
ಸ್ಯಾಂಡಲ್‌ವುಡ್‌ನಲ್ಲಿ ಈಗ ಶಿವಣ್ಣ ಅಭಿಮಾನಿಗಳಿಗೆ ಸಖತ್ ಖುಷಿ ಕೊಡುವ ಸುದ್ದಿಯೊಂದು ಹೊರಬಿದ್ದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೆ ಬಳೆಗಾರನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಹೊಸಬರ ಚಿತ್ರದ ಹಾಡಿನಲ್ಲಿ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಅಂದಹಾಗೆ, ಈ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿರುವುದು ಧೀರೆನ್ ರಾಜ್‌ಕುಮಾರ್ ಹಾಗೂ ಅಮೃತಾ ಪ್ರೇಮ್ ನಟನೆಯ ‘ಪಬ್ಬಾರ್’ ಸಿನಿಮಾ!
ಹೌದು, ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ಲಾಲಿ ಹಾಡು ಬಿಡುಗಡೆಯಾಗಿದೆ. ಸರಿಗಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿನಲ್ಲಿ ಶಿವಣ್ಣ ಅವರ ವಿಶೇಷ ಪಾತ್ರ ಅಭಿಮಾನಿಗಳ ಗಮನ ಸೆಳೆದಿದೆ. 2009ರಲ್ಲಿ ಬಿಡುಗಡೆಯಾಗಿದ್ದ ‘ಭಾಗ್ಯದ ಬಳೆಗಾರ’ ಸಿನಿಮಾದಲ್ಲಿ ಬಳೆಗಾರನಾಗಿ ಮೋಡಿ ಮಾಡಿದ್ದ ಶಿವಣ್ಣ, ಇದೀಗ ಸುಮಾರು 17 ವರ್ಷಗಳ ನಂತರ ಮತ್ತೊಮ್ಮೆ ಅದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಬಳೆಗಾರನಾಗಿ ಬಂದ ಶಿವಣ್ಣನ ಕಂಡು ಫ್ಯಾನ್ಸ್ ಫಿದಾ!
‘ಭಾಗ್ಯದ ಬಳೆಗಾರ’ ಸಿನಿಮಾದಲ್ಲಿ ಬಳೆಗಾರನ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಶಿವಣ್ಣ, ‘ಪಬ್ಬಾರ್’ ಚಿತ್ರದ ಲಾಲಿ ಹಾಡಿನಲ್ಲೂ ಬಳೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ನಟಿ ಅಮೃತಾ ಪ್ರೇಮ್ ಅವರೊಂದಿಗೆ ತೆರೆ ಹಂಚಿಕೊಂಡು ಹೆಜ್ಜೆ ಹಾಕಿದ್ದಾರೆ. ಈ ವಿಶೇಷ ಕಾಂಬಿನೇಷನ್ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವಾಗಿ, ರಾಜ್‌ಕುಮಾರ್ ಕುಟುಂಬದ ಕುಡಿ ಧೀರೆನ್ ರಾಜ್‌ಕುಮಾರ್ ನಾಯಕನಾಗಿರುವ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.
ಶಿವಣ್ಣ ಜೊತೆ ಡ್ಯಾನ್ಸ್ ಮಾಡಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ
ಇನ್ನು ಶಿವರಾಜ್‌ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡು ನೃತ್ಯ ಮಾಡಿದ ಖುಷಿಯನ್ನು ನಟಿ ಅಮೃತಾ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವುಕ ಪೋಸ್ಟ್ ಬರೆದುಕೊಂಡಿರುವ ಅವರು, ಈ ಅನುಭವವನ್ನು ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
'ಇದು ನನ್ನ ಜೀವಮಾನದ ಅತ್ಯಂತ ಸ್ಮರಣೀಯ ಕ್ಷಣ. ಪದಗಳಲ್ಲಿ ಎಂದಿಗೂ ವರ್ಣಿಸಲು ಸಾಧ್ಯವಾಗದ ಅನುಭವವಿದು. ಕೆಲವು ಕ್ಷಣಗಳನ್ನು ಕೇವಲ ಅನುಭವಿಸಲು, ಸಂಭ್ರಮಿಸಲು ಮತ್ತು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಾಧ್ಯ' ಎಂದು ಅಮೃತಾ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಶಿವಣ್ಣ ಅವರ ಸರಳತೆ ಮತ್ತು ಉತ್ಸಾಹವನ್ನು ಮನಸಾರೆ ಹೊಗಳಿದ್ದಾರೆ. 'ಶಿವರಾಜ್‌ಕುಮಾರ್ ಸರ್, ನಿಮ್ಮ ಉತ್ಸಾಹ ಮತ್ತು ಸರಳ ಗುಣಕ್ಕೆ ನಿಜಕ್ಕೂ ಸಾಟಿಯೇ ಇಲ್ಲ. ನಿಮ್ಮೊಂದಿಗೆ ತೆರೆ ಹಂಚಿಕೊಳ್ಳುವುದು ಹಾಗೂ ಹೆಜ್ಜೆ ಹಾಕುವುದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ. ಇದು ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಸುಂದರ ಕ್ಷಣ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಸೇರಿದಂತೆ ಇಡೀ ತಂಡಕ್ಕೆ ಅಮೃತಾ ಧನ್ಯವಾದ!
ಈ ವಿಶೇಷ ಅವಕಾಶವನ್ನು ಕಲ್ಪಿಸಿಕೊಟ್ಟ ಚಿತ್ರತಂಡಕ್ಕೂ ಅಮೃತಾ ಪ್ರೇಮ್ ಕೃತಜ್ಞತೆ ಸಲ್ಲಿಸಿದ್ದಾರೆ. ನಿರ್ದೇಶಕ ಸಂದೀಪ್ ಸುಂಕದ್, ನೃತ್ಯ ಸಂಯೋಜಕ ರುದ್ರ ಮಾಸ್ಟರ್ ಹಾಗೂ ಇಡೀ ತಂಡಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಈ ಅನುಭವಕ್ಕಾಗಿ ತಾನು ಸದಾ ಚಿರಋಣಿಯಾಗಿರುವುದಾಗಿ ಹೇಳಿದ್ದಾರೆ.
ಇನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ‘ಪಬ್ಬಾರ್’ ಸಿನಿಮಾ ನಿರ್ಮಾಣವಾಗುತ್ತಿದೆ. ಪೂರ್ಣಿಮಾ ರಾಜ್‌ಕುಮಾರ್ ಅವರ ಪುತ್ರ ಧೀರೆನ್ ಆರ್. ರಾಜ್‌ಕುಮಾರ್ ಹಾಗೂ ನಟ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಂದೀಪ್ ಸುಂಕದ್ ನಿರ್ದೇಶನದ ಈ ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ಮಾಡಿದ್ದಾರೆ. 17 ವರ್ಷಗಳ ಬಳಿಕ ಮತ್ತೆ ಬಳೆಗಾರನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಶಿವಣ್ಣ ಹಾಗೂ ಅವರೊಂದಿಗೆ ಹೆಜ್ಜೆ ಹಾಕಿದ ಅಮೃತಾ ಪ್ರೇಮ್ ಅವರ ಸಂಭ್ರಮ ಸದ್ಯ ‘ಪಬ್ಬಾರ್’ ಚಿತ್ರದ ಲಾಲಿ ಹಾಡಿಗೆ ವಿಶೇಷ ಮೆರುಗು ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.