
'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಬ್ಬ ಕಲಾವಿದ ಯುವ ರಾಜ್‌ಕುಮಾರ್. ಟೀಸರ್ ಹಾಗೂ ಶೀರ್ಷಿಕೆ ರಿಲೀಸ್ ಮಾಡುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಪರಭಾಷೆ ಕಲಾವಿದರಿಂದಲೂ ಶುಭಾಶಯಗಳು ಹರಿದು ಬರುತ್ತಿದ್ದು, ಮೆಗಾಸ್ಟಾರ್ ಮಾತ್ರ ಟೀಸರ್ ಹಾಗೂ ಚಿತ್ರದ ಪ್ರತಿಯೊಂದೂ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮೆಗಾ ಸ್ಟಾರ್ ಚಿರಂಜೀವಿ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದ್ದು, ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಅದಕ್ಕೂ ಮೊದಲೇ ಬಿಡುವಾದ ಸಮಯದಲ್ಲಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರಾಜ್ಯೋತ್ಸವದಂದೇ ಯುವರಾಜನ ಭರ್ಜರಿ ಎಂಟ್ರಿ; ರಾಘಣ್ಣ ಪುತ್ರನ ಜೊತೆ ಸಂದರ್ಶನ!
ಚಿರು ಮಾತು:
'ಯುವ ಐತಿಹಾಸಿಕ ಕಥೆ ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ದೊಡ್ಡ ಸವಾಲು. ಇದನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಇದೆ. ಅವರ ತಂಡಕ್ಕೆ ತುಂಬಾ ಒಳ್ಳೆಯದಾಗಲಿ. ಲೆಜೆಂಡರಿ ನಟ, ಅವರ ಮೊಮ್ಮಗ ಎಂಬ ದೊಡ್ಡ ಜವಾಬ್ದಾರಿ ಯುವ ಮೇಲಿದೆ. ಚಿತ್ರಕ್ಕೆ ಅದ್ಭುತ ತಯಾರಿ ಮಾಡಿಕೊಂಡಿದ್ದಾರೆ. ಖಂಡಿತವಾಗಿಯೂ ಈ ಸಿನಿಮಾ ಮೈಲಿಗಲ್ಲು ಸೃಷ್ಟಿಸುತ್ತದೆ. ರಾಜ್‌ಕುಮಾರ್ ಅವರ ಪರಂಪರೆ ಹಾಗೆಯೇ ಮುಂದರಿಯಲಿದೆ,' ಎಂದು ಚಿರಂಜೀವಿ ಮಾತನಾಡಿದ್ದಾರೆ.
ಟೀಸರ್ ರಿಲೀಸ್ ಆದ ಕೆಲವು ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಡೈಲಾಗ್ ಡೆಲಿವರಿ ಹಾಗೂ ಫೈಟ್ ಎರಡೂ ಟೀಸರ್‌ನಲ್ಲಿ ಅತ್ಯುತ್ತಮವಾಗಿ ತೋರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.