ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಪ್ರೇಮದ ಊರಲಿ ನಟಿ ತಪಸ್ವಿನಿ ಪೂಣಚ್ಚ, ಯಾವಾಗ?

Published : Nov 16, 2026, 11:45 AM IST
Premada Oorali Star Thapaswini Poonacha

ಸಾರಾಂಶ

ಪ್ರೇಮದ ಊರಲಿ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ನಟಿ ತಪಸ್ಪಿನಿ ಪೂಣಚ್ಚ ಇದೀಗ ಅಭಿಮಾನಿಗಳಿಗೆ ಹೊಸ ಉಡುಗೊರೆ ನೀಡುತ್ತಿದ್ದಾರೆ. ಈ ಬಾರಿ ಫುಲ್ ಡಿಫ್ರೆಂಟ್. ಏನಿದು ತಪಸ್ಪಿನಿ ಪೂಣಚ್ಚ ನೀಡುವ ಗಿಫ್ಟ್?

ಬೆಂಗಳೂರು (ನ.16) ಪ್ರೇಮದ ಊರಲಿ ಸಿನಿಮಾ ಹಲವು ದಾಖಲೆ ಪುಡಿ ಮಾಡಿ ಭರ್ಜರಿ ಯಶಸ್ಸು ಕಂಡ ಸಿನಿಮಾ ಗರಿಷ್ಠ ಲಾಭಗಳಿಸಿದ ಕನ್ನಡ ಸಿನಿಮಾಗಳ ಪೈಕಿ ಪ್ರೇಮದ ಊರಲಿ ಮುಂಚೂಣಿಯಲ್ಲಿದೆ. ಪ್ರೇಮದ ಊರಲಿ ಸಿನಿಮಾದ ಯಶಸ್ಸಿನಲ್ಲಿರುವ ನಟಿ ತಪಸ್ಪಿನಿ ಪೂಣಚ್ಚ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡುತ್ತಿದ್ದಾರೆ. ಹೌದು, ಕಾಮಿಡಿ, ಫ್ಯಾಮಿಲಿ ಡ್ರಾಮಾ ಸೇರಿದಂತೆ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಕತೆಯ ಮಿಸ್ಟರ್ ಜ್ಯಾಕ್ ಸಿನಿಮಾ ಮೂಲಕ ತಪಸ್ಪಿನಿ ಅಭಿಮಾನಿಗಳಿಗೆ ಉಡುಗೊರೆ ನೀಡಲು ಮುಂದಾಗಿದ್ದಾರೆ.

ಡಿಸೆಂಬರ್ 4ಕ್ಕೆ ಫ್ಯಾನ್ಸ್‌ಗೆ ಗಿಫ್ಟ್

ಪ್ರೇಮದ ಊರಲಿ ಸಿನಿಮಾ ನಟಿ ತಪಸ್ಪಿನಿ ಪೂಣಚ್ಚ ಹಾಗೂ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಜೊತೆಗೆಯಾಗಿ ಮಿಸ್ಟರ್ ಜ್ಯಾಕ್ ಸಿನಿಮಾ ಮೂಲಕ ಬರುತ್ತಿದ್ದಾರೆ.ಮಿಸ್ಟರ್ ಜ್ಯಾಕ್ ಸಿನಿಮಾ ಡಿಸೆಂಬರ್ 4ರಂದು ತೆರೆ ಕಾಣಗಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರೇಮದ ಊರಲಿ ಸಿನಿಮಾದಲ್ಲಿ ತಪಸ್ಪಿನಿ ನಟನೆ, ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೀಗ ಮಿಸ್ಟರ್ ಜ್ಯಾಕ್ ಸಿನಿಮಾದಲ್ಲಿ ಭಿನ್ನ ಪಾತ್ರ ಮಾಡಿದ್ದಾರೆ. ಈ ಪಾತ್ರ ಕೂಡ ಅಭಿಮಾನಿಗಳ ಇಷ್ಟಪಡುತ್ತಾರೆ ಅನ್ನೋ ವಿಶ್ವಾಸ ತಪಸ್ಪಿನಿಗಿದೆ.

