾಡಬೇಕು’ ಎಂದು ಶುಭ ಕೋರಿದರು.
‘ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರದ ಛಾಯಾಗ್ರಾಹಕರು ಕೊಟ್ಟಧೈರ್ಯದಿಂದಲೇ ಈ ಚಿತ್ರದಲ್ಲಿ ನನ್ನ ಪಾತ್ರ ನಿಭಾಯಿಸುವುದಕ್ಕೆ ಸಾಧ್ಯವಾಯಿತು. ಪ್ರಸಕ್ತ ಸಾಮಾಜಿಕ ವಿಷಯಗಳು, ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟುಗಂಭೀರ ವಿಷಯಗಳನ್ನು ಕಮರ್ಷಿಯಲ… ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಸಾಹಸ ದೃಶ್ಯಗಳು ನೈಜವಾಗಿ ಬರಬೇಕೆಂದು ಡ್ಯೂಪ್ ಬಳಸದೆ ಇರುವುದರಿಂದ ತರಬೇತಿ ಪಡೆದು ಚಿತ್ರದಲ್ಲಿ ನಟಿಸಿದ್ದೇನೆ. ಇದಕ್ಕೆ ನನಗೆ ಐಎಎಸ್ ಅಧಿಕಾರಿ ರೂಪ ಪ್ರೇರಣೆಯಾಗಿದ್ದರು’ ಎಂದರು ಪ್ರಿಯಾಂಕ ಉಪೇಂದ್ರ.
ಸಸ್ಪೆನ್ಸ್ ಥ್ರಿಲ್ಲರ್ 1980ರಲ್ಲಿ ಪ್ರಿಯಾಂಕ ಉಪೇಂದ್ರ..! ಕೊಡಗಿನಲ್ಲಿ ಶೂಟಿಂಗ್
ಗುರುಮೂರ್ತಿ ಚಿತ್ರದ ನಿರ್ದೇಶಕ. ಎಸ್‌ಜಿ ಸತೀಶ್ ನಿರ್ಮಾಪಕ. ವೀಣಾ ನಂದಕುಮಾರ್ ಚಿತ್ರದ ಛಾಯಾಗ್ರಾಹಕರು. ಕಿನ್ನಾಳ್ ರಾಜ್ ಸಂಭಾಷಣೆ ಬರೆದಿದ್ದಾರೆ. ಇಲ್ಲಿಯವರೆಗೆ ಶೇ.30ರಷ್ಟುಚಿತ್ರೀಕರಣ ಮುಗಿದಿದೆ. ಸತ್ಯಪ್ರಕಾಶ್, ಸುಮನ್ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.