ಗಂಡನ ಬಿಟ್ಟು ಬರಲಾರೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಭಾರತದಲ್ಲೇ ಇದ್ದಾರೆ ಏಕೆ?

Published : Jan 17, 2025, 07:04 PM ISTUpdated : Jan 17, 2025, 07:07 PM IST
ಗಂಡನ ಬಿಟ್ಟು ಬರಲಾರೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಭಾರತದಲ್ಲೇ ಇದ್ದಾರೆ ಏಕೆ?

ಸಾರಾಂಶ

ಹಾಲಿವುಡ್‌ನಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಮತ್ತೆ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಝೋಯಾ ಅಖ್ತರ್ ಚಿತ್ರದಲ್ಲಿ ಆಲಿಯಾ, ಕರೀನಾ ಜೊತೆ ನಟಿಸಲಿದ್ದು, ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ ಚಿತ್ರದಲ್ಲೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಾಲಿವುಡ್ ಯೋಜನೆಗಳ ಜೊತೆಗೆ ಭಾರತೀಯ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಗ್ಗೆ ಹೊಸದಾಗಿ ಹೇಳೋದೇನಿಲ್ಲ! ದಶಕಗಳ ಹಿಂದೆ ಬಾಲಿವುಡ್ ಸ್ಟಾರ್ ನಟಿಯಾಗಿದ್ದವರು ಪ್ರಿಯಾಂಕಾ. 2018ರಲ್ಲಿ ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಜೊತೆ ಮದುವೆ ಮಾಡಿಕೊಂಡು, ಬಾಲಿವುಡ್‌ನಿಂದ ಮರೆಯಾದರು. ಸ್ವಲ್ಪ ವರ್ಷಗಳ ಗ್ಯಾಪ್ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಸಿನಿಮಾ ಹಾಗೂ ವೆಬ್ ಸಿರೀಸ್‌ನಲ್ಲಿ ನಟಿಸತೊಡಗಿದರು. ಭಾರತದಲ್ಲಿ ಸಾಕಷ್ಟು ಆಫರ್ಸ್ ಕೊಟ್ಟರೂ ಅದ್ಯಾಕೋ ಅವರು ಇಲ್ಲಿನ ಚಿತ್ರಗಳಿಗೆ ಸಹಿ ಹಾಕಿರಲೇ ಇಲ್ಲ. 

ಆದರೆ, ಈಗ ನಟಿ ಪ್ರಿಯಾಂಕಾ ಚೋಪ್ರಾ ಅವರು ಮನಸ್ಸು ಬದಲಾಯಿಸಿದ್ದಾರೆ ಎನ್ನಬಹುದು. ಈ ಮೊದಲು ಗಂಡ ನಿಕ್ ಜೊನಾಸ್ ಬಿಟ್ಟು ಅಮೆರಿಕಾದಿಂದ ಭಾರತಕ್ಕೆ ಬಂದು ಶೂಟಿಂಗ್‌ನಲ್ಲಿ ಭಾಗವಹಿಸಲಾರೆ ಎಂದಿದ್ದ ಪ್ರಿಯಾಂಕಾ, ಈಗ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಹಾಲಿವುಡ್‌ನಲ್ಲಿ ಎರಡು ಸಿನಿಮಾಗಳಲ್ಲಿ ಹಾಗೂ ವೆಬ್ ಸಿರೀಸ್‌ನಲ್ಲಿ ನಟಿಸಿ ಅಲ್ಲಿ ಕೂಡ ಹೆಸರು ಮಾಡುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ. ಆದರೆ, ತವರುಮನೆ ಭಾರತವನ್ನೂ ಬಿಡಲಾರೆ ಎಂದು ಓಘ ಘೋಷಣೆ ಮಾಡಿದ್ದಾರೆ ಎನ್ನಬಹುದೇ?