ಮಿಸ್ಟರ್ ಜ್ಯಾಕ್ ಅನ್ನೋ ಸ್ಟಾಂಡ್ ಅಪ್ ಕಾಮಿಡಿಯನ್ ಆಧಾರಿತ ಕತೆ ಇದಾಗಿದೆ. ಕಾಮಿಡಿ, ಫ್ಯಾಮಿಲಿ ಡ್ರಾಮಾ, ಸೆಂಟಿಮೆಂಟ್, ಮದುವೆ-ಸಂಸಾರ ಸೇರಿದಂತೆ ಹಲವು ರೀತಿಯಲ್ಲಿ ಜನರಿಗೆ ಕನೆಕ್ಟ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಅಭಿಮಾನಿಗಳು ಇದೀಗ ತಪಸ್ಪಿನಿ ಪೂಣಚ್ಚ ಮುಂದಿನ ಸಿನಿಮಾ ನೋಡಲು ಕಾತರರಾಗಿದ್ದಾರೆ. ಅತ್ಯಂತ ಸರಳ ಆದರೆ ಅದ್ಧೂರಿ, ಶ್ರೀಮಂತಿಯ ಸಿನಿಮಾ ನೀಡಿದ ತಪಸ್ಪಿನಿ ಪೂಣಚ್ಚ ಮುಂದಿನ ಸಿನಿಮಾ ಮಿಸ್ಟರ್ ಜ್ಯಾಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಪಾತ್ರಗಳ ಆಯ್ಕೆ ಹೇಗೆ

ತಪಸ್ಪಿನಿ ಪೂಣಚ್ಚ ಪಾತ್ರದ ಆಯ್ಕೆಯಲ್ಲಿ ಹೆಚ್ಚು ಗಮನವಹಿಸುತ್ತಾರೆ. 2022ರಲ್ಲಿ ತೆರೆಕಂಡ ರಿಷಬ್ ಶೆಟ್ಟಿಯ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ತಪಸ್ಪಿನಿ ಪಾತ್ರ ಎಲ್ಲರ ಗಮನಸೆಳೆದಿತ್ತು. ಪ್ರತಿ ಪಾತ್ರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವ ತಪಸ್ಪಿನಿ ಪೂಣಚ್ಚ ಗಜರಾಮಾ ಸಿನಿಮಾದಲ್ಲಿ ಲೀಡ್ ರೋಲ್ ಮೂಲಕ ಕಾಣಿಸಿಕೊಂಡರು. 2025ರಲ್ಲಿ ಮಿಸ್ಟರ್ ಜ್ಯಾಕ್ ಹಾಗೂ ಪ್ರೇಮದ ಊರಲಿ ಸಿನಿಮಾ ಸಹಿ ಮಾಡಿ ಸಕ್ರಿಯವಾಗಿದ್ದಾರೆ. ಈ ಪೈಕಿ ಪ್ರೇಮದ ಊರಲಿ ಸಿನಿಮಾ ತೆರೆಕಂಡು ಭರ್ಜರಿ ಯಶಸ್ವಿಯಾಗಿದೆ. ಇದೀಗ ಮಿಸ್ಟರ್ ಜ್ಯಾಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಸಂದರ್ಶನದಲ್ಲಿ ಹಲವು ಬಾರಿ ತಮ್ಮ ಪಾತ್ರದ ಆಯ್ಕೆ ಕುರಿತು ತಪಸ್ಪಿನಿ ಪೂಣಚ್ಚ ಮಾತನಾಡಿದ್ದಾರೆ. ಪಾತ್ರ ಇಷ್ಟವಾಗಿಲ್ಲ, ಕತೆ ಇಷ್ಟವಾಗಿಲ್ಲ ಎಂದರೆ ಹಣದ ಬಗ್ಗೆ ಯೋಚನೆ ಮಾಡುವುದಿಲ್ಲ, ನೇರವಾಗಿ ನೋ ಎಂದುಬಿಡುತ್ತೇನೆ ಎಂದು ತಪಸ್ಪಿನಿ ಹೇಳಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬಬೇಕು. ನನಗೆ ಆಫರ್ ಮಾಡುವ ಪಾತ್ರ ಏನು, ಕತೆ ಹೇಗಿದೆ ಅನ್ನೋದು ತಿಳಿದುಕೊಳ್ಳುತ್ತೇನೆ. ಬಳಿಕ ಬರೆದಿರುವ ಪಾತ್ರಕ್ಕೆ ನಾನು ಯಾವ ರಿಂದಿ ಹೂಂದಿಕೊಳ್ಳುತ್ತೇನೆ ಅನ್ನೋದು ನೋಡುತ್ತಿದೆ. ಎಲ್ಲವೂ ಒಕೆ ಎಂದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದು ತಪಸ್ಪಿನಿ ಪೂಣಚ್ಚ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿರೀಟಿ ರೆಡ್ಡಿ'ಜೂನಿಯರ್' ಚಿತ್ರಕ್ಕೆ ಬೆಸ್ಟ್ ಡೆಬ್ಯೂ 'ಸೈಮಾ' ಪ್ರಶಸ್ತಿ; ಅಪ್ಪ ಜನಾರ್ದನ ರೆಡ್ಡಿ ಹೇಳಿದ್ದೇನು?
ಡಾ. ರಾಜ್​ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾದ ಯಾರಿಗೂ ತಿಳಿಯದ ರಹಸ್ಯ ತೆರೆದಿಟ್ಟ ನಟಿ ಅರ್ಚನಾ