ಮಹೇಶ್‌ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ನಟನೆ: ರಾಜಮೌಳಿ ಹೊಸ ಸಿನಿಮಾಗಾಗಿ ಮುತ್ತಿನ ನಗರಿಗೆ ಬಂದಿಳಿದ ನಟಿ

ಹೌದು, ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್‌ ಸಿನಿಮಾಗಳಿಗೆ ಕೂಡ ಡೇಟ್ಸ್ ಕೊಟ್ಟಿದ್ದಾರೆ. ಝೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಕಪೂರ್ ಅವರುಗಳ ಜೊತೆಗೆ ಸಿನಿಮಾ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ. ಹಿಂದಿಯ ಇನ್ನೊಂದು ಸಿನಿಮಾ ಮಾತುಕಥೆ ಕೂಡ ನಡೆಯುತ್ತಿದೆ ಎನ್ನಲಾಗಿದೆ. ಇದೀಗ, ಟಾಲಿವುಡ್‌ ಕಡೆ ಕೂಡ ಪ್ರಿಯಾಂಕಾ ಚೋಪ್ರಾ ಮುಖ ಮಾಡಿರುವುದು ಹೆಚ್ಚುಕಡಿಮೆ ಪಕ್ಕಾ ಆಗಿದೆ. 

ಇನ್ನು, ನಟಿ ಪ್ರಿಯಾಂಕಾ ಚೋಪ್ರಾ ಕೈನಲ್ಲಿರುವ ಸಿನಿಮಾಗಳ ಬಗ್ಗೆ ಹೇಳಬೇಕೆಂದರೆ, ಸದ್ಯ ಎರಡು ಹಾಲಿವುಡ್ ಪ್ರಾಜೆಕ್ಟ್​ಗಳಲ್ಲಿ ಈ ನಟಿ ಬ್ಯುಸಿಯಾಗಿದ್ದಾರೆ. ಒಂದು ಆಕ್ಷನ್ ವೆಬ್ ಸೀರೀಸ್, ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಇವುಗಳ ಜೊತೆ ಝೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಕಪೂರ್ ಅವರುಗಳ ಜೊತೆಗೆ ಸಿನಿಮಾ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ. 

ಹಳ್ಳಿ ಹೈದ, ಬಿಗ್ ಬಾಸ್ ಹನುಮಂತನಿಗೆ ಇದೊಂದು ದುಶ್ಚಟ ಇದ್ಯಂತೆ ಹೌದಾ?

ಇದೀಗ, ಟಾಲಿವುಡ್ ವಿಶ್ವಪ್ರಸಿದ್ಧ ನಿರ್ದೇಶಕರು, ಆರ್‌ಆರ್‌ಆರ್‌ ಸಿನಿಮಾ ಖ್ಯಾತಿಯ ಎಸ್ ರಾಜಮೌಳಿ ಸಿನಿಮಾಗೆ ನಟಿ ಪ್ರಿಯಾಂಕಾ ಚೋಪ್ರಾ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿಯ ಮುಂದಿನ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಂತೆ. ಅದೇ ಸಿನಿಮಾದ ಕಾರಣಕ್ಕಾಗಿ ಈಗ ಪ್ರಿಯಾಂಕಾ ಚೋಪ್ರಾ ಹೈದರಾಬಾದ್​ಗೆ ಬಂದಿಳಿದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಕೆಲ ದಿನಗಳ ಹಿಂದಷ್ಟೆ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನೆರವೇರಿದೆ. 

ಈ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಸಿನಿಮಾದ ಫೋಟೊಶೂಟ್​ಗಾಗಿ ಈಗ ಅವರು ಹೈದರಾಬಾದ್​ಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೆ ಮುಂಚೆ ಎಲ್ಲ ನಟರಿಗೂ ರಾಜಮೌಳಿ ತಾಲೀಮು ಮಾಡಿಸುತ್ತಿದ್ದಾರೆ ಎನ್ನಲಾಗಿದೆ. 

ಗೋಲಿ ಸೋಡಾಕ್ಕೆ ಗಂಟುಬಿದ್ದು ಯಾಕಷ್ಟು ಹಠ ಮಾಡಿದ್ರಂತೆ ವಿಷ್ಣುವರ್ಧನ್?

ಈ ಟ್ರೇನಿಂಗ್‌ನಲ್ಲಿ ಪಾಲ್ಗೊಳ್ಳಲು ನಟಿ ಪ್ರಿಯಾಂಕಾ ಇದೀಗ ಹೈದರಾಬಾದ್​ಗೆ ಬಂದಿದ್ದಾರೆ. ಅಂತೂ ಇಂತೂ ಮತ್ತೆ ನಟಿ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರಗಳಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ. ಅವರ ಅಭಿಮಾನಿಗಳಿಗೆ ಖಂಡಿತ ಇದು ಖುಷಿ ಕೊಡುವ ಸಮಾಚಾರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?